ಎರಡು ಬೃಹತ್ ಗಾತ್ರ ಕೊಳಕುಮಂಡಳ ಹಾವುಗಳು ಪತ್ತೆವಾರ್‍ಕೋ ಸಂಸ್ಥೆಯ ಉರಗ ತಜ್ಞರಿಂದ ಹಾವುಗಳ ರಕ್ಷಣೆ
ತುಮಕೂರು:ನಗರದ ಸಿಎಸ್‍ಐ ಲೇಔಟ್‍ನಲ್ಲಿರುವ ಮನೆಯ ಹಿಂದಿನ ಕನರ್ವೆನ್ಸಿಯಲ್ಲಿ ಚರಂಡಿ ತೆಗೆಯುವಾಗ ಎರಡು ಕೊಳಕಮಂಡಲಹಾವುಗಳು (Russell’s wiper) ಪತ್ತ್ತೆಯಾಗಿದ್ದು,ವನ್ಯಜೀವಿ ಜಾಗೃತಿ ಮತ್ತು ಉರಗ ಸಂರಕ್ಷಣಾ ಸಂಸ್ಥೆ(ವಾರ್‍ಕೋ)ಉರಗ ತಜ್ಞರು ಸ್ಥಳಕ್ಕೆ ಆಗಮಿಸಿ,ಹಾವುಗಳನ್ನು ಹಿಡಿದು ದೇವರಾಯನದುರ್ಗ ಕಾಡಿಗೆ ಬಿಟ್ಟಿರುವ ಘಟನೆ ನಡೆದಿದೆ.
ಪಾಲಿಕೆಯ 15ನೇ ವಾರ್ಡಿಗೆ ಸೇರಿದ ಸಿ.ಎಸ್.ಐ ಲೇಔಟ್‍ನ ಚರ್ಚ್ ಹಿಂಭಾಗದಲ್ಲಿರುವ ಮನೆಯೊಂದರ ಕನರ್ವೆನ್ಸಿ ಖಾಲಿ ಜಾಗದಲ್ಲಿ ಇಂದು ಪಾಲಿಕೆಯ ಜೆಸಿಬಿ ಬಳಸಿ,ಚರಂಡಿ ನಿರ್ಮಿಸಲು ಕಾಲುವೆ ತೋಡುತಿದ್ದಾಗ,ಮನೆಯ ಮುಂಭಾಗ ದಲ್ಲಿ ಹಾಕಿದ್ದ ಕಲ್ಲುಗಳ ಮಧ್ಯೆ ಬಾರಿ ಗ್ರಾತ್ರದ ಹೆಬ್ಬಾವುಗಳು ಕಾಣಿಸಿಕೊಂಡಿವೆ.ತಕ್ಷಣವೆ ಎಚ್ಚೆತ್ತ ಸಿಬ್ಬಂದಿ ವಾರ್ಡಿನ ಕಾರ್ಪೋರೇಟರ್ ಶ್ರೀಮತಿಗಿರಿಜಾ ಧನಿಯಕುಮಾರ್,ಪಾಲಿಕೆಯ ಹಿರಿಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಉರಗ ತಜ್ಞರಾದ ಸ್ನೇಕ್ ಶಾಮ್,ಸ್ನೇಕ್ ದೀಪಕ್ ಎನ್ನುವವರನ್ನು ಕರೆಯಿಸಿ,ಹಾವುಗಳನ್ನು ಹಿಡಿದು ಅವುಗಳನ್ನು ಸುರಕ್ಷಿತವಾಗಿ ದೇವರಾಯನದುರ್ಗ ಕಾಡಿಗೆ ಬಿಟ್ಟು ಬರಲಾಗಿದೆ.
ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಸ್ನೇಕ್ ಶಾಮ್,15ನೇ ವಾರ್ಡಿನ ಕೌನ್ಸಿಲರ್ ಗಿರಿಜಾ ಧನಿಯಕುಮಾರ್ ನಮಗೆ ದೂರವಾಣಿ ಮೂಲಕ ಹಾವುಗಳು ಇರುವುದನ್ನು ತಿಳಿಸಿದರು.ನಾನು ಮತ್ತು ದೀಪಕ್ ಎನ್ನುವವರು ಹೋಗಿ ನೋಡಿದಾಗ,ಮನೆಯ ಹಿಂಭಾಗಿಲಿನ ಚರಂಡಿಯಲ್ಲಿ ಎರಡು ಅತ್ಯಂತ ವಿಷಕಾರಿಯಾದ ಎರಡು ಕೊಳಕಮಂಡಳ ಹಾವುಗಳನ್ನು ಇರುವುದನ್ನು ಖಚಿತ ಪಡಿಸಿಕೊಂಡೆವು.ಇವುಗಳು ಅತ್ಯಂತ ವಿಷ ಕಾರಿ ಹಾವುಗಳಾಗಿರುವ ಕಾರಣ,ಎಲ್ಲಾ ಮುಜಾಗ್ರತಾ ಕ್ರಮಗಳೊಂದಿಗೆ ಅವುಗಳನ್ನು ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ, ಹಾವುಗಳಿಗೆ ಯಾವುದೇ ತೊಂದರೆಯಾಗದ ರೀತಿ ಅವುಗಳನ್ನು ಹಿಡಿದು ದೇವರಾಯನದುರ್ಗ ಕಾಡಿಗೆ ಬಿಡಲಾಗಿದೆ.
ಸದರಿ ಕೊಳಕಮಂಡಲ ಹಾವುಗಳನ್ನು ಗಮನಿಸಿದಾಗ,ಎರಡು ಹಾವುಗಳಲ್ಲಿ ಸುಮಾರು 7-8 ವರ್ಷದ ಹಾವುಗಳಾಗಿವೆ. ಅಲ್ಲಿಯೇ ಹುಟ್ಟಿ,ಬೆಳೆದಿರುವ ಎಲ್ಲಾ ಸಾಧ್ಯತೆಗಳಿವೆ.ಈ ಹಾವುಗಳು ಎರಡು ಕಿ.ಮಿ.ಸುತ್ತಳತೆಗಿಂತ ಹೆಚ್ಚು ದೂರ ಹೋಗುವುದಿಲ್ಲ. ಬೇರೆಲ್ಲಾ ಹಾವುಗಳು ಮೊಟ್ಟೆ ಇಟ್ಟರೆ, ಈ ಹಾವು ಮಾತ್ರ ಒಂದೇ ಬಾರಿಗೆ 50 ಮರಿಗಳನ್ನು ಮಾಡುತ್ತದೆ. ದೇಶದಲ್ಲಿ ಶೇ80ರಷ್ಟು ಜನತೆ,ಈ ಹಾವಿನ ಕಡಿತದಿಂದಲೇ ಸಾವನ್ನಪ್ಪುತ್ತಾರೆ.ಅಂತಹ ವಿಷಕಾರಿ ಹಾವು ಈ ಕೊಳಕಮಂಡಳ.ಕಡಿದಿದ್ದೇ ಗೊತ್ತಾಗಲ್ಲ,ಅದರ ದೇಹ ಸ್ಪ್ರಿಂಗ್ ರೀತಿ ಕೆಲಸ ಮಾಡುತ್ತದೆ.ಇಂದು ಪತ್ತೆಯಾದ ಎರಡರಲ್ಲಿ ಒಂದು ಹೆಣ್ಣು, ಮತ್ತೊಂದು ಗಂಡು ಆಗಿದ್ದು,ಸಂತಾನೋತ್ಪತ್ತಿಯ ಹಿನ್ನೆಲೆಯಲ್ಲಿ ಅಲ್ಲಿ ಸೇರಿರುವ ಸಾಧ್ಯತೆ ಇದೆ ಎಂದು ಸ್ನೆಕ್ ಶ್ಯಾಮ್ ತಿಳಿಸಿದರು.
