ತುಮಕೂರು ನಗರಸಭೆ ಮಾಜಿ ಅಧ್ಯಕ್ಷ ಮುತವಲ್ಲಿ ಅಸ್ಲಾಂ ಪಾಷಾ ಹಾಗೂ ಸೈಯದ್‌ಹುಸೇನ್ ಅವರು ನಗರದ
ರಿಂಗ್ ರಸ್ತೆಯಲ್ಲಿ ನಿರ್ಮಾಣ ಮಾಡಿರುವ ಕರೀಷ್ಮಾ ಪ್ಯಾಲೇಸ್ ಕಲ್ಯಾಣ ಮಂಟಪ ಭಾನುವಾರ ಉದ್ಘಾಟನೆಯಾಯಿತು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಆಗಮಿಸಿ ಅಸ್ಲಾಂ ಪಾಷಾ ಕುಟುಂಬದವರಿಗೆ ಶುಭ ಕೋರಿದರು.

ತುಮಕೂರು ನಗರದ ರಿಂಗ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಕರಿಷ್ಮ
ಪ್ಯಾಲೆಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎಸ್. ಶಫಿ ಅಹಮದ್, ಡಾ.ರಫೀಕ್ ಅಹಮದ್, ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರ ಶೇಖರ್‌ಗೌಡ , ಪಾಲಿಕೆ ಮಾಜಿ ಸದಸ್ಯ ಮಹೇಶ್, ಮುಖಂಡರಾದ ಜಿಯಾ ಉಲ್ಲಾ, ಹಿಂದೂಸ್ತಾನ್ ಫಯಾಸ್, ಆಫ್ತಾಬ್ ಅಹಮದ್, ಮೆಹಬೂಬ್ ಪಾಷ ಅವರುಗಳು ನಗರಸಭೆ ಮಾಜಿ ಅಧ್ಯಕ್ಷ ಅಸ್ಲಾಂಪಾಷಾ ಹಾಗೂ ಸೈಯದ್ ಹುಸೇನ್ ರವರನ್ನು ಶುಭ ಕೋರಿದರು.




ತುಮಕೂರು ಜಿಲ್ಲಾ ಪತ್ರಕರ್ತರಾದ ರಘುರಾಮ್, ಹರೀಶ್ ಆಚಾರ್ಯ, ರೇಣುಕಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
