breaking news

ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಪ್ರಕರಣ: 8 ಲಕ್ಷ ನಗದು ಕಳುವಿನ ಪೋಸ್ಟರ್ ವೈರಲ್, ಗ್ರಾಮದಲ್ಲಿ ಭಾರಿ ಚರ್ಚೆ

ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಪ್ರಕರಣ: 8 ಲಕ್ಷ ನಗದು ಕಳುವಿನ ಪೋಸ್ಟರ್ ವೈರಲ್, ಗ್ರಾಮದಲ್ಲಿ ಭಾರಿ ಚರ್ಚೆ

ತುಮಕೂರು: ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಡಿ.ಎಸ್. ಪಾಳ್ಯದ ಜಿ.ಡಿ.ಎಸ್. ಸೇವಕ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಪುತ್ರ ನವಾಜ್ ಪಾಷಾ ವಿರುದ್ಧ ತಮ್ಮ ಸ್ನೇಹಿತನ ಮನೆಯಲ್ಲಿ ಕಳ್ಳತನ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗ್ರಾಮದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ವೈರಲ್ ಆಗಿರುವ ಪೋಸ್ಟರ್‌ನಲ್ಲಿ ಮನೆಯಿಂದ 8 ಲಕ್ಷ ರೂ. ನಗದು ಹಾಗೂ 2 ಗ್ರಾಂ ಚಿನ್ನಾಭರಣ ಕಳುವಾಗಿದೆ ಎಂದು ಉಲ್ಲೇಖಿಸಲಾಗಿದೆ.

ಅಲ್ಲದೆ, ಪ್ರಕರಣದಲ್ಲಿ ಆರೋಪಿ ನವಾಜ್ ಪಾಷಾ ಅವರ ಆಪ್ತ ಸ್ನೇಹಿತ ಯಾಸಿನ್ ಪಾಷಾ ಎಂದು ಉಲ್ಲೇಖಿಸಲಾಗಿದ್ದು, ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೋಸ್ಟರ್‌ನಲ್ಲಿ ಹೇಳಲಾಗಿದೆ.ಪೋಸ್ಟರ್ ವೈರಲ್ ಆದ ಬಳಿಕ “ಮನೆಯಿಂದ ನಿಜವಾಗಿಯೂ 8 ಲಕ್ಷ ರೂ. ನಗದು ಕಳುವಾಗಿದೆಯೇ?” ಎಂಬ ಪ್ರಶ್ನೆ ಗ್ರಾಮದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಳವಾದ ಹಣದ ಪ್ರಮಾಣದ ಕುರಿತು ಸಾರ್ವಜನಿಕರ ನಡುವೆ ವಿವಿಧ ರೀತಿಯ ಮಾತುಕತೆಗಳು ನಡೆಯುತ್ತಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಸಿನ್ ಅವರು ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿ ಆರೋಪಿ ನವಾಜ್ ಅವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಕುರಿತು ಹೆಬ್ಬೂರು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಇದೇ ವೇಳೆ, “ಆಪ್ತ ಸ್ನೇಹಿತನ ಮನೆಗೇ ಕನ್ನ ಹಾಕಿದ ಘಟನೆ ಸ್ನೇಹ ಎಂಬ ಸಂಬಂಧಕ್ಕೆ ಕಳಂಕ ತಂದಿದೆ” ಎಂಬ ಅಭಿಪ್ರಾಯ ಗ್ರಾಮಸ್ಥರ ನಡುವೆ ಕೇಳಿಬರುತ್ತಿದೆ. ವೈರಲ್ ಆಗಿರುವ ಪೋಸ್ಟರ್‌ನಲ್ಲಿಯೂ ಇದೇ ಸಂದೇಶವನ್ನು ಬಿಂಬಿಸಲಾಗಿದ್ದು, ಪ್ರಕರಣ ಸದ್ಯ ಗ್ರಾಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Friend Accused of Theft: Viral Poster Triggers Massive Buzz in Hebbur

Share this post

About the author

Leave a Reply

Your email address will not be published. Required fields are marked *