breaking news

ಪಾವಗಡದಲ್ಲಿ ಪತ್ರಕರ್ತನ ಮೇಲೆ ನಡೆದ ಹಲ್ಲೆ ಖಂಡನೀಯ:ಜಿಲ್ಲಾಸ್ಪತ್ರೆಯಲ್ಲಿದ್ದ ಸಂತ್ರಸ್ತ ಪತ್ರಕರ್ತನಿಗೆ ಕೆಯುಡಬ್ಲ್ಯುಜೆ ಬೆಂಬಲ

ಪಾವಗಡದಲ್ಲಿ ಪತ್ರಕರ್ತನ ಮೇಲೆ ನಡೆದ ಹಲ್ಲೆ ಖಂಡನೀಯ:ಜಿಲ್ಲಾಸ್ಪತ್ರೆಯಲ್ಲಿದ್ದ ಸಂತ್ರಸ್ತ ಪತ್ರಕರ್ತನಿಗೆ ಕೆಯುಡಬ್ಲ್ಯುಜೆ ಬೆಂಬಲ

ತುಮಕೂರು: ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಮಟ ಮಟ ಮಧ್ಯಾಹ್ನವೇ
ಮೂರ್ನಾಲ್ಕು ಮಹಿಳೆಯರು ಪತ್ರಕರ್ತನೊಬ್ಬನನ್ನ ಚಪ್ಪಲಿ ಸೇರಿದಂತೆ ಇತರೆ
ವಸ್ತುಗಳಿಂದ ಹೊಡೆದು ಎಳೆದಾಡುತ್ತಿದ್ದ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ
ವೈರಲ್ ಆಗಿ ತುಂಬಾ ಚರ್ಚೆಗೆ ಗ್ರಾಸವಾಗಿದ್ದು ಈ ವಿಡಿಯೋದಲ್ಲಿ ಪಾವಗಡ ತಾಲೂಕಿನ
ರಾಮಾಂಜಿನಪ್ಪ ಎಂಬ ಪತ್ರಕರ್ತನನ್ನು ಎಳೆದಾಡಿ ಥಳಿಸಿ ಹಲ್ಲೆ ಮಾಡಲಾಯಿತು,
ನಂತರ ಅಲ್ಲೇ ಒಳಗಾದ ಪತ್ರಕರ್ತ ರಾಮಾಂಜಿನಪ್ಪ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ
ಚಿಕಿತ್ಸೆಗೆ ದಾಖಲಾದ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ
ತುಮಕೂರು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಈ ರಘುರಾಮ್
ನೇತೃತ್ವದ ಸದಸ್ಯರ ತಂಡ ಆಸ್ಪತ್ರೆಗೆ ಭೇಟಿ ನೀಡಿ ನಡೆದ ಘಟನೆ ಖಂಡಿಸಿ ಹಣ್ಣು
ವಿತರಣೆ ಮಾಡಿ ಪತಕರ್ತನಿಗೆ ಸಾಂತ್ವನಾ ಹೇಳಲಾಯಿತು.
ನೇರ ನಿಷ್ಠುರ ಮತ್ತು ವಸ್ತುನಿಷ್ಠ ನೈಜ್ಯತೆಯ ಸುದ್ದಿಗಳನ್ನು ಮಾಡುವ
ಪತ್ರಕರ್ತರು ವಿವಿಧ ಕಾರಣಗಳಿಂದಾಗಿ ಈ ರೀತಿಯ ಹಲ್ಲೆಗಳಿಗೆ
ಒಳಗಾಗುತ್ತಿದ್ದು ಇಂತಹ ಘಟನೆ ನಡೆಸಿದವರ ವಿರುದ್ಧ ಜಿಲ್ಲಾಡಳಿತ ಮತ್ತು ಜಿಲ್ಲಾ
ಪೊಲೀಸ್ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಂಘದ ಎಲ್ಲಾ ಸದಸ್ಯರು ಒತ್ತಾಯಿಸಿದರು.

ವೇಳೆ ಕಾ.ನಿ.ಪ. ಪ್ರಧಾನ ಕಾರ್ಯದರ್ಶಿ ರಘುರಾಮ್ ಅವರು ಮಾತನಾಡಿ ಪಾವಗಡ
ಪತ್ರಕರ್ತನಾದ ರಾಮಾಂಜಿನಪ್ಪ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ
ವಿರುದ್ಧ ಈಗಾಗಲೇ ಜಿಲ್ಲಾ ಪೊಲೀಸ್ ಅವರು ಪ್ರಕರಣ ದಾಖಲಿಸಿಕೊಂಡು
ಆರೋಪಿಗಳನ್ನು ವಿರುದ್ದ ಕ್ರಮಕೈಗೊಂಡಿದ್ದಾರೆ ಜಿಲ್ಲೆಯಲ್ಲಿ ಯಾವುದೇ
ಪತ್ರಕರ್ತನಿಗೂ ಇಂತಹ ಸ್ಥಿತಿ ಆಗಬಾರದು ಪತ್ರಕರ್ತರು ಇತ್ತೀಚಿನ ದಿನಗಳಲ್ಲಿ
ತಮ್ಮ ಪ್ರಾಣ ಜೀವನದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ ನೈಜ್ಯತೆಯ
ವರದಿಗಾಗಿ ಹೋರಾಡುತ್ತಿದ್ದಾರೆ ಇಂಥ ಸಂದರ್ಭದಲ್ಲಿ ಕೆಲವರು ಇಂತಹ
ಕುಕ್ಋತ್ಯಗಳನ್ನ ಮಾಡಲು ಸಂಚು ಮಾಡುವುದು ಹಲ್ಲೇ ನಡೆಸುವುದು
ಖಂಡನೀಯವಾಗಿದ್ದು ಇದನ್ನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ
ತೀವ್ರವಾಗಿ ವಿರೋಧ ಮಾಡುತ್ತದೆ ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಅಜ್ಗರ್ ಬೇಗ್
ಅವರನ್ನು ಭೇಟಿಯಾಗಿ ಹಲ್ಲೆ ಗೊಳಗಾದ ಪತ್ರಕರ್ತ ರಾಮಾಂಜಿನಪ್ಪ ಅವರಿಗೆ
ಸೂಕ್ತ ರೀತಿಯ ಎಲ್ಲ ಚಿಕಿತ್ಸೆಗಳನ್ನು ಉಚಿತವಾಗಿ ನೀಡಬೇಕು ಹೆಚ್ಚಿನ ಚಿಕಿತ್ಸೆ
ಅವಶ್ಯವಿದ್ದರೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಲಾಯಿತು.

The attack on a journalist in Pavagada is condemnable; KUWJ support for injured journalists in district hospital

Share this post

About the author

Leave a Reply

Your email address will not be published. Required fields are marked *