breaking news

ಕೇಂದ್ರ ಸಚಿವ ಸೋಮಣ್ಣರ ಹುಟ್ಟುಹಬ್ಬ ಅಂಗವಾಗಿ ಗೋಕುಲ ಬಡಾವಣೆಯಲ್ಲಿ ಆರೋಗ್ಯ ಶಿಬಿರ

ಕೇಂದ್ರ ಸಚಿವ ಸೋಮಣ್ಣರ ಹುಟ್ಟುಹಬ್ಬ ಅಂಗವಾಗಿ ಗೋಕುಲ ಬಡಾವಣೆಯಲ್ಲಿ ಆರೋಗ್ಯ ಶಿಬಿರ

ತುಮಕೂರು: ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣನವರ ಜನ್ಮದಿನದ ಅಂಗವಾಗಿ ನಗರದ 32ನೇ
ವಾರ್ಡಿನ ಗೋಕುಲ ಬಡಾವಣೆಯಲ್ಲಿ ಸೋಮಣ್ಣ ಅಭಿಮಾನಿಗಳು ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿದ್ದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ಅವರು ನಿಧನದ ಹಿನ್ನೆಲೆಯಲ್ಲಿ ಕಾರ್ಯಕರ್ತರು ತಮ್ಮ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಬಾರದು ಎಂದು ಸಚಿವ ಸೋಮಣ್ಣ ಹೇಳಿರುವ ಹಿನ್ನೆಲೆಯಲ್ಲಿ, ಆರೋಗ್ಯ ಸೇವಾಕಾರ್ಯಕ್ರಮವಾಗಿ ಆಚರಿಸಿದರು.

ನಿವೃತ್ತ ಪ್ರಾಂಶುಪಾಲರಾದ ಮರಿಬಸಪ್ಪ, ಸಮಾಜ ಸೇವಕ, ಬಿಜೆಪಿ ಮುಖಂಡ ಪ್ರೇಮ್‌ಕುಮಾರ್ ಹಾಗೂ ಗೆಳೆಯರು ಈ ಆರೋಗ್ಯ ಶಿಬಿರ ಆಯೋಜಿಸಿದ್ದರು.
ಕೆಪಿಟಿಸಿಎಲ್‌ನ ನಿವೃತ್ತ ಕೆಎಎಸ್ ಅಧಿಕಾರಿ ಗಂಗಾಧರ್ ಅವರು ಆರೋಗ್ಯ ಶಿಬಿರ ಉದ್ಘಾಟಿಸಿದರು. ತಜ್ಞವೈದ್ಯರಾದ ಡಾ. ಹೃದಯ ಸಂಬAಧಿ ರೋಗಗಳ ಬಗ್ಗೆ
ತಪಾಸಣೆ ತಡೆಸಿ, ಹೃದಯಾಘಾತ, ಹೃದಯ ರೋಗ ನಿಯಂತ್ರಣದ ಬಗ್ಗೆ ನಾಗರೀಕರಿಗೆ ಮಾಹಿತಿ ನೀಡಿದರು. ಇದಲ್ಲದೆ ವಿವಿಧ ರೋಗಗಳ ಸಂಬAಧ ವೈದ್ಯರು ತಪಾಸಣೆ ನಡೆಸಿ, ಆರೋಗ್ಯ ಸಲಹೆ ನೀಡಿದರು. 500ಕ್ಕೂ ಹೆಚ್ಚು ಜನ ಆರೋಗ್ಯ ಶಿಬಿರದ ಪ್ರಯೋಜನ ಪಡೆದರು.

ಶ್ರೀ ಗಂಗಾಧರ್ ನಿವೃತ್ತ ಕೆ.ಎ.ಎಸ್ ಅಧಿಕಾರಿಗಳು ಕೆ.ಪಿ.ಟಿ.ಸಿ.ಎಲ್ ಬೆಂಗಳೂರು ಇವರು ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಸರಿ ಸುಮಾರು 500 ಹೆಚ್ಚು ಜನ ಶಿಬಿರದಲ್ಲಿ ಭಾಗವಹಿಸಿ ಉಚಿತ ಚಿಕಿತ್ಸೆ ಪಡೆದರು. ಇದೆ ವೇಳೆ ಹೃದಯ ತಗ್ನರು ಆರ್ಟ್ ಅಟ್ಯಾಕ್ ಬಗ್ಗೆ ಜನರಿಗೆ ಪ್ರಾಕ್ಟಿಕಲ್ ಮೂಲಕ ವಿವರಿಸಿ ಮಾಡಲ್ ಮೂಲಕ ಜನರಲ್ಲಿ ಅರಿವು ಮೂಡಿಸಿದರು. ಡಾಃ ಪ್ರಿಯಾಂಕಾ ಒ.ಃ.B.S ಒಆ. ಇವರು ಹೃದಯ ಸಂಬAಧಿ ರೋಗಗಳ ಬಗ್ಗೆ ಚಿಕಿತ್ಸೆ ನೀಡಿ ಔಷಧಿ
ವಿತರಿಸಿದರು. ಶಿಬಿರದಲ್ಲಿ ಭಾಗವಹಿಸಿದ್ದವರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಶಿಬಿರಕ್ಕೆ ಸಹಕಾರ ನೀಡಿದ ಡಾ. ಪ್ರಿಯಾಂಕ, ನಿವೃತ್ತ ಅಧಿಕಾರಿ ಗಂಗಾಧರ್ ಆರೋಗ್ಯ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

Free Health Camp Organized in Gokul Layout on Union Minister Somanna’s Birthday

Share this post

About the author

Leave a Reply

Your email address will not be published. Required fields are marked *