breaking news

ದೇವೇಗೌಡರ ಯಶಸ್ಸಿನ ಶಕ್ತಿಚನ್ಮಮ್ಮ: ಹೆಚ್. ನಿಂಗಪ್ಪಜಿಲ್ಲಾ ಜೆಡಿಎಸ್‌ನಿಂದ ಗೌಡರ ಪತ್ನಿ ಚನ್ನಮ್ಮರಿಗೆಶ್ರದ್ಧಾಂಜಲಿ

ದೇವೇಗೌಡರ ಯಶಸ್ಸಿನ ಶಕ್ತಿಚನ್ಮಮ್ಮ: ಹೆಚ್. ನಿಂಗಪ್ಪಜಿಲ್ಲಾ ಜೆಡಿಎಸ್‌ನಿಂದ ಗೌಡರ ಪತ್ನಿ ಚನ್ನಮ್ಮರಿಗೆಶ್ರದ್ಧಾಂಜಲಿ

ತುಮಕೂರು: ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಅವರ ಮಕ್ಕಳ ರಾಜಕೀಯ ಏಳಿಗೆಗೆ ಶಕ್ತಿಯಾಗಿ ಚನ್ನಮ್ಮ ಇದ್ದರು.
ಅವರ ರಾಜಕೀಯ ಏಳುಬೀಳಿನಲ್ಲೂ ಆತ್ಮವಿಶ್ವಾಸ ತುಂಬುತ್ತಿದ್ದರು. ಚುನಾವಣೆ ಸೋಲಿನ ಸಂದರ್ಭದಲ್ಲೂ ಆತ್ಮಸ್ಥೈರ್ಯ ತುಂಬಿದ ಮಹಾತಾಯಿ. ಎಲ್ಲರನ್ನೂ ಪ್ರಿತಿಯಿಂದ ಕAಡು ಉಪಚರಿಸುತ್ತಿದ್ದ ಆದರ್ಶ ಗೃಹಿಣಿ ಎಂದು ಜಿಲ್ಲಾ ಜೆಡಿಎಸ್ಅಧ್ಯಕ್ಷ ಹೆಚ್. ನಿಂಗಪ್ಪ ಗುಣಗಾನ ಮಾಡಿದರು.
ಇತ್ತೀಚೆಗೆ ಅಗಲಿದ ಚನ್ನಮ್ಮನವರಿಗೆ ನಗರದ ಜಿಲ್ಲಾ ಜೆಡಿಎಸ್ ಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ದೇವೇಗೌಡರು ಹಾಗೂ ಚನ್ನಮ್ಮನವರ ಆದರ್ಶ ದಾಂಪತ್ಯ ಎಲ್ಲರಿಗೂ ಮಾದರಿಯಾದದ್ದು, ಒಂದು ಕುಟುಂಬ ಹೇಗೆ ಆದರ್ಶವಾಗಿರಬೇಕು ಎಂಬುದನ್ನು ಚೆನ್ನಮ್ಮನವರು ಬಾಳಿ ತೋರಿಸಿದರು.

ರಾಜಕೀಯ ಶತ್ರುಗಳನ್ನೂ ಅದೇ ಪ್ರೀತಿಯಿಂದ ಆಧರಿಸುತ್ತಿದ್ದ ದೊಡ್ಡ ಗುಣದ ತಾಯಿ ಅವರು ಎಂದರು.
ನಗರ ಜೆಡಿಎಸ್ ಅಧ್ಯಕ್ಷ ಟಿ.ಹೆಚ್. ಜಯರಾಮ್ ಮಾತನಾಡಿ, ಪ್ರಧಾನ ಮಂತ್ರಿಯ ಸತಿಯಾಗಿ, ಮುಖ್ಯಮಂತ್ರಿ, ಮಂತ್ರಿಯ ತಾಯಿಯಾಗಿ
ದೊಡ್ಡ ರಾಜಕೀಯ ಕುಟುಂಬದ ಯಜಮಾನಿಯಾಗಿದ್ದ ಚನ್ನಮ್ಮನವರು ಎಂದು ರಾಜಕಾರಣಕ್ಕೆ ಬಂದವರಲ್ಲ, ಅವರಿಗೆ
ಅದರಲ್ಲಿ ಆಸಕ್ತಿಯೂ ಇರಲಿಲ್ಲ, ಅದರೆ ಎಲ್ಲಾ ರಾಜಕಾರಣಿಗಳನ್ನು ಉಪಚರಿಸುವ ಮಾತೃಹೃದಯಿಯಾಗಿದ್ದರು ಎಂದು ಹೇಳಿದರು.


ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್. ನಾಗರಾಜು, ರಾಜ್ಯ ಎಸ್ಟಿ ಘಟಕ ಉಪಾಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ, ನಗರ ಮಹಾ ಪ್ರಧಾನ
ಕಾರ್ಯದರ್ಶಿ ಟಿ.ಸಿ. ಪ್ರಭಾಕರ್, ನಗರಸಭೆ ಮಾಜಿ ಸದಸ್ಯರಾದ ಟಿ.ಜಿ. ನರಸಿಂಹರಾಜು, ಧರಣೇಂದ್ರಕುಮಾರ್, ಜಿಲ್ಲಾ ಕಾರ್ಯದರ್ಶಿ
ಸಿಂಗದಹಳ್ಳಿ ರಾಜ್‌ಕುಮಾರ್, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ರೇಖಾ ರಾಜ್‌ಗೌಡ, ನಗರ ಅಧ್ಯಕ್ಷೆ ಲಕ್ಷಿö್ಮÃ ನಾಯಕ್, ಜಿಲ್ಲಾ ಎಸ್ಸಿ ಘಟಕ
ಅಧ್ಯಕ್ಷ ಬೆಳಗುಂಬ ವೆಂಕಟೇಶ್, ಜಿಲ್ಲಾ ಪ್ರಚಾರ ಸಮಿತಿ
ಅಧ್ಯಕ್ಷ ಕೆಂಪರಾಜು, ಮುಖಂಡರಾದ ಚಂದ್ರಾ ನಾಯ್ಕ್, ಯೋಗಾನಂದಕುಮಾರ್, ತಾಹೇರಾ ಕುಲ್ಸಂ, ಚಂದ್ರಣ್ಣ,
ಉಪ್ಪಾರಹಳ್ಳಿ ಕುಮಾರ್, ಗಂಗರಾಜು, ಸೇರಿದಂತೆ ವಿವಿಧ
ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Chennamma Was the Strength Behind Deve Gowda’s Success: H. Ningappa

Share this post

About the author

Leave a Reply

Your email address will not be published. Required fields are marked *