ತುಮಕೂರು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ
ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ತುಮಕೂರು ಜಿಲ್ಲಾ ಕಚೇರಿಯಲ್ಲಿ
ಸ್ವಾಮಿ ವಿವೇಕಾನಂದ ರವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ
ಸಲ್ಲಿಸಿ, ಪುಷ್ಪ ನಮನ ಸಲ್ಲಿಸುವುದರ ಮೂಲಕ ಸಿಹಿ ಹಂಚಿ ಆಚರಿಸಲಾಯಿತು
ಈ ವೇಳೆ ಮಾತನಾಡಿದ ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ
ಎನ್.ಕೆ.ನಿಧಿಕುಮಾರ್,ಸ್ವಾಮಿ ವಿವೇಕಾನಂದರು ಯುವಜನತೆಯ ಮೇಲೆ
ಆಪಾರವಾದ ನಂಬಿಕೆ ಇಟ್ಟಿದ್ದರು.
ಹಿಂದೂ ಧರ್ಮದಲ್ಲಿದ್ದುಕೊಂಡೇ, ಧರ್ಮದೊಳಗಿನ ಆಂತರಿಕ ಅಸಮಾನತೆಯ ವಿರುದ್ದ ದ್ವನಿ
ಎತ್ತಿದ್ದರು.ಜಾತಿಯತೆ,ಅಸ್ಪಷ್ಯತೆ ಆಚರಣೆ,ಮೂಢನಂಬಿಕೆಗಳ
ವಿರುದ್ದ ದೊಡ್ಡ ಹೋರಾಟವನ್ನೇ ನಡೆಸಿದ್ದರು. ಇಂದು ಸ್ವಾಮಿ
ವಿವೇಕಾನಂದರ ಒಂದು ಮುಖವನ್ನು ಮಾತ್ರ ಜನರಿಗೆ ತೋರಿಸುತ್ತಾ,
ಕುಬ್ಜರನ್ನಾಗಿಸಲಾಗುತ್ತಿದೆ.ಜೀನಿವಾದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನ
ಸ್ವಾಮಿ ವಿವೇಕಾನಂದರನ್ನು ಇಡೀ ಜಗತ್ತಿಗೆ ಪರಿಚಯ ಮಾಡಿಕೊಟ್ಟಿತ್ತು ಎಂದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಿಂದುಳಿದ ವರ್ಗಗಳ
ಜಿಲ್ಲಾಧ್ಯಕ್ಷ ಎಸ್.ರಾಮಚಂದ್ರರಾವ್ ಮಾತನಾಡಿ,ಭಾರತೀಯ ಯುವಜನತೆಯ
ಬಗ್ಗೆ ಭಿನ್ನವಾದ ನಿಲುವನ್ನು ಹೊಂದಿದ್ದ ಸ್ವಾಮಿ ವಿವೇಕಾನಂದ ವಾಣಿ, ಏಳೀ
ಯುವಜನರೆ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಮಾತನ್ನು ಇಂದಿನ
ಯುವಸಮೂಹ ಜೀವನದಲ್ಲಿ ಅಳವಡಿಸಿಕೊಂಡರೆ,ದೇಶ ಎದುರಿಸುತ್ತಿರುವ
ನಿರುದ್ಯೋಗ, ಬಡತನದಂತಹ ಜಲ್ವಂತ ಸಮಸ್ಯೆಗಳಿಗೆ ಪರಿಹಾರ
ಕಂಡುಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ
ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷರಾದ
ಎಸ್ ರಾಮಚಂದ್ರ ರಾವ್, ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷರಾದ ಶಬ್ಬೀರ್
ಅಹ್ಮದ್, ಹಿಂದುಳಿದ ವರ್ಗದ ಜಿಲ್ಲಾ ಕಾರ್ಯಧ್ಯಕ್ಷರಾದ
ಎನ್.ವೆಂಕಟೇಶಆಚಾರ್, ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ
ಇಮ್ರಾನ್ ಅಹಮದ್, ಅಟ್ರಾ ಸಿಟಿ ಕಮಿಟಿ ಸದಸ್ಯರಾದ ಗೋವಿಂದರಾಜು ಕೆ, ದಲಿತ
ಕ್ರಿಯಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮಿ ನಾರಾಯಣ್ ಎಸ್, ಹಿಂದುಳಿದ
ವರ್ಗದ ಯುವ ಘಟಕದ ಜಿಲ್ಲಾಧ್ಯಕ್ಷರಾದ ದಿವಾಕರ್, ಕಾರ್ಮಿಕ ಘಟಕದ
ಜಿಲ್ಲಾ ಉಪಾಧ್ಯಕ್ಷರಾದ ಟೈಲರ್ ಜಗದೀಶ್ ಎನ್, ತಾಲೂಕು ಗೌರವ
ಅಧ್ಯಕ್ಷರಾದ ಗಂಗಾಧರ್.ಜಿ.ಆರ್, ಪದಾಧಿಕಾರಿಗಳಾದ ಹನುಮನರಸಯ್ಯ,
ಶ್ರೀನಿವಾಸ್‌ರಾವ್, ರಾಮಣ್ಣ, ರಮೇಶ್,ಗಗನ.ಡಿ.ಬಿ,ದರ್ಶನ್.ಬಿ.ಆರ್, ನರಸಿಂಹ ಮೂರ್ತಿ
ಕೆ ಇನ್ನು ಮುಂತಾದವರು ಉಪಸ್ಥಿತರಿದ್ದರು.