breaking news

ತುಮುಲ್ ನೇಮಕಾತಿಯಲ್ಲಿ ಅಕ್ರಮದ ಆರೋಪ: 2016–17ರ ನೇಮಕಾತಿ ಸಮಗ್ರ ತನಿಖೆಗೆ ಆಗ್ರಹ

ತುಮುಲ್ ನೇಮಕಾತಿಯಲ್ಲಿ ಅಕ್ರಮದ ಆರೋಪ: 2016–17ರ ನೇಮಕಾತಿ ಸಮಗ್ರ ತನಿಖೆಗೆ ಆಗ್ರಹ

ತುಮಕೂರು:ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ(ತುಮುಲ್)ನಲ್ಲಿ 2016–17ನೇ ಸಾಲಿನಲ್ಲಿ ನಡೆಸಿದ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು,ಇತ್ತೀಚಿನ ಸುಪ್ರಿಂಕೋರ್ಟು ತೀರ್ಪು ಇದಕ್ಕೆ ಸಾಕ್ಷಿ ಎಂಬAತೆ ಇದೆ.ಹಾಗಾಗಿ ಇಡೀ ನೇಮಕಾತಿ ಪ್ರಕ್ರಿಯೆಯನ್ನೇ ತನಿಖೆಗೆ ಒಳಪಡಿಸಬೇಕು ಎಂದು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಅರುಣ್‌ಕುಮಾರ್, ವೆಂಕಟೇಶ್, ಶಾಂತಲಾ, ಶಾಂತರಾಜು, ರೇಣುಕಯ್ಯ, ಪುಟ್ಟರಾಜು, ರಜತ್ ಹಾಗೂ ಮಂಜುನಾಥ್ ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಅತಿ ಹೆಚ್ಚು ಅಂಕಪಡೆದಿರುವ ಅಭ್ಯರ್ಥಿಗಳನ್ನು ಬಿಟ್ಟು, ಕಡಿಮೆ ಅಂಕ ಪಡೆದಿರುವ ಕೆಲವರಿಗೆ ಉದ್ಯೋಗ ನೀಡಲಾಗಿದೆ. ವೇಣುಗೋಪಾಲ್ ಎಂಬುವವರು 102 ಅಂಕಗಳನ್ನು ಪಡೆದಿದ್ದು, ಮಧುಸೂಧನ್ ಎಂಬುವವರು 77 ಅಂಕ ಪಡೆದಿದ್ದರು.

