PUBLICSOCIAL ACTIVIST

Walkathon, Cycling, by Smart City Limited

Walkathon, Cycling, by Smart City Limited

ಸ್ಮಾರ್ಟ್ ಸಿಟಿ ವತಿಯಿಂದ ವಾಕಥಾನ್, ಸೈಕ್ಲಿಂಗ್

ತುಮಕೂರು: ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ “ನಗರಾಭಿವೃದ್ಧಿಗಳ ಆಚರಣೆಗಳ ವಾರ” ಕಾರ್ಯಕ್ರಮದಡಿ ನಗರದಲ್ಲಿಂದು ವಾಕಥಾನ್ ಹಾಗೂ ಸೈಕ್ಲಿಂಗ್ ಹಮ್ಮಿಕೊಳ್ಳಲಾಗಿತ್ತು.


ಡಾ: ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಪಾಲಿಕೆ ಮೇಯರ್ ಬಿ.ಜಿ. ಕೃಷ್ಣಪ್ಪ ಸೇರಿದಂತೆ ಇತರೆ ಗಣ್ಯರು ವಾಕಥಾನ್ ಮತ್ತು ಸೈಕ್ಲಿಂಗ್‍ಗೆ ಚಾಲನೆ ನೀಡಿದರು.


ಡಾ: ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಆರಂಭವಾದ ಸೈಕ್ಲಿಂಗ್ ಭದ್ರಮ್ಮ ವೃತ್ತ, ರಾಮಕೃಷ್ಣ ರಸ್ತೆ, ಎಂ.ಜಿ. ರಸ್ತೆ, ಎಸ್.ಎಸ್.ಪುರಂ ಮುಖ್ಯ ರಸ್ತೆ, ಗಂಗೋತ್ರಿ ರಸ್ತೆಯಿಂದ ಸಿದ್ದಗಂಗಾ ಮಠ ತಲುಪಿ ನಂತರ ಕ್ಯಾತ್ಸಂದ್ರದಿಂದ ರಿಂಗ್ ರಸ್ತೆ ತಲುಪಿ ಮುಕ್ತಾಯಗೊಂಡಿತು.


ಅದೇ ರೀತಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಆರಂಭವಾದ ವಾಕಥಾನ್ ಕ್ಯಾತ್ಸಂದ್ರದವರೆಗೆ ತಲುಪಿ ಮುಕ್ತಾಯಗೊಂಡಿತು.


ಈ ಎರಡು ಕಾರ್ಯಕ್ರಮ ಆರಂಭವಾಗುವುದಕ್ಕೂ ಮುನ್ನ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಮಹಾತ್ಮ ಗಾಂಧಿ ಜಯಂತಿ ಆಚರಣೆ ಮಾಡಲಾಯಿತು. ಗಣ್ಯರು ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.


ಈ ವೇಳೆ ಗಣ್ಯರಾದ ಎಸ್. ನಾಗಣ್ಣ, ವೆಂಕಟೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ನಂಜಯ್ಯ, ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ಸೇರಿದಂತೆ ಇತರರಿದ್ದರು.

Share this post

About the author

Leave a Reply

Your email address will not be published. Required fields are marked *