breaking news

ಓದುವ ಸಮಯದಲ್ಲಿ ಇನ್ನಿಲ್ಲದ ಆಕರ್ಷಣೆಗೆ ಒಳಗಾಗಿ,ದಾರಿ ತಪ್ಪಿದರೆ,ಸಂಕಷ್ಟದ ಜೀವನ: ನ್ಯಾ.ನೂರುನ್ನಿಸಾ

ಓದುವ ಸಮಯದಲ್ಲಿ ಇನ್ನಿಲ್ಲದ ಆಕರ್ಷಣೆಗೆ ಒಳಗಾಗಿ,ದಾರಿ ತಪ್ಪಿದರೆ,ಸಂಕಷ್ಟದ ಜೀವನ: ನ್ಯಾ.ನೂರುನ್ನಿಸಾ

ತುಮಕೂರು: ಯುವಜನರು,ಅದರಲ್ಲಿಯೂ ಹೆಣ್ಣು ಮಕ್ಕಳು ಓದುವ
ಸಮಯದಲ್ಲಿ ಇನ್ನಿಲ್ಲದ ಆಕರ್ಷಣೆಗೆ ಒಳಗಾಗಿ,ದಾರಿ
ತಪ್ಪಿದರೆ,ಬದುಕಿನದ್ದಕ್ಕೂ ಸಂಕಷ್ಟದ ಜೀವನ ನಡೆಸಬೇಕಾಗುತ್ತದೆ
ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ
ನ್ಯಾ.ಶ್ರೀಮತಿ ನೂರುನ್ನಿಸಾ ಎಚ್ಚರಿಸಿದ್ದಾರೆ.
ನಗರದ ಮಳೆಕೋಟೆಯ ಧಾನಿಶ್ ಸಭಾಂಗಣದಲ್ಲಿ ಕರ್ನಾಟಕ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ,ತೆಹ್ರಿರಿಕ್‌ಎ ಉರ್ದು ಆದಬ್ ಸಹಯೋಗದಲ್ಲಿ
ಹಮ್ಮಿಕೊಂಡಿದ್ದ ಮೌಲಾನ ಅಬ್ದುಲ್ ಕಲಾಂ ಆಜಾದ್ ಶಾಲೆಯ ಮಕ್ಕಳಿಗೆ
ಹಮ್ಮಿಕೊಂಡಿದ್ದ ಪರೀಕ್ಷಾ ಪೂರ್ವ ಮಾರ್ಗದರ್ಶನ ಕಾರ್ಯಾಗಾರ ಹಾಗೂ
ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ
ಅವರು,ಮೊಬೈಲ್, ಇನ್ನಿತರ ಅಕರ್ಷಣೆಗಳಿಂದ ದೂರವಿದ್ದು,ವಿದ್ಯಾರ್ಥಿ
ಜೀವನವನ್ನು ಸದುಪಯೋಗ ಪಡಿಸಿಕೊಂಡರೆ,ಸಾಧಕರ ಪಟ್ಟಿಯಲ್ಲಿ
ನಿಲ್ಲಬಹುದು.ಇದಕ್ಕೆ ನನ್ನ ಜೀವನವೇ ಉದಾಹರಣೆ ಎಂದರು.

