Animal Attacks

ಇ-ಆಸ್ತಿ ಖಾತೆಗಳ ಸಮಸ್ಯೆಯನ್ನು ಬಗೆಹರಿಸುವಂತೆ ಸದನದಲ್ಲಿ ಶಾಸಕ ಜ್ಯೋತಿಗಣೇಶ್ ಆಗ್ರಹ

ಇ-ಆಸ್ತಿ ಖಾತೆಗಳ ಸಮಸ್ಯೆಯನ್ನು ಬಗೆಹರಿಸುವಂತೆ ಸದನದಲ್ಲಿ ಶಾಸಕ ಜ್ಯೋತಿಗಣೇಶ್ ಆಗ್ರಹ

ಕಳೆದ ೩ ತಿಂಗಳಿನಿAದ ಸಬ್ ರಿಜಿಸ್ಟçರ್ ಆಫೀಸ್‌ನಲ್ಲಿ ಕಾವೇರಿ ೨.೦
ತಂತ್ರಾAಶ ಜತಗೆ ಇ-ಆಸ್ತಿ ಮತ್ತು ಯು.ಎಲ್.ಎಂ.ಎಸ್. ತಂತ್ರಾAಶ
ಲಿAಕ್ ಮಾಡಲಾದ ಕಾರಣ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ
ಉAಟಾಗಿರುವುದರ ಕುರಿತು ಸದನದಲ್ಲಿ ತುಮಕೂರು ನಗರ
ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಗಮನ ಸೆಳೆದು
ಕಂದಾಯ ಸಚಿವರಿಗೆ ಆಗ್ರಹಿಸಿದರು.


ಸದನದಲ್ಲಿ ಮಾತನಾಡಿದ ಶಾಸಕರು ತುಮಕೂರು
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಇ-ಆಸ್ತಿ ನೊಂದಣಿ ಕಾರ್ಯದಲ್ಲಿ
ಸರಿಯಾಗಿ ಶೇ.೧೫ ರಷ್ಟು ಸಹ ನೊಂದಣಿ ಕಾರ್ಯ ಆಗಿರುವುದಿಲ್ಲ.
ಸಾರ್ವಜನಿಕರು ಯಾವುದೇ ಸ್ವತ್ತುಗಳ ನೊಂದಣಿ, ಅಡಮಾನ,
ಒಳಗೊಂಡAತೆ ಯಾವುದೇ ವಹಿವಾಟು ನಡೆಸಲು ಆಗುತ್ತಿಲ್ಲ.

ಈ ಸಂದರ್ಭವನ್ನು ಮಧ್ಯವರ್ತಿಗಳು ಕೆಟ್ಟದಾಗಿ
ಬಳಸಿಕೊಳ್ಳುತ್ತಿದ್ದು, ಇ-ಆಸ್ತಿ ಮಾಡಿಸಲು ಸಾರ್ವಜನಿಕರು
ಪರದಾಡುತ್ತಿದ್ದಾರೆ. ತುಮಕೂರು ಮಹಾನಗರಪಾಲಿಕೆ
ವ್ಯಾಪ್ತಿಯಲ್ಲಿ ಲಕ್ಷಕ್ಕೂ ಅಧಿಕ ಖಾತೆಗಳು
ನೊಂದಣಿಯಾಗಬೇಕಾಗಿದ್ದು, ಅದರಲ್ಲಿ ಕೇವಲ ಸುಮಾರು ೨೦
ಸಾವಿರ ಖಾತೆಗಳು ಮಾತ್ರ ಇಲ್ಲಿಯವರೆಗೂ ಇ-ಆಸ್ತಿ ಖಾತೆ
ಮಾಡಲಾಗಿದ್ದು, ನಗರಾಭಿವೃದ್ಧಿ ಇಲಾಖೆಯೊಂದಿಗೆ ಚರ್ಚೆ ಮಾಡಿ,
ಇ-ಆಸ್ತಿ ಕಾರ್ಯ ತುರ್ತಾಗಿ ಆಗಲು ಸೂಕ್ತ ಕ್ರಮ
ಕೈಗೊಳ್ಳಬೇಕೆಂದು ಎಂದು ಶಾಸಕರು ತಿಳಿಸಿದರು.


ಇದಕ್ಕೆ ಉತ್ತರಿಸಿದ ಕಂದಾಯ ಸಚಿವರು, ಸಂಬAಧಪಟ್ಟ
ಇಲಾಖೆಯೊAದಿಗೆ ಹಾಗೂ ತುಮಕೂರು ಮಹಾನಗರಪಾಲಿಕೆಯ
ಆಯುಕ್ತರೊಂದಿಗೆ ಚರ್ಚಿಸಿ, ಇ-ಆಸ್ತಿ ಕಾರ್ಯ ತ್ವರಿತಗತಿಯಲ್ಲಿ
ತುರ್ತಾಗಿ ನಡೆಸಲು ಹೆಚ್ಚುವರಿ ಸಿಬ್ಬಂದಿಯನ್ನ ಗುತ್ತಿಗೆ ಆಧಾರದ
ಮೇಲೆ ನಿಯೋಜಿಸಿ, ಇ-ಆಸ್ತಿ ಕಾರ್ಯವನ್ನು
ಚುರುಕುಗೊಳಿಸುವುದರ ಮೂಲಕ ಸಾರ್ವಜನಿಕರಿಗೆ
ಅನುಕೂಲ ಮಾಡಲಾಗುವುದು ಎಂದು ತಿಳಿಸಿದರು.

MLA Jyothi Ganesh demands in the Sadan to solve the problem of e-property accounts.

Share this post

About the author

Leave a Reply

Your email address will not be published. Required fields are marked *