ತುಮಕೂರು: ಕಳೆದ ಎರಡು ವರ್ಷಗಳಲ್ಲಿ ಜಿಲ್ಲಾಡಳಿತ ನಗರದಲ್ಲಿ ನಡೆಸಿದ ದಸರಾ ಉತ್ಸವಕ್ಕೆ ಸರ್ಕಾರದ ಅನುದಾನ, ಇಲಾಖೆ ಹಾಗೂ ಇತರೆ ದೇಣಿಗೆ ಹಾಗೂ ಖರ್ಚುವೆಚ್ಚಗಳ ಬಗ್ಗೆ ಜಿಲ್ಲಾಡಳಿತವೇ ನೀಡಿದ ಮಾಹಿತಿಯ ದಾಖಲೆಗಳ ಪ್ರಕಾರ ಎರಡು ದಸರಾ ಉತ್ಸವಗಳಲ್ಲಿ 6ರಿಂದ 7 ಕೋಟಿ ರೂ.ಗಳ ಅವ್ಯವಹಾರ
ನಡೆದಿರುವುದು ಕಂಡುಬAದಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡುವಂತೆ ರಾಜ್ಯಪಾಲರಿಗೆ ಮನವಿ ಮಾಡುವುದಾಗಿ
ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆಯ ಅಧ್ಯಕ್ಷ ಜಿ.ಎಸ್. ಬಸವರಾಜು ಹೇಳಿದರು.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಉತ್ಸವಗಳ ಯಶಸ್ಸು ತಮಗೆ ಸೇರಿದ್ದು ಎಂದು
ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಬಹುಕೋಟಿ ರೂ.ಗಳ ಅವ್ಯವಹಾರದ ಹೊಣೆ ಹೊತ್ತು ಅವರು ಸಚಿವ ಸ್ಥಾನಕ್ಕೆ
ರಾಜೀನಾಮೆ ನೀಡಬೇಕು. ನಿಯಮಗಳನ್ನು ಗಾಳಿಗೆ ತೂರು ಕೊಟೇಶನ್, ಟೆಂಡರ್ ಇಲ್ಲದೆ ಹಣ ಖರ್ಚು ಮಾಡಿ ಸರ್ಕಾರಕ್ಕೆ
ವಂಚಿಸಿರುವ ಜಿಲ್ಲಾಧಿಕಾರಿ ಸೇರಿ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

2024 ಮತ್ತು 25ರಲ್ಲಿ ನಗರದಲ್ಲಿ ನಡೆದ ದಸರಾ ಉತ್ಸವಕ್ಕೆ ಸರ್ಕಾರದಿಂದ ಬಂದ ಅನುದಾನ, ಇತರೆ ಇಲಾಖೆ, ಖಾಸಗಿಯ ದೇಣಿಗೆ
ಹಾಗೂ ಮಾಡಿರುವ ಖರ್ಚುವೆಚ್ಚಗಳ ಬಗ್ಗೆ ಮಾಹಿತಿ ನೀಡಲು ಮಾಹಿತಿ ಹಕ್ಕಿನಲ್ಲಿ ಮನವಿ ಮಾಡಿದಾದ ದೊರೆತ ಅಂಕಿಅAಶಗಳು
ಹೊAದಾಣಿಕೆಯಾಗದೆ ದೊಡ್ಡ ಮಟ್ಟದಲ್ಲಿ ಅವ್ಯವಹಾರ ಆಗಿರುವುದು ಅವರು ನೀಡಿರುವ ದಾಖಲೆಗಳೇ ಸಾಬೀತು ಮಾಡಿವೆ.
ಎಲ್ಲವನ್ನೂ ಅಧಿಕಾರಿಗಳೇ ತೀರ್ಮಾನಿಸಿದಂತಿದೆ, ಜಿಲ್ಲಾಧಿಕಾರಿ ಸೇರಿದಂತೆ ಸAಬAಧಿಸಿದ ಅಧಿಕಾರಿಗಳ ಸರ್ವಾಧಿಕಾರಿ ಆಡಳಿತ ಕಂಡುಬAದಿದೆ.