ನಮ್ಮ ತಂದೆ, ತಾಯಿ, ನಮಗೆ ಬೇಕಾದನ್ನು ಕೊಡಿಸಲಿಲ್ಲ,ಒಳ್ಳೆಯ ಶಾಲೆಗೆ
ಸೇರಿಸಲಿಲ್ಲ ಎಂದು ದೂರುವ ಬದಲು ಇರುವುದರಲ್ಲಿಯೇ ಕಷ್ಟಪಟ್ಟು
ಓದಿ,ಒಳ್ಳೆಯ ಅಂಕ ಪಡೆದು,ಇರುವ ಅವಕಾಶಗಳನ್ನು ಬಳಸಿಕೊಂಡರೆ
ನೀವು ಕೂಡ ನಮ್ಮಂತೆ ನ್ಯಾಯಾಧೀಶರೋ,ವಕೀಲರೋ,ಅಧಿಕಾರಿಗಳೋ
ಆಗಬಹುದು.ಮನೆಯಲ್ಲಿ ಅಪ್ಪ, ಅಮ್ಮ ನಮಗೆ ಸಮಯ ನೀಡುತ್ತಿಲ್ಲ
ಎಂದು ಸೊಷಿಯಲ್ ಮೀಡಿಯಾದಲ್ಲಿ ಗೆಳೆಯರನ್ನು ಹುಡುಕುವ ಬದಲು
ಅದೇ ಸಮಯವನ್ನು ಓದಿಗೆ ನೀಡಿದರೆ ಸಕಲವೂ ನಿಮ್ಮ ಬಳಿ ಬರುತ್ತದೆ.ಅರ್ಥಿಕ
ಸ್ವಾವಲಂಭಿಗಳಾದರೆ,ನಿಮ್ಮ ಪೋಷಕರು ಈಡೇರಿಸಲಾಗದ ಬೇಡಿಕೆ
ಗಳನ್ನು ನೀವೇ ಸ್ವತಃ ಈಡೇರಿಸಿಕೊಳ್ಳುವ ಅವಕಾಶ
ದೊರೆಯುತ್ತದೆ.ಅದೇ ರೀತಿ ಪೋಷಕರು ಸಹ ನಿಮ್ಮ ಮಕ್ಕಳನ್ನು
ಇನ್ನೊಂದು ಮಗುವಿನೊಂದಿಗೆ ತಾಳೆ ಹಾಕಿ ನೋಡುವ ಬದಲು,ಆತ ಒಳ್ಳೆಯ
ಮಾನವೀಯತೆ ಉಳ್ಳ ಮನುಷ್ಯನಂತಾಗಲು ಪ್ರೇರೆಪಿಸಬೇಕೆಂದು
ನ್ಯಾ.ನೂರುನ್ನಿಸಾ ಸಲಹೆ ನೀಡಿದರು.


