ಶಿಕ್ಷಣ ದಾಸೋಹ ಸಿದ್ದಗಂಗಾ ಶ್ರೀ, ಶಿಕ್ಷಣ ಭೀಷ್ಮ ಹೆಚ್.ಎಂ ಗಂಗಾಧರಯ್ಯ ನವರ ಮಾದರಿಯಾಗಿ ಶಿಕ್ಷಣ ಸಂಸ್ಥೆ ನಡೆಸಲು ಸರ್ಕಾರಿ ಕೆಲಸ ಕೈಬಿಟ್ಟ ರಹಮತ್ ಅಲಿ:
Brindavan English School | Gubbi | KG Temple | 25 years of achievement | interview with founder Rahamath Ali
ತುಮಕೂರು: ಗುಬ್ಬಿ ತಾಲ್ಲೂಕು ಕೆ.ಜಿ.ಟೆಂಪಲ್ ಗ್ರಾಮದಲ್ಲಿರುವ ಬೃಂದಾವನ ಆಂಗ್ಲ ಮಾಧ್ಯಮ ಶಾಲೆ 1997 ರಲ್ಲಿ ಪ್ರಾರಂಭಗೊಂಡು ಅಂದಿನಿಂದ ಇಂದಿನವರೆಗೂ ಬಡ ಮಕ್ಕಳಿಗೆ ಯಾವುದೇ ಡೊನೇಷನ್ ಇಲ್ಲದೆ ಅಲ್ಪ ಪ್ರಮಾಣದ ಶಾಲಾ ಶುಲ್ಕವನ್ನು ಪಡೆಯುವ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿರುವುದು ಪೋಷಕರ ಪ್ರಶಂಸೆಗೆ ಪಾತ್ರವಾಗಿದೆ.
ಈ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ರೆಹಮದ್ ಅಲಿ ತಮ್ಮ ಬಾಲ್ಯದ ವಿದ್ಯಾರ್ಥಿ ಜೀವನದಿಂದ ಹೋರಾಟದ ಮನೋಭಾವ ಬೆಳೆಸಿಕೊಂಡು ಶಿಕ್ಷಣ ಕಲಿತು ತುಮಕೂರು ಜಿಲ್ಲೆಯ ಮಹಾನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಬೆಳೆದು ಬಂದ ಸಾಧಕರಲ್ಲಿ ಇವರೊಬ್ಬರು ಇವರು ಮೂಲತಃ
ಒಬ್ಬ ಸರ್ಕಾರಿ ನೌಕರರಾಗಿ ತಮ್ಮ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲದಿಂದ ಹಲವಾರು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಾಗ ಇವರಿಗೆ ಪ್ರೇರಣೆ ದೊರೆತಿದ್ದು ನೇಡದಾಡುವ ದೇವರು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಶಿವಯೋಗಿಗಳವರ ಅನ್ನ ದಾಸೋಹ, ಜ್ಞಾನ ದಾಸೋಹ, ವಿದ್ಯಾ ದಾಸೋಹ , ಶಿಕ್ಷಣ ಭೀಷ್ಮ ಎಂಬ ಖ್ಯಾತಿ ಪಡೆದಿರುವ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಹೆಚ್.ಎಂ ಗಂಗಾಧರಯ್ಯ ನವರು ಶಿಕ್ಷಣಕ್ಕೆ ನೀಡಿದ ಅವರ ಅಪಾರ ಕೊಡುಗೆಯ ಪ್ರೇರಣೆಯಿಂದ ಎಲ್ಲಾ ದಾನಕ್ಕಿಂತ ಶಿಕ್ಷಣ ದಾನ ಉತ್ತಮವಾದ ಕ್ಷೇತ್ರ ಎಂಬುದನ್ನು ಅರಿತು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಗ್ರಾಮಿಣ ಭಾಗದ ಬಡ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವುದು ಶ್ಲಾಘನೀಯ ಎಂದು ಗುಬ್ಬಿ ತಾಲೂಕಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವಿದ್ಯಾ ಸಂಸ್ಥೆಯಲ್ಲಿ ಅನುಭವ ಹೊಂದಿರುವ ಶಿಕ್ಷಕ ವೃಂದವು ಸಹಾ ಮಕ್ಕಳಿಗಾಗಿ ಮತ್ತು ಸಂಸ್ಥೆಯ ಬೆಳವಣಿಗೆಗೆ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ನೀಡುತ್ತಿದ್ದು ಈಗಾಗಲೇ ಈ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಸಾಕಷ್ಟು ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್ ಆಗಿ ಕೆಲವು ವಿದ್ಯಾರ್ಥಿಗಳು ವಿದೇಶಗಳಲ್ಲಿ ಉತ್ತಮ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇದು ಈ ಶಿಕ್ಷಣ ಸಂಸ್ಥೆಗೆ ಸಂದ ಕೀರ್ತಿ ಎಂದು ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಹಳೆ ವಿದ್ಯಾರ್ಥಿಗಳ ಪೋಷಕರ ಮನದಾಳದ ಮಾತುಗಳಾಗಿವೆ.ಕೆ.ಜಿ. ಟೆಂಪಲ್ ಗ್ರಾಮದ ಬೃಂದಾವನ ಶಾಲೆಯಲ್ಲಿ ನಡೆದ ಇನ್ನೋವೇಶನ್ ಡೇ ಶಾಲೆಯ ಸಮಾರಂಭದಲ್ಲಿ ಸಂಸ್ಥಾಪಕರಾದ ರಹಮತ್ ಅಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಬಡ ಕುಟುಂಬದಲ್ಲಿ ಬದುಕುತ್ತಿರುವ ಅಂತಹ ಎಷ್ಟೋ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿರುವುದು ವಿಪರ್ಯಾಸದ ಸಂಗತಿ ಅಂತಹ ಶಿಕ್ಷಣ ವಂಚಿತ ಮಕ್ಕಳಿಗೆ ನಮ್ಮ ಶಿಕ್ಷಣ ಸಂಸ್ಥೆ ನಿರಂತರವಾಗಿ ಶಿಕ್ಷಣ ಕೊಡಲು ಮುಂದಾಗಿರುತ್ತದೆ ಈ ನಮ್ಮ ಶಿಕ್ಷಣ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಸಾರ್ವಜನಿಕರ ಸಹಕಾರ ಅತ್ಯಗತ್ಯವಿದೆ ಎಂದು ತಿಳಿಸಿದರು.
ಶಾಲೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಶಿಕ್ಷಕರು ಮುರಳಿಧರ್, ನಿವೃತ್ತ ಸರ್ಕಾರಿ ಅಧಿಕಾರಿ ಷಡಕ್ಷರಿ, ರಾಜ್ಯ ಸಂಪನ್ಮೂಲ ವ್ಯಕ್ತಿ ಶಂಕರ್ ಪ್ರಸಾದ್, ಪತ್ರಕರ್ತರಾದ ಸೈಯದ್ ಯೂಸುಫ್ ಉಲ್ಲಾ ಭಾಗವಹಿಸಿದ್ದರು. ಪ್ರಾಂಶುಪಾಲರಾದ ಶ್ರೀಮತಿ ರಿಜ್ವಾನ ಬೇಗಂ, ಮುಖ್ಯಸ್ಥರಾದ ಮೋಯಿನುದ್ದಿನ್ ರಹಮಾನ್ ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತಿದ್ದರು.