breaking newsPUBLIC

ಮುಸ್ಲಿಂ ಪರ್ಸನಲ್ ಲಾ ಬೋರ್ಡ ಆಯೋಜಿಸಿದ್ದ ಜನಜಾಗೃತಿ ಆಂದೋಲನ

ಮುಸ್ಲಿಂ ಪರ್ಸನಲ್ ಲಾ ಬೋರ್ಡ ಆಯೋಜಿಸಿದ್ದ ಜನಜಾಗೃತಿ ಆಂದೋಲನ

ಸುಳ್ಳು ಸುದ್ದಿ ಹಬ್ಬಿಸಿ, ಜನರಲ್ಲಿ ಗೊಂದಲ ಉಂಟು ಮಾಡಿ,ತಮ್ಮ ಬೇಳೆ ಬೆಯಿಸಿಕೊಳ್ಳಲು ಹೊರಡುವವರ ವಿರುದ್ಧ ಪತ್ರಕರ್ತ ಬದ್ರದ್ದೀನ್ ತಿರುಗೇಟು. 

ವಕ್ಪ್ ಮಸೂದೆಯನ್ನೇ ಮುಂದಿಟ್ಟುಕೊಂಡು ಕೆಲ ಪಟ್ಟ ಭದ್ರ ಹಿತಾಸಕ್ತಿಗಳು, ಮುಸ್ಲಿಂ ಸಮುದಾಯವನ್ನು ಪ್ರಚೋಧನೆಗೆ ಒಳಪಡಿಸಿ,ಜನಸಮಾನ್ಯರ ಮುಂದೆ ತಪಿತಸ್ಥರಂತೆ ಬಿಂಬಿಸುವ ಹುನ್ನಾರ ನಡೆಸುತ್ತಿದ್ದು,ವಕ್ಫ್ ಒಂದು ಸೂಕ್ಷ್ಮವಿಚಾರವಾಗಿರುವ ಹಿನ್ನೇಲೆಯಲ್ಲಿ ಯಾರು ಆವೇಶಕ್ಕೆ ಒಳಗಾಗದಂತೆ ಪತ್ರಕರ್ತ ಬದ್ರುದ್ದೀನ್.ಕೆ. ಮನವಿ ಮಾಡಿದ್ದಾರೆ.

ತುಮಕೂರು: ನಗರದ ಸ್ಟಾರ್ ಕನ್ವೆಷನ್ ಹಾಲ್ ಆವರಣದಲ್ಲಿ ಅಲ್ ಇಂಡಿಯಾ ಮುಸ್ಲಿಂ ಪಸರ್ನಲ್ ಲಾ ಬೋರ್ಡ ಜಿಲ್ಲಾ ಘಟಕ ಆಯೋಜಿಸಿದ್ದ ಜನಜಾಗೃತಿ ಆಂದೋಲನದಲ್ಲಿ ಮಾತನಾಡಿ ಅವರು,ವಕ್ಪ್ ಆಸ್ತಿ ಸಮುದಾಯದ ಅಭಿವೃದ್ದಿಗೆಂದು ಮೀಸಲಿಟ್ಟ ಆಸ್ತಿಯಾಗಿದೆ. 

ನಮ್ಮ ಸಂವಿಧಾನದಲ್ಲಿ ಎಲ್ಲ ರೀತಿಯ ಕಾನೂನಿನ ರಕ್ಷಣೆ ಅದಕ್ಕೆ ಇದೆ. ಹಾಗಾಗಿ ಸೋಷಿಯಲ್ ಮೀಡಿಯಾ,ಖಾಸಗಿ ವಾಹಿನಿಗಳಲ್ಲಿ ಬರುವ ಪ್ರಚೋಧನಾಕಾರಿ ಹೇಳಿಕೆಗಳಿಗೆ ರಿಯಾಕ್ಟ್ ಮಾಡುವ ಮೊದಲು ಮುಸ್ಲಿಂ ಸಮುದಾಯ ಅತ್ಯಂತ ವಿವೇಚನೆಯಿಂದ ವರ್ತಿಸಬೇಕಾಗಿದೆ. ಯಾರು ಸಹ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು ಎಂದರು. ವಕ್ಫ್ ವಿವಾದ ಬಗ್ಗೆ ಮೊದಲು ನಾವು ತಿಳಿದುಕೊಳ್ಳಬೇಕಾಗಿದೆ. ಇದೊಂದು ಭೂ ವ್ಯಾಜ್ಯವೇ ಹೊರತು ವಕ್ಫ್ ಮತ್ತು ಹಿಂದುಗಳ ನಡುವಿನ ಸಂಘರ್ಷವಲ್ಲ.