ಈ ಹಿಂದಿನ ದಿನಗಳಿಗೆ ಹೊಲಿಕೆ ಮಾಡಿದರೆ ಕೋರೋನ ೧ ಮತ್ತು ೨ನೇ
ಅಲೆಯ ಸಂದರ್ಭದಲ್ಲಿ ಅಪರಾಧ ಪ್ರಕರಣಗಳು,ಅದರಲ್ಲಿಯೂ ಹೆಣ್ಣು
ಮಕ್ಕಳ ಕಾಣೆಯಂತಹ ಪ್ರಕರಣಗಳು ಹೆಚ್ಚಾಗಿರುವುದನ್ನು
ಅಧ್ಯಯನದ ಮೂಲಕ ಕಾಣಬಹುದು.ಅದುವರೆಗೂ ಶೇ೩೭ರಷ್ಟಿದ್ದ ಹದಿ
ಹರೆಯದ ಹೆಣ್ಣು ಮಕ್ಕಳ ಯಂತಹ ಪ್ರಕರಣಗಳು ಕರೋನ
ಕಾಲದಲ್ಲಿ ಶೇ೭೫ರಿಂದ ೮೦ರವರೆಗೆ ಹೋಯಿತು.ಪೋಷಕರು ಮಕ್ಕಳಿಗೆ
ಅಗತ್ಯವಿರುವ ವಸ್ತುಗಳನ್ನು ಕೊಡಿಸಿ, ಆದರೆ ಅದು
ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಿ, ನಿಮ್ಮ ಮಕ್ಕಳ
ಚಲನವಲನದ ಮೇಲೆ ಕಣ್ಣಿಡಿ.ಇಲ್ಲದಿದ್ದರೆ, ನೀವು ಕೊರಗುವ ಜೊತೆಗೆ,
ಮಕ್ಕಳು ಕೊರಗುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು
ನ್ಯಾ.ನೂರುನ್ನಿಸಾ ಎಚ್ಚರಿಕೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿ,ಈ ಬಾರಿ ಜಿಲ್ಲೆಯ ಎಸ್.ಎಸ್.ಎಲ್.ಸಿ.
ಫಲಿತಾಂಶ ಅತಿ ಕಡಿಮೆ.ಅದರಲ್ಲಿಯೂ ಮೌಲಾನ ಅಬ್ದುಲ್ ಕಲಾಂ ಆಜಾದ್
ಶಾಲೆಯ ಫಲಿತಾಂಶ ತೀರ ಕಡಿಮೆ. ಇದನ್ನು ಮನಗಂಡು ಈ ಬಾರಿ ಫಲಿತಾಂಶ
ಹೆಚ್ಚಿಸಲು ಹಲವಾರು ಕಾರ್ಯಕ್ರಮಗಳನ್ನು ಇಲಾಖೆ
ಹಾಕಿಕೊಂಡಿದೆ.ಪ್ರಿಪರೇಟರಿ ಪರೀಕ್ಷೆಯಲ್ಲಿ ಎನ್.ಸಿ(ನಾಟ್ ಕಂಪ್ಲಿಟೆಡ್)ಆದ ಮಕ್ಕಳಿಗೆ
ಹೋಬಳಿ ಮಟ್ಟದಲ್ಲಿ ವಿಶೇಷ ತರಗತಿಗಳನ್ನು ಏರ್ಪಡಿಸುತಿದ್ದು, ಶಿಕ್ಷಕರು
ಇದರ ಸದುಪಯೋಗ ಪಡೆದುಕೊಂಡು, ಫಲಿತಾಂಶ ಹೆಚ್ಚಳಕ್ಕೆ
ಸಹಕಾರ ನೀಡಿಬೇಕೆಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಖಾದರ್ ಮಾತನಾಡಿ,ಎಲ್ಲಾ
ಮಕ್ಕಳಲ್ಲಿಯೂ ಪ್ರತಿಭೆ ಇದೆ. ಆದರೆ ಅದರ ಸದುಪಯೋಗವನ್ನು
ಹೇಗೆ ಮಾಡಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು
ಗಮಹರಿಸಬೇಕು.ಶಾಲೆಗೆ ಹೋಗುವ ಮಗು ಏನು ಕಲಿಯುತಿದ್ದಾನೆ.
ಆತನ ಸ್ನೇಹಿತ ಬಳಗದ ಬಗ್ಗೆಯೂ ಗಮನಹರಿಸಬೇಕು.

