breaking news

ಪದವೀಧರರ ಸಮಸ್ಯೆಗಳಿಗೆ ವಿಧಾನಪರಿಷತ್‌ನಲ್ಲಿ ಧ್ವನಿಯಾಗುತ್ತೇನೆ: ಅಡ್ವೊಕೇಟ್ ಬರೀದ್

ಪದವೀಧರರ ಸಮಸ್ಯೆಗಳಿಗೆ ವಿಧಾನಪರಿಷತ್‌ನಲ್ಲಿ ಧ್ವನಿಯಾಗುತ್ತೇನೆ: ಅಡ್ವೊಕೇಟ್ ಬರೀದ್

ತುಮಕೂರು:ಪದವಿಧರರ ಕ್ಷೇತ್ರದ ಚುನಾವಣೆ ಎಂದರೆ ಅದು ಪ್ರಜ್ಞಾವಂತರ ಚುನಾವಣೆ. ಹಾಗಾಗಿ ರಾಜಕೀಯ ಪಕ್ಷಗಳಿಂತ ಪದವಿಧರರ ಪರವಾಗಿ ಕೆಲಸ ಮಾಡುವ ಅಭ್ಯರ್ಥಿಗಳನ್ನು ಮತದಾರರ ಬೆಂಬಲಿಸುವ ಸಾಧ್ಯತೆ ಹೆಚ್ಚಿದ್ದು, ಈ ಬಾರಿಯ ಚುನಾವಣೆಯಲ್ಲಿ ಸ್ವಾತಂತ್ರ ಅಭ್ಯರ್ಥಿಯಾಗಿರುವ ಕ್ರಮ ಸಂಖ್ಯೆ 10ರ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸುವAತೆ ಆಗ್ನೇಯ ಪದವಿಧರರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಅಡ್ವೋಕೆಟ್ ಬರೀದ್ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2020ರ ಚುನಾವಣೆಯಲ್ಲಿ 1.08 ಲಕ್ಷ ಇದ್ದ ಮತದಾರರು, 2026ರಲ್ಲಿ 1.84 ಲಕ್ಷಕ್ಕೆ ಹೆಚ್ಚಳವಾಗಿದೆ.ಚುನಾವಣೆಯ ಮೇಲೆ ನಂಬಿಕೆ ಇಟ್ಟಿರುವ ಪದವಿಧರರು ಹೆಚ್ಚು ಹೆಚ್ಚಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊAಡಿದ್ದಾರೆ.ಈ ಮತದಾರರಿಗೆ ನ್ಯಾಯ ಒದಗಿಸಲು ರಾಷ್ಟಿçÃಯ ಪಕ್ಷದಿಂದ ಗೆಲುವು ಸಾಧಿಸುವ ಅಭ್ಯರ್ಥಿಗಳಿಂದ ಸಾಧ್ಯವಿಲ್ಲ.ಪ್ರಶ್ನೆ ಕೇಳಲು ಪಕ್ಷದ ಹೈಕಮಾಂಡ್ ಮುಂದೆ ಅನುಮತಿಗೆ ಕಾಯಬೇಕಾದ ಪರಿಸ್ಥಿತಿ ಇದೆ.ಹಾಗಾಗಿ ಸ್ವತಂತ್ರ ಅಭ್ಯರ್ಥಿಯಾಗಿರುವ, ವಕೀಲನಾಗಿ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿರುವ, ಪದವಿಧರರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ನನ್ನನ್ನು ಬೆಂಬಲಿಸಬೇಕೆAದರು.ಆಗ್ನೇಯ ಪದವಿಧರರ ಕ್ಷೇತ್ರದ ಕಣದಲ್ಲಿ ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಒಟ್ಟು 10 ಜನರು ಕಣದಲ್ಲಿದ್ದಾರೆ.ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಂದ ಪದವಿಧರರ ಹಿತ ಕಾಯುವ ಯಾವುದೇ ಭರವಸೆಗಳಿಲ್ಲ.ಕೇವಲ ಒಂದು ಪಕ್ಷದ ಅಭ್ಯರ್ಥಿಗಳಾಗಿ ಮಾತ್ರ ಕಣದಲ್ಲಿದ್ದಾರೆ.

