breaking news

೩೯ನೇ ಪತ್ರಕರ್ತರ ಸಮ್ಮೇಳನ ಯಶಸ್ವಿಗೊಳಿಸಲು ಸ್ವಯಂ ಸೇವಾ ಸಮಿತಿ ಬದ್ದ

೩೯ನೇ ಪತ್ರಕರ್ತರ ಸಮ್ಮೇಳನ ಯಶಸ್ವಿಗೊಳಿಸಲು ಸ್ವಯಂ ಸೇವಾ ಸಮಿತಿ ಬದ್ದ

ತುಮಕೂರು: ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಲ್ಪತರು ನಗರಿ ತುಮಕೂರಿನ ಎಸ್ ಎಸ್ ಐ ಟಿ ಗ್ರೀನ್ ಕ್ಯಾಂಪಸ್ ಆವರಣದಲ್ಲಿ ಮೊದಲನೆ ಬಾರಿಗೆ ೩೯ನೆಯ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವನ್ನು ಇದೇ ತಿಂಗಳ ೧೮ ಮತ್ತು ೧೯ರಂದು ಅದ್ದೂರಿಯಾಗಿ
ನಡೆಸಲು ನಿಶ್ಚಯಗೊಳಿಸಿದ್ದು ರಾಜ್ಯದಿಂದ ಬರುವ ಪತ್ರಕರ್ತರಿಗೆ ಯಾವುದೇ ರೀತಿಯ ತೊಂದರೆಗಳಾಗದAತೆ ಊಟ,ವಸತಿ, ಸಾರಿಗೆ, ಇತರೆ
ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಸ್ವಯಂ ಸೇವಾ ಸಮಿತಿಯು ನಗರದ ಪತ್ರಿಕಾ ಭವನದಲ್ಲಿ ಸಭೆ ನಡೆಸಿತು.
ಸಮಿತಿಯ ಅಧ್ಯಕ್ಷರಾದ ಜಯನುಡಿ ಜಯಣ್ಣ ಅವರ ನೇತೃತ್ವದಲ್ಲಿ ನಡೆದ ಸಭೆಗೆ ಕಾ.ನಿ.ಪ. ಪ್ರಧಾನ ಕಾರ್ಯದರ್ಶಿ, ಟಿ ಇ ರಘುರಾಮ್ ಅವರು
ಭಾಗಿಯಾಗಿ ಸಮ್ಮೇಳನ ಯಶಸ್ವಿಗೊಳಿಸಲು ಸ್ವಯಂ ಸೇವಾ ಸಮಿತಿಯ ಜವಾಬ್ದಾರಿಗಳ ಕುರಿತಾಗಿ ಸಲಹೆ ನೀಡಿದರು.
ಸ್ವಯಂ ಸೇವಾ ಸಮಿತಿಯ ಅಧ್ಯಕ್ಷ ಜಯನುಡಿ ಜಯಣ್ಣ ಅವರು ಮಾತನಾಡಿ ಮೊದಲ ಬಾರಿಗೆ ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿರುವ ೩೯ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸ್ವಯಂ ಸೇವಾ ಸಮಿತಿ ಬದ್ಧವಾಗಿದೆ ಸುಮಾರು ೩೦೦ಕ್ಕೂ ಹೆಚ್ಚು ಸ್ವಯಂ
ಸೇವಕರನ್ನ ಸಮ್ಮೇಳನಕ್ಕೆ ಬಳಸಿಕೊಳ್ಳುತ್ತಿದ್ದು ಇದರ ಸಲುವಾಗಿ ತುಮಕೂರು ವಿಶ್ವವಿದ್ಯಾಲಯಕ್ಕೆ ವಿವಿಧ ಶಾಲಾ ಕಾಲೇಜುಗಳ ಎನ್ಎಸ್ಎಸ್ ,ಏನ್ ಸಿ ಸಿ , ಸ್ಕೌಟ್ಸ್ ಅಂಡ್ ಗೈಡ್ಸ್ ಬಳಸಿಕೊಳ್ಳಲು ಮನವಿ ನೀಡಲಾಗಿದ್ದು ಸಮ್ಮೇಳನವನ್ನು ಶಿಸ್ತುಬದ್ಧ ಹಾಗೂ ಕ್ರಮಬದ್ಧವಾಗಿ ನಡೆಸಲು ನಮ್ಮ ಸ್ವಯಂಸೇವಕರು ಕಾರ್ಯ ನಿರ್ವಹಿಸಲಿದ್ದಾರೆ ನಗರಕ್ಕೆ ಆಗಮಿಸುವ ಪತ್ರಕರ್ತರಿಗೆ ಮಾಹಿತಿ ನೀಡುವುದು, ಊಟೋಪಚಾರ ಕೊಡಿಸುವುದು, ಮೆರವಣಿಗೆ ವೇಳೆ ಶಿಸ್ತು ಕಾಪಾಡುವುದು, ವೇದಿಕೆ ಹತ್ತಿರ ಅನಗತ್ಯವಾಗಿ ಗೊಂದಲ ಉಂಟಾಗದAತೆ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಲು ನಮ್ಮ ಸ್ವಯಂಸೇವಕರು ಎರಡು ದಿನಗಳ ಕಾಲ ಕಟಿಬದ್ಧರಾಗಿ ನಿಂತು
ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

