ಹಿರಿಯ ಪತ್ರಕರ್ತ ಜಿ.ಎಲ್ ಸುರೇಶ್ ನಿಧನ ಕುರಿತು ಸಂತಾಪ ಕಾರ್ಯಕ್ರಮ..
ಕೊರಟಗೆರೆ:- ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗ ೪ನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಪತ್ರಕರ್ತರಿಗೆ ಮುಖ್ಯವಾಗಿ ಜೀವನಕ್ಕೆ ಭದ್ರತೆ ಇಲ್ಲದಿರುವುದು ವಿಷಾಧನೀಯ ಎಂದು ತುಮಕೂರು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ ಪುರುಷೋತ್ತಮ್ ಬೇಸರವನ್ನು ವ್ಯಕ್ತಪಡಿಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಕಚೇರಿಯಲ್ಲಿ ಹಿರಿಯ ಪತ್ರಕರ್ತ ಜಿ.ಎಲ್ ಸುರೇಶ್ ಅಕಾಲಿಕ ಮರಣದ ಹಿನ್ನೆಲೆ ಆಯೋಜಿಸಲಾದ ಸಂತಾಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಯಾವುದೇ ಸರ್ಕಾರ ಬರಲಿ ಪತ್ರಕರ್ತರಿಗೆ ಮಾತ್ರ ಭದ್ರತೆ ಸಿಗುತ್ತಿಲ್ಲ. ಗ್ರಾಮೀಣ ಭಾಗದ ಪತ್ರಕರ್ತರು ವೃತ್ತಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಯಾರು ಸಹ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸರ್ಕಾರಕ್ಕೆ ಪತ್ರಕರ್ತರು ಕೇಳಿದ ಯಾವುದೇ ಬೇಡಿಕೆ ಈಡೇರಿಲ್ಲ ಎಂದು ಹೇಳಿದರು.
ಪತ್ರಕರ್ತರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾದರೆ ಪತ್ರಕರ್ತರೇ ನೋಡಿಕೊಳ್ಳುತ್ತಿದ್ದೇವೆ. ರಾಜ್ಯದಲ್ಲಿ ಯಾವುದೇ ಪತ್ರಕರ್ತರು ನಿಧನ ಅಥವಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಸಹಕಾರಕ್ಕೆ ಸರ್ಕಾರ ನಿಲ್ಲಬೇಕಿದೆ. ಇತ್ತೀಚಿಗೆ ಕೊರಟಗೆರೆ ಹಿರಿಯ ಪತ್ರಕರ್ತ ಜಿ.ಎಲ್ ಸುರೇಶ್ ಅನಾರೋಗ್ಯಕ್ಕೆ ತುತ್ತಾಗಿರುವುದು ನಿಜಕ್ಕೂ ಶೋಚನೀಯ ಇದರಿಂದ ಸಂಘಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಕುಟುಂಬಕ್ಕೆ ದುಃಖ ಬರಿಸುವಂತಹ ಶಕ್ತಿ ನೀಡಲಿ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಇ ರಘುರಾಮ್ ಮಾತನಾಡಿ, ಪತ್ರಕರ್ತರ ಬದುಕು ಭದ್ರತೆಯಿಲ್ಲದ ಜೀವನ. ಆಗಾಗಿ ಪತ್ರಕರ್ತರು ವೃತ್ತಿಯ ಜೊತೆಗೆ ಆದಷ್ಟು ಆರೋಗ್ಯದ ಕಡೆ ಹೆಚ್ಚಿನ ನಿಗಾವಹಿಸಬೇಕಿದೆ. ಸರ್ಕಾರದಲ್ಲಿ ಪತ್ರಕರ್ತರ ಭದ್ರತೆಗಾಗಿ ಹಲವಾರು ಬೇಡಿಕೆಗಳನ್ನು ಇಟ್ಟಿದ್ದೇವು, ಅದು ಬೇಡಿಕೆಗಷ್ಟೆ ಸೀಮಿತವಾಗಿದೆ. ಕೂಡಲೇ ಸರ್ಕಾರ ಪತ್ರಕರ್ತರ ಜೀವನಕ್ಕೆ ಭದ್ರತೆ ನೀಡಬೇಕು. ಹಿರಿಯ ವಯಸ್ಸಿನಲ್ಲಿಯೂ ಜಿ.ಎಲ್ ಸುರೇಶ್‌ರವರು ಪತ್ರಿಕೆ ವಿತರಣೆಯ ಜೊತೆಗೆ ವರದಿಗಾರರಾಗಿಯು ಪತ್ರಿಕಾರಂಗಕ್ಕೆ ಸೇವೆ ಸಲ್ಲಿಸಿದ್ದು ಇವರು ನಿಧನದಿಂದ ಸಂಘಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಹೇಳಿದರು.
ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ ಪುರುಷೋತ್ತಮ್ ಮಾತನಾಡಿ, ಪರ್ತಕರ್ತರ ಜೀವನ ನಿಜಕ್ಕೂ ಕಷ್ಟಕರ. ಪತ್ರಕರ್ತರು ಎಷ್ಟೇ ಒತ್ತಡದಲ್ಲಿದರೂ ವೃತ್ತಿಯಲ್ಲಿ ಪ್ರಮಾಣಿಕ ಸೇವೆ ಸಲ್ಲಿಸುತ್ತಿದೆ. ನನ್ನ ಪತ್ರಿಕಾ ವೃತ್ತಿ ಜೀವನದಲ್ಲಿ ಸರ್ಕಾರದಿಂದ ಈವೆರಗೂ ಯಾವುದೇ ಭದ್ರತಾ ಸೌಲಭ್ಯ ಸಿಕ್ಕಿಲ್ಲ. ಪತ್ರಕರ್ತರು ಇತ್ತೀಚಿಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು ಪತ್ರಕರ್ತರಿಗೆ ಸರ್ಕಾರದ ಭದ್ರತಾ ಸೌಲಭ್ಯ ಅವಶ್ಯಕವಾಗಿದೆ. ಹಿರಿಯ ಪತ್ರಕರ್ತರಾದ ಜಿ.ಎಲ್ ಸುರೇಶ್ ಸಂಘದ ಪ್ರತಿಯೊಬ್ಬರ ಜೊತೆಯೂ ವಿನಯದಿಂದಲೇ ನಡೆದುಕೊಳ್ಳುತ್ತಿದ್ದರು., ಅಕಾಲಿಕ ಮರಣವೊಂದಿ ಇಂದು ಅವರು ನಮ್ಮೊಂದಿಗೆ ಇಲ್ಲ ಎಂದು ವಿಷಾದವನ್ನು ವ್ಯಕ್ತಪಡಿಸಿದರು.
ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ತಾಲೂಕು ಪತ್ರಕರ್ತರ ಸಂಘವು ಪರ್ತಕರ್ತ ಜಿ.ಎಲ್ ಸುರೇಶ್ ನಿಧನದ ಹಿನ್ನೆಲೆ ಸಂತಾಪ ಸೂಚಿಸಿ ಸಂಕಷ್ಟದ ಸಿಲುಕಿದ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದಲಿಂಗಸ್ವಾಮಿ, ಕಾರ್ಯದರ್ಶಿ ರಂಗಧಾಮಯ್ಯ, ಜಿಲ್ಲಾ ನಿರ್ದೇಶಕರಾದ ಎನ್.ಮೂರ್ತಿ, ಯಶಸ್ ಕೆ.ಪದ್ಮನಾಬ್, ಹೆಚ್.ಎಸ್ ಪರಮೇಶ್, ರವೀಂದ್ರ, ಉಪಾಧ್ಯಕ್ಷ ಎಚ್.ಎನ್ ನಾಗರಾಜು, ಹಿರಿಯ ಪರ್ತಕರ್ತರಾದ ಎನ್.ಪದ್ಮನಾಬ್, ಸೊಗಡು ಶ್ರೀನಿವಾಸ್, ಉಮಾಶಂಕರ್, ರಮೇಶ್, ಡಿ.ಎಂ ರಾಘವೇಂದ್ರ, ಕಾರ್ಯದರ್ಶಿ ಸತೀಶ್, ಖಚಾಂಚಿ ಕೆ.ಬಿ ಲೋಕೇಶ್, ನಿರ್ದೇಶಕರಾದ ದೇವರಾಜ್, ಹರೀಶ್‌ಬಾಬು, ಮಂಜುನಾಥ್, ನರಸಿಂಹಮೂರ್ತಿ, ವಿಜಯ್‌ಶಂಕರ್, ಲಕ್ಷಿö್ಮÃಕಾಂತ, ಲಕ್ಷಿö್ಮÃಶ್, ಮಂಜುಸ್ವಾಮಿ, ಸತೀಶ್, ಮುತ್ತುರಾಜು, ಬಾಬುಖಾನ್ ಸೇರಿದಂತೆ ಇತರರು ಇದ್ದರು.