ಆದರೆ ಹಲವು ದಿನಗಳಿಂದ ಪದವಿಧರರ ಒಡನಾಟ ಇಟ್ಟುಕೊಂಡು ಅವರ ಬೇಕು,ಬೇಡಗಳನ್ನು ಗಮನಿಸಿರುವ ನಾನು ಆರು ಪ್ರಮುಖ ಅಂಶಗಳನ್ನು ಒಳಗಗೊಂಡ ಪ್ರಣಾಳಿಕೆ ನೀಡಿದ್ದು,ಎಲ್ಲವೂ ನೆರವೇರಿಸುವಂತಹುವುಗಳೇ ಆಗಿವೆ.ಪ್ರತಿ ಜಿಲ್ಲೆಗಳಲ್ಲಿ ಡೀ.ಸಿ. ನೇತೃತ್ವದಲ್ಲಿ ಪದವಿಧರರ ವೇದಿಕೆ ಸ್ಥಾಪನೆ,ಪದವಿಧರರ ದುಖಃ ದುಮ್ಮಾನಗಳಿಗೆ ಸ್ಪಂದಿಸಲು ಡಿಜಿಟಲ್ ಸಂಪರ್ಕ ಪೋರ್ಟೆಲ್,ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಗ್ರಂಥಾಲಯಗಳ ಅಧುನೀಕರಣ ಮತ್ತು ಡಿಜಿಟಲೀಕರಣ, ಖಾಸಗಿ ಶಿಕ್ಷಕರು ಮತ್ತು ಉಪನ್ಯಾಸಕರ ಕಲ್ಯಾಣಕ್ಕೆ ಅದ್ಯತೆ, ನ್ಯಾಯಾಲಯಗಳಿಗೆ ಸೌರ ವಿದ್ಯುತ್ ಸೌಲಭ್ಯ, ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ವೃತ್ತಿಪರ ಶಿಕ್ಷಣ ಇವು ನಮ್ಮ ಅದ್ಯತೆಗಳಾಗಿವೆ ಎಂದು ಅಡ್ವೋಕೇಟ್ ಬರೀದ್ ತಿಳಿಸಿದರು.ಪದವಿಧರರ ಕ್ಷೇತ್ರದ ಚುನಾವಣೆ ಎಂದರೆ ಕೇವಲ ಆಯ್ಕೆಯಲ್ಲ.ಅದು ಪದವಿಧರರ ಹಕ್ಕು ಮತ್ತು ನಿರುದ್ಯೋಗಿ ಯುವಕರ ಭವಿಷ್ಯ ಮತ್ತು ಶಿಕ್ಷಕರ ಸಮಸ್ಯೆಗಳಿಗೆ ದ್ವನಿಯಾಗಲು ದೊರೆಯುವ ಅವಕಾಶವಾಗಿದೆ.

ಪದವಿಧರರ ಸಮಸ್ಯೆಗಳಿಗೆ ಸ್ಪಂದಿಸುವುದು, ವಿಧಾನಪರಿಷತ್ತಿನಲ್ಲಿ ಪದವಿಧರರ ಪರ ದ್ವನಿ ಎತ್ತುವುದು, ನನ್ನ ಗುರಿ ಅಧಿಕಾರವಲ್ಲ, ಸೇವೆ ನನ್ನ ಸಂಕಲ್ಪ.ಹಣದ ಅಮೀಷಕ್ಕೆ ಒಳಗಾಗದೆ ಪ್ರಾಮಾಣಿಕತೆ ಮತ್ತು ಬದ್ದತೆಗೆ ಮನ್ನಣೆ ನೀಡಿ, ಕ್ರಮ ಸಂಖ್ಯೆ 10 ಅಡ್ವೋಕೇಟ್ ಬರೀದ್ ಹೆಸರಿನ ಮುಂದೆ 1 ಎಂದು ಬರೆಯುವ ಮೂಲಕ ಗೆಲುವಿಗೆ ಸಹಕಾರಿಯಾಗುವಂತೆ ಬರೀದ್ ಮನವಿ ಮಾಡಿದರು.ಈ ವೇಳೆ ಪದವಿಧರರಾದ ನವೀನಕುಮಾರ್, ಆದರ್ಶ, ಇಮ್ರಾನ್, ಸೈಯದ್ ಸಪ್ದಾರ್, ಅನಿಲ್, ಮಹಬೂಬ್ ಪಾಷ, ಆದಿಲ್ ಪಾಷ ಮತ್ತಿತರರು ಉಪಸ್ಥಿತರಿದ್ದರು.

I Will Raise Graduates’ Issues in the Legislative Council: Advocate Bareed

Share this post

About the author

Leave a Reply

Your email address will not be published. Required fields are marked *