News

ಧರ್ಮ ಸಹಬಾಳ್ವೆ, ಸಮಾನತೆಯನ್ನು ಬಿತ್ತುತ್ತದೆ ಹೊರತು ವಿಂಗಡಿಸುವುದಿಲ್ಲ; ಶಿವಾನಂದ ಶಿವಾಚಾರ್ಯ ಸ್ವಾಮೀಜಿ

ಧರ್ಮ ಸಹಬಾಳ್ವೆ, ಸಮಾನತೆಯನ್ನು ಬಿತ್ತುತ್ತದೆ ಹೊರತು ವಿಂಗಡಿಸುವುದಿಲ್ಲ; ಶಿವಾನಂದ ಶಿವಾಚಾರ್ಯ ಸ್ವಾಮೀಜಿ

ತುಮಕೂರು: ಭಾರತದಲ್ಲಿ ಹಲವಾರು ಧರ್ಮಗಳಿವೆ. ಆ ಧರ್ಮಗಳು ಅದರ ನಿಯಮಾನುಸಾರವೇ ನಡೆಯುತ್ತಿವೆ ಭಾರತೀಯರಲ್ಲಿ ಸಹಬಾಳ್ವೆ, ಭ್ರಾತೃತ್ವ, ಸಮಾನತೆ ಎಂಬುದು ಗತಕಾಲದಿಂದಲೂ ಆಚರಣೆಯಲ್ಲಿದೆ. ಹೀಗಾಗಿ ಧರ್ಮ ಎಂಬುದು ಪ್ರೀತಿ, ಸಹಬಾಳ್ವೆ, ಸಮಾನತೆಯಿಂದ ಇರಲು ಹೇಳುತ್ತದೆ ಹೊರತು ಮಾನವನನ್ನು ವಿಂಗಡಿಸುವುದಿಲ್ಲ ವಿಭಜಿಸುದಿಲ್ಲ ಎಂದು ತುಮಕೂರಿನ ಹಿರೇಮಠದ ಪೀಠಾಧಿಪತಿಗಳಾದ ಶಿವಾನಂದ ಶಿವಚಾರ್ಯ ಸ್ವಾಮೀಜಿಗಳವರು ತಿಳಿಸಿದರು.

ತುಮಕೂರು ಗ್ರಾಮಾಂತರದ ಗೂಳೂರಿನ ದಾರಲು ಉಲಮ್ ಸೌದಿಯಾ ಅರಬೀಕ್ ಕಾಲೇಜ್ ಎಂಬ ಮುಸ್ಲಿಂ‌ ಸಮುದಾಯದ ಮದರಸದಲ್ಲಿ  ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಮಹಾಸಭೆ ಮತ್ತು ಕುರಾನ್ ಗ್ರಂಥವನ್ನು ಕಂಠಪಾಠ ಮಾಡಿದ ಪ್ರತಿಭಾನ್ವಿತರಿಗೆ ಸನ್ಮಾನ ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು ನಮ್ಮ ದೇಶದಲ್ಲಿ ಧರ್ಮ ಒಂದೇ ನಾವೆಲ್ಲರೂ ಪ್ರಾಮಾಣಿಕರಾಗಿ ಒಗ್ಗಟ್ಟಿನಿಂದ ಇದ್ದೇವೆ ಇಂತಹ ಮಾನವ ಧರ್ಮ ನಮ್ಮ ಭಾರತದಲ್ಲಿ ಇರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ನಮ್ಮ ದೇಶದಲ್ಲಿ ಮಾನವೀಯ ಮೌಲ್ಯಗಳಿಗೆ ವಿಶೇಷವಾದ ಗುಣಲಕ್ಷಣಗಳಿವೆ ಮಾನವೀಯ ಮೌಲ್ಯಗಳ ಪಾಲನೆ ಸ್ವರ್ಗಕ್ಕೆ ಸಮವಾಗಿದೆ ಇದು ಭಾರತದಲ್ಲಿ ವಿಶೇಷವಾಗಿರುವ ಸಿದ್ದಾಂತವಾಗಿದ್ದು ನಾವೆಲ್ಲರೂ ಇದರ ಪಾಲನೆ ಮಾಡುತ್ತಾ ಯಾವುದೇ ದ್ವೇಷ ಭಾವನೆ ಇಲ್ಲದೆ ಒಟ್ಟಾಗಿ, ಒಗ್ಗಟ್ಟಾಗಿ ಇದ್ದೇವೆ ಆ ಸೃಷ್ಟಿಕರ್ತನ ಈ ಭೂಮಂಡಲದಲ್ಲಿ ಪ್ರೀತಿ,ಸಹಬಾಳ್ವೆ, 

ತ್ಯಾಗ ನಮ್ಮಗಳ ಉಸಿರಾಗಿರಬೇಕು ಎಂದು ಶ್ರೀಗಳು ತಿಳಿಸಿದರು.  ಭಗವದ್ಗೀತೆ, ಖುರಾನ್, ಬೈಬಲ್ ಗಳು ಮನುಷ್ಯರನ್ನು ಮನಸ್ಸುಗಳನ್ನು ಜೋಡಿಸುವ ಸೇತುವೆಗಳಾಗಿದ್ದು ಇತ್ತೀಚೆಗೆ ಕುರಾನ್, ಭಗವದ್ಗೀತೆ, ಬೈಬಲ್ ಗಳ ಅಭಿಮಾನಿಗಳು ಹೆಚ್ಚಾಗಿದ್ದಾರೆ ಆದರೆ ಈ ಗ್ರಂಥಗಳಲ್ಲಿರುವ ತತ್ವ, ಸಿದ್ಧಾಂತಗಳನ್ನು ಹರಿತು ಅದರ ಸ್ವಾರಸ್ಯ ಸಾಮರಸ್ಯದಿಂದ ಬದುಕಬೇಕು ಎಂದು ಆರ್ಶೀವದಿಸಿದರು. ಈ ಸಂದರ್ಭದಲ್ಲಿ ರಾಜ್ಯದ ಅಮೀರ್-ಇ-ಷರೀಯತ್ ಹಜರತ್ ಮೌಲಾನ ಸಗೀರ್ ಅಹಮದ್ ರಶಾದಿ, ಮೌಲಾನ ಮಕಸೂದ್ ಇಮ್ರಾನ್ ರಶಾದಿ, ತುಮಕೂರಿನ ಖಾಝಿ ಶೇಕ್ ಮಹಮೂದ್ ರಾಶದಿ, ಸೈಯದ್ ಎಸ್ ಶಫಿವುಲ್ಲಾ, ಮುಖಂಡರುಗಳಾದ ಇಕ್ಬಾಲ್ ಅಹಮದ್, ನಯಾಜ್ ಅಹಮದ್, ತಾಜುದ್ದೀನ್ ಶರೀಫ್, ಸ್ಥಳೀಯರಾದ ಶಿವಕುಮಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Religion breeds coexistence, equality, not division; Sivananda Shivacharya Swamiji

Share this post

About the author

Leave a Reply

Your email address will not be published. Required fields are marked *