ಆದರೆ ಹೆಚ್ಚು ಅಂಕ ಪಡೆದ ವೇಣುಗೋಪಾಲ್ ಎಂಬುವವರ ಬದಲಿಗೆ ಮಧುಸೂಧನ್ ಉದ್ಯೋಗ ನೀಡಲಾಗಿತ್ತು. ವೇಣುಗೋಪಾಲ್ ಆಡಳಿತ ಮಂಡಳಿಯ ಈ ನಿರ್ಧಾರ ಪ್ರಶ್ಮಿಸಿ, ಹೈಕೋರ್ಟು, ಸುಪ್ರಿಂಕೋರ್ಟಿನ ವರೆಗೆ ಹೋಗಿ ಗೆಲುವು ಸಾಧಿಸಿದ್ದಾರೆ. ಇದೇ ಸುಮಾರು 35-40ರವರವಗೆ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದರು.ನೇರ ನೇಮಕಾತಿಯಲ್ಲಿ ಪಡೆದ ಅಂಕ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳ ತುಲನೆ ಮಾಡಲು ಮೂಲ ದಾಖಲಾತಿಗಳನ್ನು ಕೇಳಿದರೆ ಕಳೆದು ಹೋಗಿದೆ ಎಂಬ ಸಬೂಬು ಹೇಳುತ್ತಿದ್ದಾರೆ.ಅಲ್ಲದೆ ಕಳೆದ ಅಕ್ಟೋಬರ್ 14ರಂದು ಆಡಳಿತ ವಿಭಾಗದಲ್ಲಿರುವ ಇಬ್ಬರು ಮಹಿಳಾ ಸಿಬ್ಬಂದಿಗಳು ಪರೀಕ್ಷೆಗೆ ಸಂಬAಧಿಸಿದ ದಾಖಲಾತಿಗಳನ್ನು ನಕಲು ಮಾಡಿರುವುದು ಸಿಸಿಟಿವಿ ವಿಡಿಯೋದಲ್ಲಿ ದಾಖಲಾಗಿದ್ದರು ಸಹ ತುಮುಲ್ ಆಡಳಿತ ಆ ಇಬ್ಬರು ಮಹಿಳಾ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿದೆ.ತುಮುಲ್ ನೇಮಕಾತಿ ಅಕ್ರಮಗಳ ಬಗ್ಗೆ ನೊಂದ ಅಭ್ಯರ್ಥಿಗಳು ತುಮುಲ್ ಆಡಳಿತ ಮಂಡಳಿಗೆ ಹಾಗೂ ಸಹಕಾರ ಇಲಾಖೆಗೆ ದೂರು ನೀಡಿದ ಬೆನ್ನಲ್ಲೇ ದಾಖಲಾತಿಗಳನ್ನು ತಿದ್ದಲು ಪ್ರಭಾವಿಗಳು ಮುಂದಾಗಿದ್ದು, ಆತ್ಮೀಯ ನೌಕರರ ಮೂಲಕ ದಾಖಲಾತಿಗಳ ನಕಲನ್ನು ತರಿಸಿಕೊಂಡಿರಬಹುದು ಎಂದು ಆರೋಪಿಸಿದರು.

ಕೆಲ ಅಭ್ಯರ್ಥಿಗಳು ಸಂದರ್ಶನಕ್ಕೆ ಬರದಿದ್ದರೂ ಅವರಿಗೆ ಅಂಕಗಳನ್ನು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.ಈ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕು.ನಕಲಿ ದಾಖಲೆಗಳ ಬಳಕೆಯ ಆರೋಪಗಳನ್ನೂ ಪರಿಶೀಲಿಸಿ, ತಪ್ಪು ದೃಢಪಟ್ಟರೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೊಂದ ಅಭ್ಯರ್ಥಿಗಳಾದ ನಮ್ಮಗಳ ಆಗ್ರಹವಾಗಿದೆ.ಮಾಜಿ ಸೈನಿಕರು, ಮಹಿಳೆಯರು ಹಾಗೂ ಇತರ ಮೀಸಲಾತಿ ವರ್ಗಗಳಿಗೆ ಸಂಬAಧಿಸಿದ ನಿಯಮಗಳನ್ನು ಸರಿಯಾಗಿ ಪಾಲಿಸಲಾಗಿದೆಯೇ ಎಂಬುದನ್ನೂ ಪರಿಶೀಲಿಸಬೇಕೆಂದು ಮನವಿ ಮಾಡಲಾಗಿದೆ. ಮೀಸಲಾತಿ ಹುದ್ದೆಗಳನ್ನು ಇತರ ವರ್ಗದ ಅಭ್ಯರ್ಥಿಗಳಿಗೆ ನೀಡಿದ್ದರೆ, ಅದಕ್ಕೆ ಸಮರ್ಥ ಪ್ರಾಧಿಕಾರದ ಅನುಮತಿ ಇದೆಯೇ ಮತ್ತು ರೋಸ್ಟರ್ ಹಾಗೂ ಮೆರಿಟ್ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ದಾಖಲೆಗಳ ಆಧಾರದಲ್ಲಿ ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ.ಮೂಲ ಅಂಕಪಟ್ಟಿಗಳು, ಉತ್ತರ ಪÀತ್ರಿಕೆಗಳು, ಸಂದರ್ಶನದ ಅಂಕಗಳು, ಆಯ್ಕೆಪಟ್ಟಿಗಳು ಮತ್ತು ನೇಮಕಾತಿ ಸಮಿತಿಯ ದಾಖಲೆಗಳನ್ನು ಪರಿಶೀಲಿಸಿ,ಅಕ್ರಮಗಳು ದೃಢಪಟ್ಟಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

