ತುಮಕೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ
ಇಲ್ಲವೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ
ಲಕ್ಷ್ಮೀ ಆರ್. ಹೆಬ್ಬಾಳಕರ್ ಹೇಳಿದರು.
ನಗರದ ಬಾಲಭವನ ಆವರಣದಲ್ಲಿಂದು ಮಹಿಳಾ ಮತ್ತು
ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಫಲಾನುಭವಿಗಳಿಗೆ ವಿವಿಧ
ಸವಲತ್ತುಗಳನ್ನು ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ
ಮಾತನಾಡಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿ
ಹೆಚ್ಚಳವಾಗಿದೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ
ಸಚಿವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ನಮ್ಮ ಸರ್ಕಾರ
ಶಿಸ್ತಿನ ಸರ್ಕಾರ. ಹಿಂದುಳಿದ ವರ್ಗಗಳ ನಾಯಕರಾದ
ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಉತ್ತಮ ಆಡಳಿತ ನೀಡುತ್ತಿದ್ದು,
ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದು ಯಶಸ್ವಿಯಾಗಿ
ಅನುಷ್ಠಾನಗೊಳಿಸಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ
ನಾಯಕನ ಬದಲಾವಣೆ ಇಲ್ಲವೆಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲೊAದಾದ
ಗೃಹಲಕ್ಷಿö್ಮ ಖಾತೆಗಳು ಡಿಲೀಟ್ ಆಗಿವೆ ಎನ್ನುವ ಆರೋಪಕ್ಕೆ
ಉತ್ತರಿಸಿದ ಸಚಿವರು, ಇದುವರೆಗೂ ಒಂದೇ ಒಂದು ಗೃಹಲಕ್ಷಿö್ಮ ಖಾತೆ
ಡಿಲೀಟ್ ಆಗಿಲ್ಲ. ಜಿಎಸ್‌ಟಿ, ಆದಾಯ ತೆರಿಗೆ ಪಾವತಿ ಮಾಡುವ
ಫಲಾನುಭವಿಗಳಿಗೆ ಗೃಹಲಕ್ಷಿö್ಮ ಯೋಜನೆಯಡಿ ಸೌಲಭ್ಯ ನೀಡಲು
ಅವಕಾಶವಿಲ್ಲವಾದ್ದರಿಂದ ನೋಂದಣಿ ಸಂದರ್ಭದಲ್ಲಿಯೇ ಅಂತಹವರ
ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ನೋಂದಣಿಯಾದ ಬಳಿಕ
ಡಿಲೀಟ್ ಮಾಡಲಾಗಿಲ್ಲ ಎಂದು ತಿಳಿಸಿದರಲ್ಲದೆ, ಎಲ್ಲಾ ಜಿಲ್ಲೆಗಳಿಗೂ
ಗೃಹಲಕ್ಷಿö್ಮ ಖಾತೆಯ ೧೧ನೇ ಕಂತಿನ ಹಣ ಬಿಡುಗಡೆಯಾಗಿದ್ದು,
ಶೀಘ್ರವೇ ೧೨ ಹಾಗೂ ೧೩ನೇ ಕಂತಿನ ಹಣ ಬಿಡುಗಡೆ
ಮಾಡಲಾಗುವುದೆಂದು ಹೇಳಿದರು.
![ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ 2 PHOTO 2024 09 03 12 26 00](https://infojournalist.in/wp-content/uploads/2024/09/PHOTO-2024-09-03-12-26-00-1024x683.jpg)
ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಪಾವತಿ
ವಿಳಂಬವಾಗುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ
ಪ್ರತಿಕ್ರಿಯಿಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ
ಅನುದಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಪಾವತಿ
ಮಾಡಲಾಗುತ್ತಿದ್ದು, ವೇತನ ಪಾವತಿ ವಿಳಂಬ ಸಮಸ್ಯೆ
ಆಗುತ್ತಿರುವುದು ಇದೇ ಮೊದಲಲ್ಲ. ಕೇಂದ್ರ ಸರ್ಕಾರದಿಂದ
ಅನುದಾನ ಬಿಡುಗಡೆ ಮಾಡಿದಾಗ ರಾಜ್ಯ ಸರ್ಕಾರದ ಮೊತ್ತ ಸೇರಿಸಿ
ವೇತನ ನೀಡಲಾಗುತ್ತಿದ್ದು, ಕೇಂದ್ರದಿAದ ಹಣ ಇನ್ನೂ ಬಂದಿಲ್ಲದೆ
ಇರುವುದರಿAದ ವೇತನ ಪಾವತಿ ವಿಳಂಬವಾಗಿದೆ. ಅಂಗನವಾಡಿ
ಕಾರ್ಯಕರ್ತೆಯರ ವೇತನಕ್ಕೆ ಸಂಬAಧಿಸಿದAತೆ ಈಗಾಗಲೇ
![ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ 3 PHOTO 2024 09 03 12 26 07](https://infojournalist.in/wp-content/uploads/2024/09/PHOTO-2024-09-03-12-26-07-1024x683.jpg)
ಕೇಂದ್ರಕ್ಕೆ ಮರ‍್ನಾಲ್ಕು ಬಾರಿ ಪತ್ರ ಬರೆಯಲಾಗಿದೆ.
ಗಣಪತಿ
ಹಬ್ಬದೊಳಗೆ ವೇತನ ನೀಡಲು ಪ್ರಯತ್ನಿಸಲಾಗುವುದು ಎಂದು
ಸಚಿವೆ ಲಕ್ಷಿö್ಮÃ ಹೆಬ್ಬಾಳಕರ್ ಹೇಳಿದರು.
ಸಚಿವರಿಗೆ ಪೂರ್ಣ ಕುಂಭದ ಸ್ವಾಗತ
ಇದಕ್ಕೂ ಮುನ್ನ ಸಚಿವರನ್ನು ಮಹಾತ್ಮ ಗಾಂಧಿ ರಸ್ತೆ
ಅಂಬೇಡ್ಕರ್ ಭವನದಿಂದ ಬಾಲಭವನದವರೆಗೆ ಹೂವಿನ ಮಳೆ ಸುರಿಸಿ
ಪೂರ್ಣ ಕುಂಭದಿAದ ಸ್ವಾಗತ ಮಾಡಲಾಯಿತು.
ನಂತರ ಸಚಿವರು ೧೧ ಗರ್ಭಿಣಿ ಸ್ತಿçÃಯರಿಗೆ ಮಡಿಲು ತುಂಬುವ
ಮೂಲಕ ಸೀಮಂತ ಕಾರ್ಯಕ್ರಮ ನೆರವೇರಿಸಿದರಲ್ಲದೆ, ೫ ಮಂದಿ
ವಿಕಲಚೇತನರಿಗೆ ಸಾಂಕೇತಿಕವಾಗಿ ತ್ರಿಚಕ್ರ ಯಂತ್ರಚಾಲಿತ
ವಾಹನವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಹಾಗೂ ಮಹಿಳಾ ಮತ್ತು
ಮಕ್ಕಳ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್, ಜಿಲ್ಲಾ
ವಿಕಲಚೇತನರ ಕಲ್ಯಾಣ ಇಲಾಖೆ ಅಧಿಕಾರಿ ಶಿಲ್ಪ ದೊಡ್ಡಮನಿ ಸೇರಿದಂತೆ
ಮತ್ತಿತರರು ಹಾಜರಿದ್ದರು.