ಈ ಸತ್ಯ, ಮಿಥ್ಯಗಳ ಅರಿವು ನಮಗಿದ್ದರೆ,ಸುಳ್ಳು ಸುದ್ದಿ ಹಬ್ಬಿಸಿ, ಜನರಲ್ಲಿ ಗೊಂದಲ ಉಂಟು ಮಾಡಿ,ತಮ್ಮ ಬೇಳೆ ಬೆಯಿಸಿಕೊಳ್ಳಲು ಹೊರಡುವ ಮಂದಿಗೆ ಸರಿಯಾಗಿ ತಿರುಗೇಟು ನೀಡಲು ಸಾಧ್ಯ ಎಂದ ಬದ್ರುದ್ದೀನ್ ಅವರು,ಹಿಂದೂ ಸಮುದಾಯದ ಮಠ,ದೇವಾಲಯಗಳಿಗೆ ಆಸ್ತಿಗಳು ಇರುವಂತೆ ವಕ್ಫ್ಗೂ ಆಸ್ತಿ ಇದೆ. ಆದರೆ ಇದನ್ನು ಸಂರಕ್ಷಿಸಲು ನೇಮಿಸಿದ್ದ ವ್ಯಕ್ತಿಗಳ ನಿರ್ಲಕ್ಷದಿಂದ ಲಕ್ಷಾಂತರ ಎಕರೆ ಬೇರೆಯವರ ಪಾಲಾಗಿದೆ.

ಬೇಲಿಯೇ ಎದ್ದು ಹೊಲ ಮೇಯ್ದದಂತೆ ನಮ್ಮವರೇ ಸಮುದಾಯದ ಆಸ್ತಿಯನ್ನು ತಮ್ಮ ಸ್ವಂತ ಆಸ್ತಿಯಾಗಿಸಿಕೊಂಡಿದ್ದಾರೆ. ಈ ಎಲ್ಲಾ ವಿಚಾರಗಳು ಮುಸ್ಲಿಂ ಪಸರ್ನಲ್ ಲಾ ಬೋರ್ಡ್ ಮುಂದಿದೆ. ಅವರು ಸೂಕ್ತ ಪರಿಹಾರವನ್ನು ಒದಗಿಸಲು ಶಕ್ತರಿದ್ದಾರೆ. ಅವರಿಗೆ ಬೆಂಬಲವಾಗಿ ನಾವು ನಿಲ್ಲಬೇಕಾಗಿದೆ. ಪ್ರಚೋದನೆಗೆ ಒಳಗಾಗಿ ಉರಿಯುವ ಬೆಂಕಿಗೆ ತುಪ್ಪು ಸುರಿಯಲು ಅವಕಾಶ ಮಾಡಿಕೊಡಬಾರದೆಂದರು.

ದೇಶದಲ್ಲಿ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ೧೯೭೪ರಲ್ಲಿ ಗೆಜೆಟ್ ನೋಟಿಪಿಕೇಷನ್ ಅಗಿದ್ದರೂ, ೧೯೯೮ರಲ್ಲಿನ ಸುಪ್ರಿಂಕೋರ್ಟು ತೀರ್ಪು ಅನ್ವಯ ಪಹಣಿಗಳಲ್ಲಿ ವಕ್ಫ್ ಆಸ್ತಿ ನಮೂದಾಗುತ್ತಿದೆ.ಹತ್ತಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ಬೇರೆ ಸಮುದಾಯದ ಬಡವನ ಭೂಮಿಯನ್ನು ವಶಕ್ಕೆ ಪಡೆದು,ಆತನನ್ನು ಬೀದಿಗೆ ತಳ್ಳುವುದಕ್ಕೆ ವಕ್ಫ್ ಸಹ ಒಪ್ಪುವುದಿಲ್ಲ. ಸಮುದಾಯದ ಉದ್ದೇಶವೂ ಅದಲ್ಲ. ವಕ್ಫ್ ಆಸ್ತಿಯನ್ನೇ ತಮ್ಮ ಕುಟುಂಬದ ಆಸ್ತಿಯಂತೆ ಬಳಕೆ ಮಾಡುತ್ತಿರುವ ಮುಸ್ಲಿಂ ಸಮುದಾಯದಿಂದ ಆಸ್ತಿಯನ್ನು ಹಿಂಪಡೆಯುವುದು ನಮ್ಮ ಮುಂದಿರುವ ಮೊದಲ ಅದ್ಯತೆಯಾಗಿದೆ.

