breaking news

ಪ್ರತಿಯೊಬ್ಬ ನಾಗರೀಕರುಎಸ್.ಐ.ಆರ್.ನ ಎನ್ಯೂಮರೇಷನ್ಫಾರಂ ಭರ್ತಿ ಮಾಡಿ, ಹಿಂತಿರುಗಿಸಿ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಮನವಿ

ಪ್ರತಿಯೊಬ್ಬ ನಾಗರೀಕರುಎಸ್.ಐ.ಆರ್.ನ ಎನ್ಯೂಮರೇಷನ್ಫಾರಂ ಭರ್ತಿ ಮಾಡಿ, ಹಿಂತಿರುಗಿಸಿ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಮನವಿ

ತುಮಕೂರು: ರಾಜ್ಯಾದ್ಯಂತ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಕಾರ್ಯದ ನಿಮಿತ್ತ ತುಮಕೂರು
ಮಹಾನಗರಪಾಲಿಕೆ ವತಿಯಿಂದ ಬೂತ್ ಮಟ್ಟದಲ್ಲಿ ಆಯೋಜಿಸಲಾಗಿರುವ ಗಣತಿ ನಮೂನೆಗಳನ್ನು ಭರ್ತಿ ಮಾಡಲು / ಭರ್ತಿ ಮಾಡಿದ ನಮೂನೆಗಳನ್ನು ಸ್ವೀಕರಿಸುವ ವಿಶೇಷ ಅಭಿಯಾನಕ್ಕೆ ತುಮಕೂರು ನಗರದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ನಗರದ ವಿದ್ಯಾನಗರದ ವಿವೇಕಾನಂದ ಶಾಲೆ ಬಳಿ ಭೇಟಿ ನೀಡಿ ಸಮಾಲೋಚನೆ ನಡೆಸಿದರು.


ಈ ಸಂದರ್ಭದಲ್ಲಿ ಪ್ರಸ್ತುತ 2002ರ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇಲ್ಲದಂತಾಗಿ ಜನರು ಪರದಾಡುತ್ತಿದ್ದು, ಇದರಿಂದ ಯಾರೊಬ್ಬ ನಾಗರೀಕರು
ಎಸ್.ಐ.ಆರ್ ಕಾರ್ಯದಲ್ಲಿ ಆಸಕ್ತಿ ಕಳೆದುಕೊಳ್ಳದೆ ತಮ್ಮ ತಮ್ಮ ಬೂತ್ ಮಟ್ಟದ ಮತಗಟ್ಟೆಗಳಿಗೆ ಭೇಟಿ ನೀಡಿ, 2002ರ ಪಟ್ಟಿಯಲ್ಲಿನ ಮತದಾರರ ಹೆಸರು, ವಿಧಾನಸಭಾ ಕ್ಷೇತ್ರದ ಸಂಖ್ಯೆ, ಭಾಗದ ಸಂಖ್ಯೆ, ಕ್ರಮ ಸಂಖ್ಯೆ ಯನ್ನು ಪರಿಶೀಲಿಸಿ, ಗಣತಿ ನಮೂನೆಗಳನ್ನು ಭರ್ತಿ ಮಾಡಿ, ಬಿ.ಎಲ್.ಓ.ಗಳಿಗೆ ಹಿಂತಿರುಗಿಸಲು ನಾಗರೀಕರಿಗೆ ಶಾಸಕರು ಮನವಿ ಮಾಡಿದರು. ಅಗತ್ಯವಿದ್ದಲ್ಲಿ ಈಗಾಗಲೇ ತಿಳಿಸಲಾಗಿರುವ ಸಹಾಯಯವಾಣಿಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ
ಎಂದರು. ಹಾಗೆಯೇ ಅಲ್ಲಿ ನೆರೆದಿದ್ದ ಹಿರಿಯ ನಾಗರೀಕರಿಗೆ ತಮ್ಮ ಭಾಗಗಳಲ್ಲಿ ಬಾಕಿ ಉಳಿದಿರುವವರಿಗೆ ಎನ್ಯೂಮರೇಷನ್ಫಾ ಫಾರಂ ವಿತರಿಸಿ, ಭರ್ತಿ ಮಾಡಲು ಸಹಾಯ ಮಾಡಿ, ಆದಷ್ಟು ಬೇಗ ಎನ್ಯೂಮರೇಷನ್ ಫಾರಂಗಳನ್ನು ಹಿಂತಿರುಗಿಸಲು
ತಿಳಿಸುವAತೆ ತಿಳಿಸಿದರು.

MLA G.B. Jyothi Ganesh Urges Every Citizen to Fill and Return the SIR Enumeration Form

Share this post

About the author

Leave a Reply

Your email address will not be published. Required fields are marked *