Voluntary Serv Committee to make the 39th Conference of Journalists a success
ಚಿ.ನಾ ಏಕೇಶ್ವರವರ ೭೩ ನೇ ಜನ್ಮದಿನದ ಅಂಗವಾಗಿ ನೂತನ ಸಂವತ್ಸರದ ಕ್ಯಾಲೆಂಡರ್ ಮತ್ತು ಅವರ ಸ್ಮರಣ ಸಂಚಿಕೆಯ ಪುಸ್ತಕ ಬಿಡುಗಡೆ

ಇದೇ ವೇಳೆ ತುಮಕೂರು ಜಿಲ್ಲೆ ಕಂಡ ಏಕೇಶ್ ಕನ್ನಡ ದಿನಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ
ಅಧ್ಯಕ್ಷರಾಗಿದ್ದ ಚಿ.ನಾ ಏಕೇಶ್ವರವರ ೭೩ ನೇ ಜನ್ಮದಿನದ ಅಂಗವಾಗಿ ನೂತನ ಸಂವತ್ಸರದ ಕ್ಯಾಲೆಂಡರ್ ಮತ್ತು ಅವರ ಸ್ಮರಣ ಸಂಚಿಕೆಯ
ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು ಈ ವೇಳೆ ಎಕೇಶ್ವರ್ ಅವರ ನಡುವೆ ಇದ್ದ ಒಡನಾಟ ಕುರಿತಂತೆ ಸಮಿತಿಯ ಸದಸ್ಯರು ತಮ್ಮ ಅನಿಸಿಕೆಗಳನ್ನ ಹಂಚಿಕೊAಡರು.
ಈ ಸಂದರ್ಭದಲ್ಲಿ ಸ್ವಯಂ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಮಾರುತಿ ಗಂಗಹನುಮಯ್ಯ, ಉಪಾಧ್ಯಕ್ಷರಾದ ಕರುಣಾಕರ್, ಈಟವಿ ಭಾರತ್ ಶಾಂತಿನಾಥ್ ಜೈನ್, ಪ್ರಧಾನ ಸಂಚಾಲಕ ಹಾಗೂ ಕ್ರೀಡಾ ತರಬೇತುದಾರರಾದ ಪ್ರದೀಪ್
ಕುಮಾರ್, ಸಮಿತಿಯ ಸದಸ್ಯರುಗಳಾದ ಜಗನ್ನಾಥ್, ಸಂಜೆವಾಣಿ ರಮೇಶ್, ದಾದಾಪೀರ್, ಕ್ಯಾಸಂದ್ರ ನರಸಿಂಹ, ಯೂಸುಫ್ ಉಲ್ಲಾ, ಸೂರ್ಯಪ್ರಗತಿ ರವಿಕುಮಾರ್, ಕಾಗ್ಗೆರೆ ಸುರೇಶ್, ಶಿವಾನಂದ, ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

The new year calendar and a commemorative book were released on the occasion of Chi.na Ekash’s 73rd birthday.

Share this post

About the author

Leave a Reply

Your email address will not be published. Required fields are marked *