ವಾರ್‍ಕೋ ವನ್ಯ ಜೀವಿ ಜಾಗೃತಿ ಮತ್ತು ಉರಗ ಸಂರಕ್ಷಣಾ ಸಂಸ್ಥೆ, ಕುವೆಂಪು ನಗರದ ಪುಟ್ಟಾಂಜನೇಯ ದೇವಾಲಯದ ಸಮೀಪದಲ್ಲಿದ್ದು,ಸುಮಾರು 10-12 ಜನ ಉರಗ ತಜ್ಞರು ಸೇರಿ ಈ ಎನ್.ಜಿ.ಓ ಸ್ಥಾಪಿಸಿದ್ದು, ಇದುವರೆಗೂ ತುಮಕೂರು ನಗರ ಹಾಗೂ ಸುತ್ತಮುತ್ತಲ ಊರುಗಳಲ್ಲಿ ಸುಮಾರು 10 ಸಾವಿರ ಹೆಚ್ಚು ಹಾವುಗಳನ್ನು ಸಂರಕ್ಷಿಸಿದ್ದಾರೆ.
ಈ ಕುರಿತು ಮಾತನಾಡಿದ ವಾರ್‍ಕೋ ಸಂಸ್ಥೆಯ ಮುಖ್ಯಸ್ಥ ಮನು ಆಗ್ನಿವಂಶಿ,ತುಮಕೂರು ಭಾಗದಲ್ಲಿ ಸುಮಾರು 33 ಜಾತಿಯ ಹಾವುಗಳಿದ್ದು,ಅವುಗಳಲ್ಲಿ ಅತ್ಯಂತ ವಿಷಕಾರಿಯಾದ ನಾಗರ ಹಾವು,ಕೊಳಕಮಂಡಳ,ರಕ್ತ ಮಂಡಳ,ಕಟ್ಟು ಹಾವು ಇವುಗಳು ಕಂಡು ಬರುತ್ತವೆ. ಇವುಗಳ ಆಹಾರ ಕಪ್ಪೆ, ಇಲಿ ಆಗಿರುವ ಕಾರಣ, ಜನವಸತಿ ಪ್ರದೇಶಗಳಲ್ಲಿಯೇ ವಾಸಿಸುತ್ತವೆ. ಜನರು ಮನೆಯ ಸುತ್ತ ಕಸಗಳನ್ನು ಬಿಸಾಕುವುದು,ಅವುಗಳನ್ನು ತಿನ್ನಲು ಬರುವ ಇಲಿ ಮತ್ತು ಕಪ್ಪೆಗಳನ್ನು ಆರಸಿ, ಹಾವುಗಳು ಬರುತ್ತವೆ.ಹಾಗಾಗಿ ಮನೆಯ ಸುತ್ತಮುತ್ತ ಸ್ವಚ್ಚತೆ ಕಾಪಾಡಿಕೊಂಡರೆ,ಹಾವುಗಳ ಭಯದಿಂದ ಮುಕ್ತರಾಗ ಬಹುದು.ಒಂದು ವೇಳೆ ಹಾವುಗಳು ಕಂಡು ಬಂದರೆ ವಾರ್‍ಕೋ ಸಂಸ್ಥೆಯ ದೂರವಾಣಿ ಸಂಖ್ಯೆ 996451976, 7676515424 ಕರೆ ಮಾಡಿದರೆ,ತಕ್ಷಣವೇ ಬಂದು ಹಾವುಗಳನ್ನು ರಕ್ಷಿಸಿ, ಸುರಕ್ಷಿತ ಪ್ರದೇಶಗಳಿಗೆ ಬಿಡಲಾಗುವುದು ಎಂದು ತಿಳಿಸಿದರು.