PUBLIC

ಮೀಟರ್ ಬಡ್ಡಿ ವಿರುದ್ಧ ಜನ ಜಾಗೃತಿ ಕಾರ್ಯಕ್ರಮ: ಬಡ್ಡಿ ರಹಿತ ಸಾಲ ನೀಡಲು ಮುಖಂಡರ ಚಿಂತನೆ

ಮೀಟರ್ ಬಡ್ಡಿ ವಿರುದ್ಧ ಜನ ಜಾಗೃತಿ ಕಾರ್ಯಕ್ರಮ: ಬಡ್ಡಿ ರಹಿತ ಸಾಲ ನೀಡಲು ಮುಖಂಡರ ಚಿಂತನೆ
Public awareness program against meter interest loan organised by Muslim community
ವರದಿ: ಸೈಯದ್ ಯೂಸುಫ್ ಉಲ್ಲಾ

ತುಮಕೂರು ನಗರದ ಸದಾಶಿವನಗರ ಬಡಾವಣೆಯಲ್ಲಿ ಒಂದೇ ಕುಟುಂಬದ 5 ಮಂದಿ ಮೀಟರ್ ಬಡ್ಡಿ ಅಕ್ರಮ ದಂದೆಯಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡು ಬಡತನದಲ್ಲಿ ಬಾಳುತ್ತಿದ್ದ ಗರೀಬ್ ಸಾಬ್ ಮತ್ತು ಪತ್ನಿ ಹಾಗೂ ಮೂರು ಮಕ್ಕಳು ಆತ್ಮಹತ್ಯೆಗೆ ಶರಣಾಗಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಗುರುಗಳು ಮತ್ತು ಮುಖಂಡರು ಸೇರಿ ಮೀಟರ್ ಬಡ್ಡಿ, ಹಾಗೂ ಅನಧಿಕೃತ ಮೈಕ್ರೋ ಫೈನೇಸ್ ಸಂಘಗಳ ವಿರುದ್ಧ

ಜನ ಜಾಗೃತಿ ಕಾರ್ಯಕ್ರಮ ಜಮಿಯತ್-ಇ-ಉಲಮಾ ಹಿಂದ್ ತುಮಕೂರು ಜಿಲ್ಲಾ ಅಧ್ಯಕ್ಷರಾದ ಮೌಲಾನಾ ಮುಫ್ತಿ ಉಮರ್ ಅನ್ಸಾರಿ ರವರ ಅಧ್ಯಕ್ಷತೆಯಲ್ಲಿ ಹಾಗೂ ಬೆಂಗಳೂರಿನ ಜಮಾತೆ ಉಲಮಾ ಹಿಂದ್ ಅದಕ್ಷರದಾ ಮೌಲಾನ ಮುಫ್ತಿ ಹುಸೇನ್ ಅಹಮದ್ ಹಾಗೂ ಮೌಲಾನ ಮುಫ್ತಿ ಶಾಂಶುದ್ದಿನ್ ರವರ ಸಮ್ಮುಖದಲ್ಲಿ ಸದಾಶಿವನಗರದ ರಿಯಾಝ್ ಉಲ್ ಜನ್ನಃ ಮಸೀದಿಯಲಿ ಮೀಟರ್ ಬಡ್ಡಿ, ಹಾಗೂ ಅನಧಿಕೃತ ಮೈಕ್ರೋ ಫೈನೇಸ್ ಸಂಘಗಳು ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ನಗರದ ಸದಾಶಿವನಗರದಲ್ಲಿ ನಡೆದ ದುರ್ಘಟನೆ ನಂತರ ಜನರಲ್ಲಿ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಜನರಿಗೆ ಅರಿವು ಮೂಡಿಸಲು ಚಿಂತನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮೌಲಾನ ಖಾಲಿದ್ ಬೇಗ್ ನದ್ವಿ ಅವರು ಮಾತಾನಾಡಿ ಸದಾಶಿವ ನಗರದಲ್ಲಿ ಒಂದೇ ಕುಟುಂಬದ ಐವರು ಮೃತ ಪಟ್ಟ ಘಟನೆ ಮನಸ್ಸಿಗೆ ತುಂಬಾ ನೋವುನ್ನುಂಟು ಮಾಡಿದ್ದು ಮೀಟರ್ ಬಡ್ಡಿ ದಂಧೆ ತಡೆಗಟ್ಟಲು ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಮುಸ್ಲಿಂ ಸಮುದಾಯದ ಮೌಲಿಗಳು, ಧರ್ಮಗುರಗಳ ಸಮ್ಮುಖದಲ್ಲಿ ಚರ್ಚೆ ಮಾಡಿದ್ದು ಬಡವರು ಹಾಗೂ ಅವಶ್ಯಕತೆ ಇರುವ ನಮ್ಮ ಸಮುದಾಯದ ಜನರಿಗೆ ಬಡ್ಡಿ ರಹಿತ ಸಾಲ ನೀಡುವ ಚಿಂತನೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಜನರಿಗೆ ಜಾಗೃತಿ ಮೂಡಿಸುತ್ತೇವೆ ಎಂದರು.

ಶೇಕ್ ಮಹಮೂದ್ ಕಝಿ-ಇ ಶರಿಯತ್ ಹಾಗೂಮೌಲಾನ ಜಿಯಾ ಉರ್ ರಹಮಾನ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಮತ್ತಿತರರು ಹಾಜರಿದ್ದರು.

Share this post

About the author

Leave a Reply

Your email address will not be published. Required fields are marked *