ತುಮಕೂರು: ಇತ್ತೀಚೆಗೆ ಅಗಲಿದ ಹೆಸರಾಂತ ಹಿನ್ನೆಲೆ ಗಾಯಕಿ ಗಾನ ಕೋಗಿಲೆ ಎಸ್. ಜಾನಕಿಯವರಿಗೆ ಮಂಗಳವಾರ
ತುಮಕೂರು ಆರ್ಕೆಸ್ಟಾç ಕಲಾವಿದರು ಗಾನ ನಮನ ಸಲ್ಲಿಸಿ ಗಾನ ಕೋಗಿಲೆಗೆ ಗಾನ ಗೌರವ ಅರ್ಪಿಸಿದರು. ಎಸ್. ಜಾನಕಿಯರು ಹಾಡಿರುವ
ಅಮರ-ಮಧುರ ಗೀತೆಗಳ ಹಾಡಿ ಅಭಿಮಾನ ಮೆರೆದರು. 18 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಎಸ್.
ಜಾನಕಮ್ಮನವರ ಸ್ಮರಣಾರ್ಥವಾಗಿ ತುಮಕೂರು ಆರ್ಕೆಸ್ಟಾç ಕಲಾವಿದರ ಸಂಘ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್
ಸಹಯೋಗದಲ್ಲಿ ಗಾಯಕಿ ಜಾನಕಮ್ಮನ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ರಂಗಭೂಮಿ ಕಲಾವಿದ, ಹರಿಕಥಾ ವಿದ್ವಾನ್ ಡಾ. ಲಕ್ಷö್ಮಣದಾಸ್ಕಾ ರ್ಯಕ್ರಮ ಉದ್ಘಾಟಿಸಿ ನುಡಿನಮನ ಸಲ್ಲಿಸಿದರು. ದೇಶ ಕಂಡ
ಶ್ರೇಷ್ಠ ಗಾಯಕಿಯಾದ ಜಾನಕಮ್ಮನವರು ಆಂಧ್ರಪ್ರದೇಶದಲ್ಲಿ ಹುಟ್ಟಿ ಕೊನೆಗಾಲದಲ್ಲಿ ಕನ್ನಡನಾಡಿನಲ್ಲಿ ಬದುಕಿ ಸಂಗೀತ ಕ್ಷೇತ್ರ ಬೆಳಗಿದರು. ಕನ್ನಡಿಗರಿಗೆ ಅವರು
ತಮ್ಮ ಸಾವಿರಾರು ಗೀತೆಗಳ ಸಂಪತ್ತನ್ನು ಕೊಟ್ಟು ಹೋಗಿದ್ದಾರೆ. ಜಾನಕಮ್ಮನ ಆಶೀರ್ವಾದದಲ್ಲಿ ಮತ್ತಷ್ಟು ಗಾಯಕರು ಸಂಗೀತ
ಕ್ಷೇತ್ರವನ್ನು ಬೆಳಗಲಿ ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಸಮಾರAಭದ ಅಧ್ಯಕ್ಷತೆ ವಹಿಸಿ, ಸಾಧನೆಯ
ಉತ್ತುಂಗದಲ್ಲಿದ್ದರೂ ಅತ್ಯಂತ ಸರಳ ಜೀವನ ನಡೆಸಿದ ಅಪರೂಪದ ಗಾಯಕಿ, ಕನ್ನಡ, ತೆಲುಗು, ತಮಿಳು, ಮಳಯಾಳಂ, ಹಿಂದಿ ಸೇರಿದಂತೆ ಬಹುತೇಕ ಭಾಷೆಗಳಲ್ಲಿ ಸಹಸ್ರಾರು ಗೀತೆಗಳನ್ನು ಹಾಡಿ ಭಾರತೀಯ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ತೆಲುಗು ಮಾತೃಭಾಷೆಯಾದರೂ ಜಾನಕಮ್ಮನವರು ಕನ್ನಡ ನಾಡು, ನುಡಿಗಾಗಿ ಹಾಡಿ, ದುಡಿದು ಕೊನೆಗಾಲದಲ್ಲಿ ಕನ್ನಡಿಗರೇ
ಆಗಿಹೋದರು. ಅಪಾರ ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ. ಸೂರ್ಯ ಚಂದ್ರ ಇರುವವರೆಗೂ
ಅವರ ಮಧುರ ಕಂಠದ ಹಾಡುಗಳು ಕನ್ನಡಿಗರ ಮನದಲ್ಲಿ ಮರುಕಳಿಸುತ್ತವೆ ಎಂದರು. ಹೆಸರಾAತ ಗಾಯಕರಾದ ವಿಷ್ಣುರಾಮನ್, ಪೂಜ್ಯ ಮೋಹನ್, ದಿಬ್ಬೂರು ಮಂಜಣ್ಣ ಸೇರಿದಂತೆ ವಿವಿಧ ಆರ್ಕೆಸ್ಟಾç ತಂಡಗಳ ಗಾಯಕರು ಎಸ್. ಜಾನಕಿಯವರ ಹಾಡುಗಳನ್ನು ಹಾಡಿ ಅವರ ಸ್ಮರಣೆ ಮಾಡಿದರು.
ಸಂಗೀತ ನಿರ್ದೇಶಕ ಸಂಗೀತ್ ಶ್ರೀನಿವಾಸ್, ಹಿರಿಯ ಕಲಾವಿದ ಟಿ.ಆರ್.ರಾಘವೇಂದ್ರ, ಗಂಗಾವಾಹಿನಿ ಪತ್ರಿಕೆ ಸಂಪಾದಕ ಆರ್. ಕಾಮರಾಜ್, ತುಮಕೂರು ಆರ್ಕೆಸ್ಟಾç ಕಲಾವಿದರ ಒಕ್ಕೂಟದ ಅಧ್ಯಕ್ಷ ಶಂಕರ್, ಉಪಾಧ್ಯಕ್ಷ ಅನಿಲ್‌ಕುಮಾರ್, ಕಾರ್ಯದರ್ಶಿ
ಧನು, ನಿರ್ದೇಶಕ ರೇಣುಕಾಪ್ರಸಾದ್, ಹಿರಿಯ ವಕೀಲ ಎಲ್. ರಂಗರಾಜು
ಮೊದಲಾದವರು ಭಾಗವಹಿಸಿದ್ದರು.