ಈ ಬಗ್ಗೆ ತಾವು ಲೋಕಾಯುಕ್ತಕ್ಕೆ ದೂರು ನೀಡಿರುವುದಾಗಿ ಜಿ.ಎಸ್. ಬಸವರಾಜು ಹೇಳಿದರು. 2024ರ ದಸರಾ ಉತ್ಸವಕ್ಕೆ ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒಂದು ಕೋಟಿ ರೂ. ಅನುದಾನ ನೀಡಿದೆ. ಅದರಲ್ಲಿ 99 ಲಕ್ಷಕ್ಕೂ ಅಧಿಕ ಖರ್ಚು ಮಾಡಲಾಗಿದೆ ಎಂದು ಮಾಹಿತಿ ಹಕ್ಕಿನಡಿ
ಜಿಲ್ಲಾಧಿಕಾರಿಗಳೆ ತಮಗೆ ಮಾಹಿತಿ ನೀಡಿದ್ದಾರೆ. ಐದು ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಲು ಕೊಟೇಶನ್ ಕರೆಯಬೇಕು, ಒಂದು
ಲಕ್ಷಕ್ಕೂ ಹೆಚ್ಚಿನ ಖರ್ಚಿಗೆ ಟೆಂಡರ್ ಕರೆಯಬೇಕು. ಆದರೆ ಕೋಟ್ಯಾಂತರ ರೂ. ಖರ್ಚು ಮಾಡಿರುವ ದಸರಾ ಉತ್ಸವದಲ್ಲಿ ಯಾವ
ಖರ್ಚಿಗೂ ಟೆಂಡರ್ ಅಥವಾ ಕೊಟೇಶನ್ ಕರೆಯದೇ ನಿಯಮ ಉಲ್ಲಂಘನೆ ಮಾಡಲಾಗಿದೆ.
ವಿವಿಧ ಇಲಾಖೆಗಳಿಂದಲೂ ದಸರಾ ಉತ್ಸವಕ್ಕೆ ಲಕ್ಷಗಟ್ಟಲೆ ಸಾರ್ವಜನಿಕರ ಹಣ ಪಡೆಯಲಾಗಿದ್ದರೂ ಯಾವ ಇಲಾಖೆಯಲ್ಲೂ ನಿಯಮ ಪಾಲನೆ ಆಗಿಲ್ಲ ಎಂಬುದು
ದಾಖಲೆಗಳಿAದ ಗೊತ್ತಾಗುತ್ತದೆ ಎಂದ ಹೇಳಿದರು. ಎರಡು ದಸರಾ ಉತ್ಸವಗಳಿಗೆ ನಗರಪಾಲಿಕೆಯಿಂದ ತಲಾ 50 ಲಕ್ಷ ರೂ. ಸಾರ್ವಜನಿಕರ ತೆರಿಗೆ ಹಣ ನೀಡಲಾಗಿದೆ. ಸಾರಿಗೆ ಇಲಾಖೆಯಿಂದ 10 ಲಕ್ಷ ರೂ. ತೋಟಗಾರಿಕೆ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ ಮತ್ತಿತರ ಇಲಾಖೆಗಳಿಂದ ನಿಯಮಗಳನ್ನು ಗಾಳಿಗೆ ತೂರಿ ದಸರಾ ಉತ್ಸವಕ್ಕೆ ಹಣ ಪಡೆಯಲಾಗಿದೆ. ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸುಳ್ಳು ಲೆಕ್ಕ ಕೊಟ್ಟಿದ್ದಾರೆ. ಎರಡೂ ದಸರಾ ಉತ್ಸವಗಳಲ್ಲಿ 6-7
ಲಕ್ಷ ರೂ.ಗಳ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬAದಿದೆ. ಅವ್ಯವಹಾರ ಮಾಡಲೆಂದೇ ದಸರಾ ಉತ್ಸವ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಹು ಕೋಟಿ ರೂ. ಭ್ರಷ್ಟಾಚಾರದ ಬಗ್ಗೆ ಉನ್ನತ ತನಿಖೆ ನಡೆಸಲು ಆದೇಶ ನೀಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡುವುದಾಗಿ ಜಿ.ಎಸ್. ಬಸವರಾಜು ಹೇಳಿದರು. ರಾಷ್ಟಿçÃಯ ಮಾನವ ಪರಿಸರ ಸಂರಕ್ಷಣಾ ಪಡೆಯ ಉಪಾಧ್ಯಕ್ಷ
ಜಿ.ಕೆ. ಶ್ರೀನಿವಾಸ್, ಗೋಪಾಲಕೃಷ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.