ಕರ್ನಾಟಕದಲ್ಲಿ ೧೯೭೪ ಗೆಜೆಟ್ ಪ್ರಕಾರ ೧.೧೦ ಲಕ್ಷ ಎಕರೆ ವಕ್ಫ್ ಆಸ್ತಿ ಇದೆ.ಆದರೆ ಈಗ ಉಳಿದಿರುವುದು ಕೇವಲ ೨೩ ಸಾವಿರ ಎಕರೆ ಮಾತ್ರ. ಅದರಲ್ಲಿಯೂ ೧೭ ಸಾವಿರ ಎಕರೆ ನಮ್ಮವರಿಂದಲೇ ಒತ್ತುವರಿಯಾಗಿದೆ.ಪ್ರಸ್ತುತ ವಕ್ಫ್ ಬಳಿ ಇರುವುದು ೬ ಸಾವಿರ ಎಕರೆ ಮಾತ್ರ.ವಕ್ಫ್ ಆಸ್ತಿ ಸಂಪೂರ್ಣವಾಗಿ ಸಮುದಾಯದ ಆಸ್ತಿಯಾಗಿದೆ.ಇದರಲ್ಲಿ ಶೇ೩-೪ ಮಾತ್ರ ಸರಕಾರ ಮಸೀದಿಗಳಿಗೆ, ಕಬರ್‌ಸ್ಥಾನ್‌ಗಳಿಗೆ ನೀಡಿದೆ.ಉಳಿದೆಲ್ಲವೂ ಸಮುದಾಯದ ಹಿರಿಯರು, ಮೊಗಲ್ ದೊರೆಗಳು ಜನಾಂಗದ ಅಭಿವೃದ್ದಿಗೆಂದು ನೀಡಿದ  ಆಸ್ತಿಯಾಗಿದೆ ಎಂದು ಬದ್ರುದ್ದೀನ್.ಕೆ. ಸ್ಪಷ್ಟಪಡಿಸಿದರು.

ವಕ್ಫ್ ತಿದ್ದುಪಡಿ ಮಸೂದೆಯ ಕುರಿತಂತೆ ಸಮುದಾಯದಲ್ಲಿ ಬಹಳ ಗೊಂದಲ ಮತ್ತು ಆತಂಕವಿದೆ. ಇಸ್ಲಾಂ ಧರ್ಮದ ಅಸ್ಮಿತೆಯನ್ನೇ ಬುಡಮೇಲು ಮಾಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಗೊಂದಲ ಮತ್ತು ಆತಂಕವನ್ನು ನಿವಾರಿಸಲು ನಮ್ಮಲ್ಲಿ ಸಶಕ್ತ ತಂಡವಿದೆ. ಅವರು ಕಾನೂನು ಹೋರಾಟವೂ ಸೇರಿದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಅರ್ಟಿಕಲ್ ೨೬ರ ಅಡಿಯಲ್ಲಿ ನಮ್ಮ ಎಲ್ಲಾ ಧಾರ್ಮಿಕ ಕಾರ್ಯಗಳಿಗೂ ರಕ್ಷಣೆ ಇದೆ. ಹಾಗಾಗಿ ಯಾರು ಆತಂಕ ಪಡುವ ಅಗತ್ಯವಿಲ್ಲ. ಎಲ್ಲರೂ ಸಮಾಧಾನದಿಂದ ವರ್ತಿಸೋಣ. ಮೌಲಾನಗಳ ಕಾರ್ಯದಲ್ಲಿ ಕೈಜೋಡಿಸುವ ಮೂಲಕ ಸಮುದಾಯವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಲು ಮುಂದಾಗೋಣ ಎಂದು ಕರೆ ನೀಡಿದರು.

ಅಲ್ ಇಂಡಿಯಾ ಮುಸ್ಲಿಂ ಪರ್ಸ್ನಲ್ ಲಾ ಬೋರ್ಡ್ನ ಮುಖಂಡರಾದ ಹಜರತ್ ಮೌಲಾನ ಮುಫ್ತಿ ಮೊಹಮದ್ ಇಫ್ತಿಕಾರ್, ಮೌಲಾನ ಮಸೂದ್ ಇಮ್ರಾನ್ ರಶಾದಿ, ಮೌಲಾನ್ ಸೈಯದ್ ಫೀರ್ ತನ್ವಿರ್ ಹಸ್ಮೀ ಸಾಹೇಬ್, ಮೌಲಾನ ಶೇಖ್ ಮಹಮದ್ ರಶಾದಿ ಸಾಹೇಬ್, ಮೌಲಾನ ಜೀಯಾವುರ್ ರೆಹಮಾನ್ ನದುವಿ, ಮೌಲಾನ ಅರೀಫ್‌ರಾಜಾ, ಮೌಲಾನ್ ಮುಸ್ತಾಕ್ ಅಹಮದ್ ಸೇರಿದಂತೆ ರಾಜಕೀಯ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರು ಹಾಗೂ ಮಕಿತರರು ಉಪಸ್ಥಿತರಿದ್ದರು.

Public awareness movement organized by Muslim Personal Law Board

Share this post

About the author

Leave a Reply

Your email address will not be published. Required fields are marked *