ಅನ್ಯಾಯಕ್ಕೆ ಒಳಗಾದ ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸ್ವತಂತ್ರ‍್ಯ ಸಂಸ್ಥೆಯಿAದ ತನಿಖೆ ಮಾಡಲು ಸರಕಾರ ಮುಂದಾಗಬೇಕು ಎನ್ನುವ ಮಾತುಗಳು ಕೇಳಿಬಂದಿವೆ.ಕೆಪಿಎಸ್ಸಿ ಹಗರಣದ ಮಾದರಿ ತುಮುಲ್ ನೇಮಕಾತಿ ಮಾದರಿ ಒಂದೇ ಎನ್ನುವಂತಾಗಿದ್ದು, ಕೆಪಿಎಸ್ಸಿಗೆ ಹಗರಣದಲ್ಲಿ ಸರಕಾರ ನಡೆಸುತ್ತಿರುವ ತನಿಖೆಯಂತೆ ತುಮುಲ್ ನಲ್ಲಿ ನಡೆದಿರುವ 2016-17ರ ನೇಮಕಾತಿ ಅಕ್ರಮವನ್ನು ತನಿಖೆಗೆ ಒಳಪಡಿಸಬೇಕು ಎಂದು ನೊಂದ ಅಭ್ಯರ್ಥಿಗಳು ತುಮುಲ್ ಆಡಳಿತ ಮಂಡಳಿಯನ್ನು ಆಗ್ರಹಿಸಿದ್ದಾರೆ.ತುಮುಲ್‌ನಲ್ಲಿ 2016-17ನೇ ಸಾಲಿನ ನಡೆದಿರುವ ನೇಮಕಾತಿಯಲ್ಲಿ ಅಕ್ರಮವಾಗಿರುವ ಬಗ್ಗೆ ನೊಂದ ಅಭ್ಯರ್ಥಿಗಳು ತುಮುಲ್ ಆಡಳಿತ ಮಂಡಳಿಗೆ ದೂರು ನೀಡಿದ ನಂತರ ರಚಿಸಿದ ತನಿಖಾ ಯಾವ ತನಿಖೆಯನ್ನು ನಡೆಸದೇ ಸುಮ್ಮನಾಗಿದೆ.

ನೇಮಕಾತಿಯಲ್ಲಿ ನೇಮಕಾತಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿ ಸಿರುವ, ನೇಮಕಾತಿಗೆ ನಿಗದಿಪಡಿಸಿರುವ ಕನಿಷ್ಠ ಅಂಕಗಳನ್ನು ಪಡೆಯದೇ ಇರುವ ಅಭ್ಯರ್ಥಿಗಳು ಹಾಗೂ ಸಂದರ್ಶನ ಅರ್ಹತೆಯೇ ಇಲ್ಲದ, ಸಂದರ್ಶನಕ್ಕೆ ಹಾಜರಾಗದವರು ಸಹ ಹೇಗೆ ನೇಮಕಗೊಂಡರು ಎನ್ನುವುದರ ಬಗ್ಗೆ ತನಿಖಾ ತಂಡ ಬಹಿರಂಗ ಪಡಿಸಬೇಕಿದೆ ಎಂದು ಸುದ್ದಿಗೋಷ್ಠಿಯಲ್ಲಿದ್ದ ನೊಂದ ಅಭ್ಯರ್ಥಿಗಳು ಒತ್ತಾಯಿಸಿದರು.

Tumkur | TUMUL Recruitment Irregularities Alleged: Demand for Comprehensive Probe into 2016–17 Hiring

Share this post

About the author

Leave a Reply

Your email address will not be published. Required fields are marked *