News

ದಿಬ್ಬೂರು ಬಡಾವಣೆಯಲ್ಲಿ ಶಾಸಕ ಜ್ಯೋತಿಗಣೇಶ್‌ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಚಾಲನೆ

ದಿಬ್ಬೂರು ಬಡಾವಣೆಯಲ್ಲಿ ಶಾಸಕ ಜ್ಯೋತಿಗಣೇಶ್‌ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಚಾಲನೆ

ತುಮಕೂರು: ನಗರದ ದಿಬ್ಬೂರು ಬಡಾವಣೆಯಲ್ಲಿ ಇಂದು ಶುದ್ಧ ಕುಡಿಯುವ ನೀರಿನ ಘಟಕವನ್ನು ವಿದ್ಯುಕ್ತವಾಗಿ ಉದ್ಘಾಟಿಸಿ
ಚಾಲನೆಯನ್ನು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್‌ರವರು ನೀಡಿದರು.

ಈ ಸಂದರ್ಭದಲ್ಲಿ ನಗರ ಶಾಸಕರು ಮಾತನಾಡಿ ಈ ಭಾಗದಲ್ಲಿ ಕೆಲವು ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ಘಟಕವಿಲ್ಲದೇ ಜನರು ಪರದಾಡುತ್ತಿದ್ದು, ಇನ್ಮುಂದೆ ಈ ಭಾಗದ ಜನರಿಗೆ ಈ ಘಟಕದಿಂದ ಉಪಯೋಗವಾಗಲಿದೆ ಜೊತೆಗೆ ಇದನ್ನು ಉದ್ಘಾಟನೆ ಮಾಡಲು ಬಂದಂತಹ ಸಂದರ್ಭದಲ್ಲಿ ಈ ಬಡಾವಣೆಯ ಜನರು ಹಲವಾರು ಅಹ್ವಾಲುಗಳನ್ನು ನನಗೆ ನೀಡಿದ್ದು ಬಡಾವಣೆಯು ಹಲವಾರು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ನನಗೆ ಮನವಿ ಸಲ್ಲಿಸಿದ್ದಾರೆ, ಈ ಕುರಿತು ಪರಿಶೀಲನೆ ಮಾಡಿ ಶೀಘ್ರದಲ್ಲಿಯೇ ಪರಿಹಾರ ಕಲ್ಪಿಸಿಕೊಡುವುದಾಗಿ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮನೋಹರ್ ಗೌಡ, ವಿಜಿ, ಇಂದ್ರಕುಮಾರ್, ವಾಟರ್‌ಮ್ಯಾನ್ ಗೋವಿಂದು, ಪರಮೇಶ್, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

MLA Jyothi Ganesh inaugurated a drinking water plant in Dibbur

Share this post

About the author

Leave a Reply

Your email address will not be published. Required fields are marked *