breaking news

ಸುರಕ್ಷಿತ ಸಂಚಾರಕ್ಕೆ ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸಿ: ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ

ಸುರಕ್ಷಿತ ಸಂಚಾರಕ್ಕೆ ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸಿ: ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ

ತುಮಕೂರು: ವಿದ್ಯಾರ್ಥಿ, ಯುವಜನರಲ್ಲಿ ಸಂಚಾರಿ ನಿಯಮಗಳು ಹಾಗೂ ಸುರಕ್ಷಿತ ಸಂಚಾರ ಕುರಿತಂತೆ ಅನುಸರಿಸಬೇಕಾದ ಎಚ್ಚರಿಕೆ ಬಗ್ಗೆ ವಿವಿಧ ಸಂಘಸAಸ್ಥೆಗಳ ನೇತೃತ್ವದಲ್ಲಿ ಬುಧವಾರ ನಗರದ ಸಿದ್ಧಗಂಗಾ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ನೆಹರೂ ಯುವ ಕೇಂದ್ರ, ತುಮಕೂರು ಸಂಚಾರಿ ಪೊಲೀಸ್ ವಿಭಾಗ, ರೂಟರಿ ಕ್ಲಬ್, ಡಾ.ಅಂಬೇಡ್ಕರ್ ಯುವಜನ ಮತ್ತು
ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಸಂಚಾರಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ರಮೇಶ್ ಅವರು ಮಾತನಾಡಿ, ಸಂಚಾರಿ ನಿಯಮಗಳ ಪಾಲನೆಯಿಂದ ಸುರಕ್ಷಿತ ಸಂಚಾರ ಸಾಧ್ಯ. ನಿಯಮ ಉಲ್ಲಂಘಿಸಿದರೆ ಅಪಘಾತವಾಗುವ ಅಪಾಯವೂ ಇದೆ, ದಂಡ ವಿಧಿಸಲು ಅವಕಾಶವಿದೆ.

ವಿಶೇಷವಾಗಿ ವಿದ್ಯಾರ್ಥಿಗಳು, ಯುವ ಜನರು ರಸ್ತೆ ನಿಯಮಗಳನ್ನು ಪಾಲನೆ ಮಾಡಿ, ಉಲ್ಲಂಘನೆ ಮಾಡದಂತೆ ಎಚ್ಚರಿಕೆಯಿAದ ಸಂಚರಿಸಬೇಕು ಎಂದರು. 18 ವರ್ಷಕ್ಕಿಂತಾ ಕಡಿಮೆ ವಯಸ್ಸಿನವರು ವಾಹನ ಚಲಾಯಿಸುವಂತಿಲ್ಲ, ಅಂತಹ ಪ್ರಕರಣಗಳಲ್ಲಿ 25 ಸಾವಿರ
ರೂ.ವರೆಗೂ ದಂಡ ವಿಧಿಸಬಹುದು, ವಾಹನಗಳ ಮಾಲೀಕರಿಗೂ ಶಿಕ್ಷೆಯಾಗುತ್ತದೆ. 18 ವರ್ಷ ಮೇಲ್ಪಟ್ಟವರು ವಾಹನ ಚಾಲನಾ
ಪರವಾನಗಿ ಪತ್ರ, ಸಂಬAಧಿಸಿದ ದಾಖಲಾತಿಯೊಂದಿಗೆ ವಾಹನ ಚಲಾಯಿಸಬೇಕು. ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ
ಹೆಲ್ಮೆಟ್ ಧರಿಸಬೇಕು. ವಾಹನ ಚಲಾಯಿಸುವ ನೀವೂ ಸುರಕ್ಷಿತವಾಗಿರಿ, ರಸ್ತೆಯಲ್ಲಿ ಸಂಚರಿಸುವ ಇತರರೂ ಸುರಕ್ಷತವಾಗಿ ಹೋಗಲು ಅನುವು ಮಾಡಿ ಎಚ್ಚರಿಕೆಯಿಂದ ವಾಹನ ಚಲಾಯಿಸಿ ಎಂದು ಹೇಳಿದರು.

ಸಿದ್ಧಗಂಗಾ ಡ್ರೆöÊವಿಂಗ್ ಸ್ಕೂಲ್ ಪ್ರಾಂಶುಪಾಲರಾದ ಟಿ.ಆರ್.ಸದಾಶಿವಯ್ಯ ಮಾತನಾಡಿ, ವಿದ್ಯಾರ್ಥಿಗಳು ರಸ್ತೆಯ
ನಿಯಮಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳಬೇಕು. ವಾಹನ ಚಲಾವಣೆ ಮಾಡಲು ಚಾಲನಾ ಪರವಾನಗಿ ಹೊಂದಿರಬೇಕು,
ವಾಹನದ ದಾಖಲಾತಿಗಳು, ಇನ್ಷೂರೆನ್ಸ್ ಮತ್ತಿತರ ಸಂಬAಧಿತ ದಾಖಲಾತಿಗಳನ್ನು ಹೊಂದಬೇಕು. ದ್ವಿಚಕ್ರ ವಾಹನ ಚಾಲಕರು
ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಕೂಡದು. ಇಂತಹ ಪ್ರಾಥಮಿಕ ಅಂಶಗಳನ್ನು ತಿಳಿದಿರಬೇಕು ಎಂದರು. ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಅಲ್ಲಿನ ಸೂಚನಾ ಫಲಕಗಳ ಸೂಚನೆಗಳನ್ನು ಅನುಸರಿಸಬೇಕು. ಆಂಬುಲೆನ್ಸ್ ಮತ್ತಿತರ ತುರ್ತು ವಾಹನಗಳು ಮುಂದೆ ಸಾಗಲು ಅವಕಾಶ ನೀಡಬೇಕು.

ಅತಿಯಾದ ವೇಗ, ವೀಲಿಂಗ್‌ನAತಹ ಅತಿರೇಖದ ವರ್ತನೆಗಳನ್ನು ರಸ್ತೆಯಲ್ಲಿ ಪ್ರದರ್ಶಿಸುವುದು ಅಪಾಯಕಾರಿ, ಜೀವ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು. ಸಿದ್ಧಗಂಗಾ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಎನ್.ಸುನಿಲ್, ರೋಟರಿ ಕ್ಲಬ್ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ, ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಎನ್.ಸುಹಾಸ್ ಮೊದಲಾದವರು ಭಾಗವಹಿಸಿದ್ದರು.

Obey Road Rules for Safe Traffic: Road Safety Awareness Campaign

Share this post

About the author

Leave a Reply

Your email address will not be published. Required fields are marked *