Friendship Turns Into a Theft Case- ₹8 Lakh Stolen-FIR Filed in Hebbur
ಆಪ್ತ ಸ್ನೇಹಿತನ ಮನೆಯಲ್ಲೇ 8 ಲಕ್ಷ ರೂಪಾಯಿ ನಗದು ಕಳವು… ಜೊತೆಗೆ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳು ನಾಪತ್ತೆ… ಈ ಕಳವು ಪ್ರಕರಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯನ ಪುತ್ರನ ವಿರುದ್ಧವೇ ಎಫ್‌ಐಆರ್ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಗ್ರಾಮಾಂತರ:
ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಡಿ.ಎಸ್. ಪಾಳ್ಯದಲ್ಲಿ ನಡೆದಿರುವ ಈ ಪ್ರಕರಣ ಇದೀಗ ಗ್ರಾಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಡಿ.ಎಸ್. ಪಾಳ್ಯದ ಗ್ರಾಮ ಪಂಚಾಯಿತಿ ಸದಸ್ಯನ ಪುತ್ರ ನವಾಜ್ ಪಾಷಾ ವಿರುದ್ಧ, ತಮ್ಮ ಆಪ್ತ ಸ್ನೇಹಿತ ಯಾಸಿನ್ ಪಾಷಾ ಅವರ ಮನೆಯಲ್ಲಿ ಕಳವು ಮಾಡಿರುವ ಆರೋಪ ಕೇಳಿಬಂದಿದೆ.
ಯಾಸಿನ್ ಪಾಷಾ ಅವರು ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಅವರ ಮನೆಯಿಂದ ಸುಮಾರು 8 ಲಕ್ಷ ರೂ. ನಗದು, 15 ಗ್ರಾಂ ಬೆಳ್ಳಿ ಹಾಗೂ 5 ಗ್ರಾಂ ಚಿನ್ನಾಭರಣ ಕಳುವಾಗಿದೆ ಎಂದು ಆರೋಪಿಸಲಾಗಿದೆ. ಮನೆಯಲ್ಲಿ ಕಳವು ನಡೆದಿರುವುದು ಗಮನಕ್ಕೆ ಬಂದ ಬಳಿಕ ಯಾಸಿನ್ ಪಾಷಾ ಅವರು ಹೆಬ್ಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ನವಾಜ್ ಪಾಷಾ ಅವರನ್ನು ಬಂಧಿಸಿ, ಕಳುವಾಗಿದೆ ಎನ್ನಲಾದ ನಗದು ಹಾಗೂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಈ ಪ್ರಕರಣ ಕೇವಲ ಕಳವು ಆರೋಪಕ್ಕೆ ಸೀಮಿತವಾಗಿಲ್ಲ…
ಆಪ್ತ ಸ್ನೇಹಿತನ ಮನೆಯಲ್ಲೇ ಕಳವು ನಡೆದಿರುವುದು ಹೇಗೆ?
ನಂಬಿಕೆಯ ಸ್ನೇಹದ ನಡುವೆ ಈ ಘಟನೆ ನಡೆದಿರುವುದಾದರೂ ಹೇಗೆ? ಎಂಬ ಪ್ರಶ್ನೆಗಳು ಇದೀಗ ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿವೆ.

Friend Accused of Theft: Viral Poster Triggers Massive Buzz in Hebbur
ಇದರ ನಡುವೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ವೊಂದು ವೈರಲ್ ಆಗಿದ್ದು, ಈ ವಿಚಾರ ಗ್ರಾಮದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಈ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಏನು ಎಂಬುದು ಪೊಲೀಸರ ತನಿಖೆಯಿಂದ ಇನ್ನಷ್ಟೇ ಬಹಿರಂಗವಾಗಬೇಕಿದೆ.
