breaking news

ಕಲ್ಪತರು ಸಾಂಸ್ಕೃತಿಕ ವೇದಿಕೆಯಿಂದ ಐದು ದಿನಗಳ ಕಲಾ ವೈಭವ ಆಯೋಜನೆ

ಕಲ್ಪತರು ಸಾಂಸ್ಕೃತಿಕ ವೇದಿಕೆಯಿಂದ ಐದು ದಿನಗಳ ಕಲಾ ವೈಭವ ಆಯೋಜನೆ

ಫೆಬ್ರವರಿಯಲ್ಲಿ ನಗರದಲ್ಲಿ ಕಲ್ಪತರು ಕಲಾ ಉತ್ಸವ ಕಲ್ಪತರು ಸಾಂಸ್ಕೃತಿಕ ವೇದಿಕೆಯಿಂದ ಕಲಾವೈಭವ ಆಯೋಜನೆ

ತುಮಕೂರು: ನಗರದ ಕಲ್ಪತರು ಸಾಂಸ್ಕೃತಿಕ ವೇದಿಕೆ ಬರುವ ಫೆಬ್ರವರಿ 19ರಿಂದ23ರ ವರೆಗೆ ನಗರದಲ್ಲಿ ವಿವಿಧ ಸಾಂಸ್ಕೃತಿಕ ಕಲೆ ಹಾಗೂ
ಮನರಂಜನಾ ಸ್ಪರ್ಧೆಗಳು ಒಳಗೊಂಡ ವೈಭವದ ಕಲ್ಪತರು ಕಲಾ ಉತ್ಸವ ಏರ್ಪಡಿಸಿದೆ. ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯುವ ಐದು ದಿನಗಳ ಈ ಉತ್ಸವದಲ್ಲಿ ನಾಡಿನ ಹೆಸರಾಂತ ಕಲಾವಿದರು, ಗಣ್ಯರು ಭಾಗವಹಿಸಲಿದ್ದಾರೆ ಎಂದು ವೇದಿಕೆಯ ಸೋಮಶೇಖರ್, ತನುಜ್‌ಕುಮಾರ್ ಹೇಳಿದ್ದಾರೆ.

ನಗರದ ಆರ್‌ಟಿಓ ಕಚೇರಿ ಆವರಣದ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಪೂಜೆ ಸಲ್ಲಿಸಿ ಕಾರ್ಯಕ್ರಮದ ಕರಪತ್ರಗಳನ್ನು
ಅನಾವರಣಗೊಳಿಸಿದರು. ಉತ್ಸವದಲ್ಲಿ ಲಿಟಲ್ ರಾಜ, ರಾಣಿ ಫ್ಯಾಷನ್ ಷೋ, 18ರಿಂದ24 ವಯಸ್ಸಿನ ಯುವತಿಯರಿಗೆ ಮಿಸ್ ತುಮಕೂರು
ಸ್ಪರ್ಧೆ, ೧೮ರಿಂದ ೨೪ ವರ್ಷದ ಯುವಕರಿಗೆ ಮಿಸ್ಟರ್ ತುಮಕೂರು ಸ್ಪರ್ಧೆ, 13 ವರ್ಷ ಮೇಲ್ಪಟ್ಟ ಮಕ್ಕಳ ವಾಯ್ಸ್ ಆಫ್ ತುಮಕೂರು ಗೀತಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಇದರ ಜೊತೆಗೆ ಆಕರ್ಷಕ ವಸ್ತುಪ್ರದರ್ಶನ, ಆಹಾರ ಮೇಳ, ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪ್ರದೀಪ್‌ಕುಮಾರ್, ನೇತಾಜಿ ಶ್ರೀಧರ್, ವೇದಿಕೆಯ ಮುಖಂಡರಾದ ಭಾಗ್ಯಮ್ಮ, ಜಿ.ತಾಹೇರಾ, ಡ್ಯಾನಿಯಲ್, ಪ್ರವೀಣ್, ಲತಾ, ಕವಿತಾ, ಅರುಣ್‌ಕುಮಾರ್, ಆಶಿಕ್, ಅಜರ್ ಮೊದಲಾದವರು ಭಾಗವಹಿಸಿದ್ದರು.

The five-day art celebration organized by Kalpataru Cultural Forum

Share this post

About the author

Leave a Reply

Your email address will not be published. Required fields are marked *