ಇಲ್ಲದಿದ್ದಲ್ಲಿ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಹೆಚ್ಚು. ಸಾಧನೆಗೆ
ಅಡ್ಡದಾರಿಗಳಿಲ್ಲ.ವಿದ್ಯುತ್ತೇ ಇಲ್ಲದೆ ಬಿಇ ವರೆಗೆ ಓದಿ, ಇಂದು ಅಡಿನಲ್ ಎಸ್.ಪಿ.
ಅಗಿದ್ದೇನೆ.ನನ್ನಂತಹ ಅನೇಕರು ಹಲವು ಕೊರತೆಗಳ ನಡುವೆಯೇ
ಹುಬ್ಬೇರಿಸುವಂತೆ ಸಾಧನೆ ಮಾಡಿದ್ದಾರೆ. ಅವರೆಲ್ಲರೂ ನಿಮಗೆ
ಸ್ಪೂರ್ತಿಯಾಗಬೇಕು. ಒಂದು ಹಂತದವರಗೆ ಸೊಷಿಯಲ್ ಮಿಡಿಯಾದಿಂದ
ದೂರವಿರಿ ಎಂದು ಸಲಹೆ ನೀಡಿದರು.
ತಹ್ರೀಕ್ ಉರ್ದು ಆದಬ್‌ನ ಅಧ್ಯಕ್ಷರಾದ ತಾಜುದ್ದೀನ್ ಷರೀಫ್ ಮಾತನಾಡಿ, ತಂದೆ,
ತಾಯಿಗಳಿಗಿAತ ಶಿಕ್ಷಕರಿಗೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಯೇ ಪೂರ್ಣ
ಮಾಹಿತಿ ಇರುತ್ತದೆ.ಹಾಗಾಗಿ ಕಲಿಕೆಯಲ್ಲಿ ಹಿಂದಿರುವ ಮಕ್ಕಳ ಪೋಷಕರ
ಜೊತೆ ಮಾತನಾಡಿ, ಮಕ್ಕಳು ಓದುವಂತೆ ಪ್ರೇರೆಪಿಸಿದರೆ ಹೆಚ್ಚಿನ
ಅನುಕೂಲವಾಗಲಿದೆ.ನಾವು ಎಂತಹವರು ಎಂಬುದನ್ನು ನಮ್ಮ ಸ್ನೇಹಿತರ
ವಲಯವನ್ನು ನೋಡಿ ತಿಳಿಯಬಹುದು.ಕೆಟ್ಟವರ ಸಹವಾಸ ಕೈ ಬಿಡಿ,ಐದು
ನಿಮಿಷದ ಮೊಬೈಲ್‌ಗೀಳು ನಿಮ್ಮ ಐವತ್ತು ವರ್ಷದ ಜೀವನವನ್ನು ಹಾಳು
ಮಾಡುತ್ತದೆ ಎಚ್ಚರಿಕೆ ವಹಿಸಿ,ನಿಮ್ಮೊಂದಿಗೆ ನಾವಿದ್ದೇವೆ. ಇಂದಿನಿAದಲೇ ಸವಾಲಾಗಿ
ಸ್ವೀಕರಿಸಿ,ಮೌಲಾನ ಶಾಲೆಯ ಮಕ್ಕಳು ಫೈಲ್ ಅಗದಂತೆ ಅಗತ್ಯ ಕ್ರಮ
ಕೈಗೊಂಡು ಒಳ್ಳೆಯ ವಿದ್ಯಾವಂತರಾಗೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ
ಅಧಿಕಾರಿ ಶಬ್ಬೀರ ಅಹ್ಮದ್ ಸರ್ಜಾಪುರ ಮಾತನಾಡಿ, ಇಲಾಖೆಯಿಂದ ಎಸ್.ಎಸ್.ಎಲ್.ಸಿ.
ಫಲಿತಾಂಶ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.ಅದಲ್ಲದೆ
ಮೌಲಾನ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆ ನೀಗಿಸಲು ಶಿಕ್ಷಕರ ಹುದ್ದೆ
ಭರ್ತಿಗೆ ಪ್ರಕ್ರಿಯೆ ಆರಂಭವಾಗಿವೆ.ತುರ್ತು ಸಂದರ್ಭದಲ್ಲಿ ಅತಿಥಿ
ಉಪನ್ಯಾಸಕರಿಂದ ಕಾರ್ಯಭಾರ ನಿರ್ವಹಿಸಲಾಗುತ್ತಿದೆ.ಅಬ್ದುಲ್ ಕಲಾಂ ಅವರ
ಆಶಯದೊಂದಿಗೆ ಉದಾತ್ತ ಗುರಿಯೊಂದಿಗೆ ಮುನ್ನೆಡೆಯಿರಿ, ನಿಮೊಂದಿಗೆ ಇಲಾಖೆ
ಕೈಜೋಡಿಸಲಿದೆ ಎಂದರು.
ವೇದಿಕೆಯಲ್ಲಿ ಕೆಎಂಡಿಸಿಯ ಜಿಲ್ಲಾ ವ್ಯವಸ್ಥಾಪಕ ಅಲೀಮ್ ಉಲ್ಲಾ, ಮೌಲಾನ ಅಜಾದ್
ಶಾಲೆಯ ಪ್ರಾಂಶುಪಾಲರಾದ ಹರೀಶ್, ಎಸ್.ಎಂ, ಇಆರ್‌ಓ ಅಫ್ಜಲ್‌ಖಾನ್
ಮತ್ತಿತರರು ಉಪಸ್ಥಿತರಿದ್ದರು. ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲಿ
ಅತಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಅಭಿನಂದಿಸಲಾಯಿತು.

SSC Students: If you go astray while studying, you will suffer for life: Judge Noorunnisa

Share this post

About the author

Leave a Reply

Your email address will not be published. Required fields are marked *