ತುಮಕೂರು ಜಿಲ್ಲಾ ಹಾಲು ಒಕ್ಕಡದ (ತುಮುಲ್) ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಾವಗಡ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್ ವಿ ವೆಂಕಟೇಶ್ ರವರಿಗೆ ಪಾವಗಡ ತಾಲೂಕಿನ ಮುಸ್ಲಿಂ ಸಮುದಾಯದ ಮುಖಂಡರಿಂದ ಶುಭಾಶಯಗಳನ್ನು ಕೋರಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯದರ್ಶಿ ಷಾ ಬಾಬು ಅವರು ನಮ್ಮ ಪಾವಗಡ ತಾಲೂಕು ಗಡಿನಾಡಿಗೆ ತುಮಲ್ ಅಧ್ಯಕ್ಷರು ಮಾಡಿರುವುದು ಸಂತೋಷದ ವಿಷಯವಾಗಿದೆ ಜಿಲ್ಲೆಯ ಜಿಲ್ಲಾ ಉಸ್ತುವರಿ ಮಂತ್ರಿ ಹಾಗೂ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್, ಹಾಗೂ ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ ಅವರನ್ನು ಧನ್ಯವಾದಗಳು ಎಂದು ಹೇಳಿದರು.

ಈ ವೇಳೆ ಪಾವಗಡ ಜಾಮಿಯ ಮಸೀದಿ ಮುತು ವಲ್ಲಿ ಲತೀಫ್ ಸಾಬ್, ಕಾರ್ಯದರ್ಶಿ ಜಾವಿದ್ ಸಾಬ್, ನಾಮಿನಿ ಸದಸ್ಯರಾದ ರಿಯಾಜ್ ಅಹ್ಮದ್, ಸುದ್ದಿಕ್ ಶಬ್ಬೀರ್ ಮತ್ತು ಇತರರು ಹಾಜರಿದ್ದರು.