ಇಂದಿನಿಂದ ನಾಕು ದಿನ ಪವರ್ ಕಟ್
ಲೋಕೋಪಯೋಗಿ ವತಿಯಿಂದ ತುಮಕೂರು ನಗರ ಉಪವಿಭಾಗ-2ರ ಸರಸ್ವತಿಪುರಂ ಶಾಖಾ ವ್ಯಾಪ್ತಿಗೆ ಬರುವ ವಾರ್ಡ್ ನಂ 12/13 ರಲ್ಲಿ ರಾ.ಹೆ-33 ರಿಂದ ಇಸ್ರಾ ಶಾದಿ ಮಹಲ್ ರಿಂಗ್ ರಸ್ತೆ, ಮೆಳೆಕೋಟೆ ಮುಖಾಂತರ ಗಂಗಸಂದ್ರ ಸಿರಿವಾರ ಜಿಲ್ಲಾ ಮುಖ್ಯ ರಸ್ತೆ ಸಂಪರ್ಕಿಸುವ ರಸ್ತೆ ಆಯ್ದ ಭಾಗಗಳಲ್ಲಿ ಸಿಸಿ ಚರಂಡಿ ಮತ್ತು ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಅಡ್ಡ ಬರುವ ಕಂಬಗಳನ್ನು ಸ್ಥಳಾಂತರಿಸುವ ಸಲುವಾಗಿ ಸೆಪ್ಟೆಂಬರ್ 4, 6, 9, 11ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಅನಿಯಮಿತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಎಸ್. ವೆಂಕಟೇಶ್ ತಿಳಿಸಿದ್ದಾರೆ.
ಮೆಳೆಕೋಟೆ, ಸದಾಶಿವನಗರ, ಉಪ್ಪಾರಹಳ್ಳಿ, ವೀರಸಾಗರ, ನಜರಾಬಾದ್, ಬನಶಂಕರಿ 2ನೇ ಹಂತ, ಅಮರಜ್ಯೋತಿ ನಗರ, ಶಾಂತಿನಗರ, ಗೂಡ್ಸ್ ಶೆಡ್ ಕಾಲೋನಿ, ವಿಶ್ವಣ್ಣ ಲೇ ಔಟ್ ವ್ಯಾಪ್ತಿಯ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಎಸ್. ವೆಂಕಟೇಶ್ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9449844296ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.