ರಾಜ್ಯದ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಬರಬೇಕಾದ ೩೮ ತಿಂಗಳ ಬಾಕಿ ವೇತನ
ನೀಡಿಬೇಕು ಮತ್ತು ಸಾರಿಗೆ ನೌಕರರ ತಮ್ಮ ಹಕ್ಕೋತ್ತಾಯಗಳನ್ನು
ನಿರಂತರವಾಗಿ ಶಾಂತಿಯುತವಾಗಿ ಸಲ್ಲಿಸಿದ್ದರು ಸರ್ಕಾರ ಪರಿಗಣಿಸಿಲ್ಲ. ಹಾಗಾಗಿ ಅವರ
ನ್ಯಾಯೋಚಿತ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರ ಈ ಕೋಡಲೆ ಮಾತುಕತೆ ನಡೆಸಿ .ಡಿ.೩೧
ಮುನ್ನ ಮಾತುಕತೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಸಿಐಟಿಯು ಜಿಲ್ಲಾ
ಅಧ್ಯಕ್ಷರಾದ ಸೈಯದ್ ಮುಜಿಬ್ ಅವರು ರಾಜ್ಯ ಸರ್ಕಾರವನ್ನು ಅಗ್ರಹಿಸಿದರು.
ಅವರು ದಿನಾಂಕ;೧೯-೧೨-೨೦೨೪ ರಂದು ಮಧ್ಯಾನ್ಹ ೧ ಗಂಟೆಗೆ ತುಮಕೂರು ನಗರದ
ಟೌನ್ಹಾಲ್ ವೃತ್ತದಲ್ಲಿ ಕರ್ನಾಟಕ ರಾಜ್ಯ ರಸ್ತ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆ ಗಳ
ಜಂಟಿ ಕ್ರಿಯಾ ಸಮಿತಿ ತುಮಕೂರು ಉಪ ವಿಭಾಗದ ಜಾಥ ವನ್ನು ಉಧ್ಘಾಟಿಸಿ
ಮಾತನಾಡುತ್ತಿದ್ದರು. ಮುಂದುವರಿದು ಮಾತನಾಡಿದ ಅವರು ಸಾರಿಗೆ ಬಸ್ ನಲ್ಲಿ ಎರಡು
ಪಟ್ಟು ಜನ ಪ್ರಯಾಣಿಸುತ್ತಿದ್ದಾರೆ. ಸಾಕಷ್ಟು ಬಸ್‌ಗಳು ಇಲ್ಲದೆ ಕಾರಣ ಕಾರ್ಮಿಕರ –
ಜನತೆ ಪರಸ್ವರ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಸರ್ಕಾರ ಈ ಬಗ್ಗೆ ಗಂಭಿರವಾಗಿ
ಪರಿಗಣಿಸಬೇಕು ಮತ್ತು ಪರಸ್ಪರತು ಅನುಸರಣೆ ಇಂದ ವರ್ತಿಸುವಂತೆ
ವಿನAತಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್ ಸಿಐಟಿಯು
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹೆಚ್. ಎಸ. ಮಂಜುನಾಥ ಪ್ರಾಸ್ತವಿ ಮಾತನಾಡಿ ಸಾರಿಗೆ
ನೌಕರರ ಬಗ್ಗೆ ಸರ್ಕಾರವಿಳಂಬ ಧೋರಣೆ ಬಿಟ್ಟು ನ್ಯಾಯಯುತಾಗಿ ನಡೆದು
ಕೊಳ್ಳಬೇಕು, ನಾಲ್ಕು ವರ್ಷಗಳಿಗ ಒಮ್ಮೆ ಸಾರಿಗೆ ನೌಕರರ ವೇತನ ಪರಿಷ್ಕರಣೆ
ಮಾಡಬೇಕು., ಹಾಗಾಗಿ ದಿ;೩೧- ೧೨-೨೦೨೪ ರಿಂದ ಹೋಸ ಒಪ್ಪಂದಕ್ಕೆ ಸರ್ಕಾರ
ಕ್ರಮವಹಿಸಬೇಕು ಎಂದರು.ಸಾರಿಗೆ ನೌಕರರು ವಿಪರಿತ ಒತ್ತಡದ ನಡುವೆ
ಪ್ರಮಾಣಿಕತೆ ಮತ್ತು ಶ್ರಮವಹಿಸಿ ದುಡಿಯುತ್ತಿದ್ದಾರೆ. ಸರ್ಕಾರ ನಿವೃತ್ತ ನೌಕರರಿಗೆ
ದಿ; ೨೭-೦೬- ೨೦೨೪ ರ ಸುತ್ತೋಲೆಯಂತೆ ಹಣವನ್ನು ಈ ಕೂಡಲೆ ಬಿಡುಗಡೆ ಮಾಡಬೇಕು
ಎಂದು ಒತ್ತಾಯಿಸಿದರು .
ಕೆ.ಎಸ್. ಅರ್. ಟಿ.ಸಿ ಸ್ಟಾಪ್ &ಚಿmಠಿ; ವರ್ಕಸ್ ಫೇಡರೇಷನ್ ಎಐಟಿಯುಸಿನ ಅಪ್ಸರ್ ಪಾಷ ಅವರು
ಮಾತನಾಡಿ ದಿಕ್ಕು ತಪ್ಪಿಸುವ ಶಕ್ತಿಗಳ ಅಪಪ್ರಚಾರಕ್ಕೆ ಮತ್ತು ಕುತಂತ್ರಗಳಿಗೆ
ಬಲಿಯಾದೆ ಐಕ್ಯತೆಯಿಂದ ಚಳುವಳಿಯಲ್ಲಿ ಮುಂದೆ ಸಾಗುವಂತೆ ಕೊರಿದರು.
ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್ ಸಿಐಟಿಯು ಜಿಲ್ಲಾ ಅಧ್ಯಕ್ಷ ಎ. ದೇವರಾಜು
ಅವರು ಮಾತನಾಡಿ ಜನ ಸಾರಿಗೆ ನೌಕರರ ಮೆಲೆ ದಾಳಿಗಳನ್ನು ಮಾಡುವುದು ಸರಿಯಲ್ಲ
ಎಂದರು. ಅರಂಭದಲ್ಲಿ ಉಪಾಧ್ಯಕ್ಷ ಸಮಿಉಲ್ಲಾ ಸ್ವಾಗತಿಸಿದರು. . , ಜಾಥದಲ್ಲಿ ಪ್ರಧಾನ
ಕಾರ್ಯದರ್ಶಿ ರಾಜಣ್ಣ, ಎಐಟಿಯುಸಿ ವಾಜೀದ್, ನಟರಾಜ್, ಪ್ರಾಂತ ರೈತ ಸಂಘದ ಅಜ್ಜಪ್ಪ,
ಸಿಐಟಿಯು ಜಿಲ್ಲಾ ಖಜಾಂಚಿ ಎ. . ಲೊಕೇಶ್, ಎನ್. ಕೆ. ಸುಬ್ರಮಣ್ಯ, ಅವರು ಜಾಥಕ್ಕೆ
ಶುಭಹಾರೈಸಿದರು.
Transport employees – solve the problem before the strike; CITU warn