3 Days Electricity Cut in Tumkur from Today
ತುಮಕೂರು ನಗರದಲ್ಲಿ ಮೂರು ದಿನ ವಿದ್ಯುತ್ ಕಡಿತ:ಬೆಳಗ್ಗೆ 11 ರಿಂದ ಸಂಜೆ 5:00 ಗಂಟೆಯವರೆಗೆ ಪವರ್ ಕಟ್ತುಮಕೂರು ನಗರದ ಉಪ ವಿಭಾಗ-2ರ ವ್ಯಾಪ್ತಿಯಲ್ಲಿ ಸಿಸಿ ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದರಿಂದ ಆಗಸ್ಟ್ 19, 21 ಮತ್ತು 23ರಂದು ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಮೆಳೆಕೋಟೆ, ಸದಾಶಿವನಗರ, ವೀರಸಾಗರ, ನಜರಾಬಾದ್, ಬನಶಂಕರಿ, ಬನಶಂಕರಿ 2ನೇ ಹಂತ, ಅಮರಜ್ಯೋತಿ ನಗರ, ಉಪ್ಪಾರಹಳ್ಳಿ, ಶಾಂತಿನಗರ, ಗೂಡ್ಸ್ ಶೆಡ್ ಕಾಲೋನಿ, ವಿಶ್ವಣ್ಣ ಲೇ ಔಟ್ ಮತ್ತಿತರ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9449844296ನ್ನು
ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಪವರ್ ಕಟ್ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕೆ.ಪಿ.ಟಿ.ಸಿ.ಎಲ್ ರವರು ಉಪಸ್ಥಾವರಗಳ ತ್ರೈಮಾಸಿಕ ನಿರ್ವಹಣಾ ಕೆಲಸವನ್ನು ಕೈಗೊಂಡಿರುವುದರಿಂದ ತುಮಕೂರಿನ ವಿವಿಧ ಪ್ರದೇಶಗಳಲ್ಲಿ ಆಗಸ್ಟ್ 17, 19, ಮತ್ತು 20ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಬೆಳ್ಳಾವಿ, ದೊಡ್ಡಸಾರಂಗಿ, ಹೆಗ್ಗೆರೆ, ನಿಟ್ಟೂರು, ಸೋಮಲಾಪುರ, ಊರ್ಡಿಗೆರೆ, ಬೆಳಧರ ಮತ್ತು ಸಿ.ಟಿ ಕೆರೆ ಉಪಸ್ಥಾವರಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ. ಸಂಪರ್ಕಿಸಬಹುದಾಗಿದೆ.
ಆ.20ರಂದು ವಿದ್ಯುತ್ ವ್ಯತ್ಯಯತುಮಕೂರು:
ಬೆವಿಕಂ ನಗರ ಉಪವಿಭಾಗ-1 ವ್ಯಾಪ್ತಿಗೆ ಸಂಬಂಧಿಸಿದಂತೆ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಂಡಿರುವುದರಿಂದ ಆಗಸ್ಟ್ 20ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಗೋವಿಂದನಗರ, ರಿಂಗ್‍ರಸ್ತೆ, ಗುಬ್ಬಿ ಗೇಟ್, ಕುಂಟಮ್ಮನ ತೋಟ, ದಿಬ್ಬೂರು, ಬಂಡೇ ಮನೆ ಚೌಟ್ರಿ, ಹೆಚ್.ಪಿ. ಪೆಟ್ರೋಲ್ ಬಂಕ್, ಬಿ.ಜಿ.ಪಾಳ್ಯ ಸರ್ಕಲ್, ಯುಜಿಡಿ, ದಾನಾ ಪ್ಯಾಲೇಸ್ ಹಿಂಭಾಗ, ಈದ್ಗಾಮೊಹಲ್ಲ, ಪಿ.ಹೆಚ್. ಕಾಲೋನಿ, ವಿನೋಬ ನಗರ, ಲೇಬರ್ ಕಾಲೋನಿ, ಹೆಗಡೆ ಕಾಲೋನಿ, ಜೈಪುರ, ತಿಲಕ್ ಪಾರ್ಕ್, ಕೆ.ಹೆಚ್.ಬಿ. ಕಾಲೋನಿ, ಕಾಲ್‍ಟ್ಯಾಕ್ಸ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.