breaking news

ಸಿನಿಮಾ ಶೈಲಿಯಲ್ಲಿ ಹಿಂಬಾಲಿಸಿ ಯುವಕನ ಮೇಲೆ ಹಲ್ಲೆ: ವೈರಲ್ ಆಯ್ತು ಭಯಾನಕ ವಿಡಿಯೋ

ಸಿನಿಮಾ ಶೈಲಿಯಲ್ಲಿ ಹಿಂಬಾಲಿಸಿ ಯುವಕನ ಮೇಲೆ ಹಲ್ಲೆ: ವೈರಲ್ ಆಯ್ತು ಭಯಾನಕ ವಿಡಿಯೋ

ತುಮಕೂರು: ತುಮಕೂರಿನಲ್ಲಿ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಅದಕ್ಕೆ ಪುಷ್ಠಿ ನೀಡುವಂತೆ ಮತ್ತೊಂದು ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ.ತಡರಾತ್ರಿ ಸುಮಾರು 3 ಗಂಟೆ ವೇಳೆಗೆ, ಯುವಕನೊಬ್ಬನನ್ನು ಕಾರು ಹಾಗೂ ಬೈಕ್‌ಗಳಲ್ಲಿ ಬೆನ್ನಟ್ಟಿದ ಸುಮಾರು ಹತ್ತಕ್ಕೂ ಹೆಚ್ಚು ಮಂದಿ, ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಕಾರು ಅಡ್ಡಗಟ್ಟಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ತುಮಕೂರಿನ ಹೃದಯಭಾಗವಾದ ಕುಣಿಗಲ್ ರಸ್ತೆಯ ಪಿಡಬ್ಲ್ಯುಡಿ (PWD) ಕಚೇರಿ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಯುವಕ ಯೂನಸ್ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಡುರಸ್ತೆಯಲ್ಲೇ ಅಮಾನುಷವಾಗಿ ಹಲ್ಲೆ ನಡೆಸಿರುವ ದೃಶ್ಯಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.

ಕಾಂಗ್ರೆಸ್ ಮುಖಂಡ ಜೈನ್ ಶೇಖ್ ಅವರ ಸಂಬಂಧಿಯೇ ಈ ಪ್ರಕರಣದ ಪ್ರಮುಖ ಆರೋಪಿ ಎಂಬ ಮಾಹಿತಿ ಹರಿದಾಡುತ್ತಿದೆ.ಕಾರು ಹಾಗೂ ಬೈಕ್‌ನಲ್ಲಿ ಹಲವು ಕಿಲೋಮೀಟರ್‌ಗಳಷ್ಟು ದೂರ ಬೆನ್ನಟ್ಟಿಕೊಂಡು ಬಂದು ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ಯೂನಸ್ ಆರೋಪಿಸಿದ್ದಾರೆ.ಪ್ರಕರಣ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Filmy-Style Chase Ends in Assault on Youth; Video Goes Viral on Social Media

Share this post

About the author

Leave a Reply

Your email address will not be published. Required fields are marked *