Political News

ಎಸ್ ಡಿಪಿಐ ವತಿಯಿಂದ ಸಾಮಾಜಿಕ ನ್ಯಾಯಕ್ಕಾಗಿ ಬೆಳಗಾವಿ ಚಲೋ: ತುಮಕೂರಿನಲ್ಲಿ ಪಾದಯಾತ್ರೆ

ಎಸ್ ಡಿಪಿಐ ವತಿಯಿಂದ ಸಾಮಾಜಿಕ ನ್ಯಾಯಕ್ಕಾಗಿ ಬೆಳಗಾವಿ ಚಲೋ: ತುಮಕೂರಿನಲ್ಲಿ ಪಾದಯಾತ್ರೆ
Chalo Belagavi | Ambedkar Jatha SDPI rally in Tumkur

ತುಮಕೂರು: ಪರಿಶಿಷ್ಟ ಜಾತಿಯಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿ,ಕಾಂತರಾಜು ಆಯೋಗದ ವರದಿ ಜಾರಿ ಹಾಗೂ ಅಲ್ಪಸಂಖ್ಯಾತರ 2ಬಿ ಮೀಸಲಾತಿ ಮರು ಸ್ಥಾಪನೆಗೆ ಒತ್ತಾಯಿಸಿ ಎಸ್.ಡಿ.ಪಿ.ಐ ಪಕ್ಷದವತಿಯಿಂದ ಹಮ್ಮಿಕೊಂಡಿರುವ ಸಾಮಾಜಿಕ ನ್ಯಾಯಕ್ಕಾಗಿ ಬೆಳಗಾವಿ ಚಲೋ ಜಾಥಾ ಇಂದು ತುಮಕೂರಿಗೆ ಆಗಮಿಸಿದ್ದು, ಎಸ್.ಡಿ.ಪಿ.ಐ ಮುಖಂಡರು ಸ್ವಾಗತಿಸಿ ಬಿಳ್ಕೋಟ್ಟರು.

ಸೋಷಿಯಲ್ ಡೆಮಾಕ್ರಟಿಕ್ ಪಾಟಿ ಅಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್,ಪ್ರಧಾನ ಕಾರ್ಯದರ್ಶಿ ಅಪರ್ಸ್ ಕೊಡ್ಲಿಪೇಟೆ,ಭಾಸ್ಕರಪ್ರಸಾದ್ ಮತ್ತಿತರ ಮುಖಂಡರ ನೇತೃತ್ವದಲ್ಲಿ ಡಿಸೆಂಬರ್ 06 ರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದಂದು ಬೆಂಗಳೂರಿನಿಂದ ಹೊರಟಿರುವ ಸಾಮಾಜಿಕ ನ್ಯಾಯಕ್ಕಾಗಿ ಬೆಳಗಾವಿ ಚಲೋ ಅಂಬೇಡ್ಕರ್ ರಥಯಾತ್ರೆ ಸಂಜೆ ನಾಲ್ಕುಗಂಟೆಗೆ ತುಮಕೂರಿಗೆ ತಲುಪಿದ್ದು,ಜಿಲ್ಲಾ ಮುಖಂಡರಾದ ಉಮರುದ್ದೀನ್,ಶಪಿ ಅಹಮದ್, ನಗರ ಅಧ್ಯಕ್ಷ ರಿಜ್ವಾನ್ ಖಾನ್, ಜಿಲ್ಲಾ ಸಮಿತಿ ಸದಸ್ಯ ಮುಕ್ತಿಯಾರ್ ಅಹಮದ್ ಸೇರಿದಂತೆ ಹಲವು ಮುಖಂಡರು ರಾಜೀವ್‍ಗಾಂಧಿ ನಗರದ ಬಳಿ ಜಾಥಾವನ್ನು ಬರಮಾಡಿಕೊಂಡರು.

ಟಯೋಟಾ ಶೋ ರೂ ನಿಂದ ಗುಬ್ಬಿ ಗೇಟ್ ವರೆಗೆ ಪಾದಯಾತ್ರೆ ನಡೆಸಿದ ಜಾಥಾ, ಧಾನ್ಹಪ್ಯಾಲೇಸ್ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್,ಕಳೆದ ಮೂವತ್ತು ವರ್ಷಗಳಿಂದ ಪರಿಶಿಷ್ಟ ಜಾತಿಯಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸುತ್ತಾ ಬಂದಿದ್ದರೂ ಇದುವರೆಗೂ ಆಡಳಿತ ನಡೆಸಿದ ಸರಕಾರಗಳು ನಿರ್ಲಕ್ಷಿಸುತ್ತಾ ಬಂದಿವೆ.

ಕಳೆದ ಚುನಾವಣೆ ಸಂದರ್ಭದಲ್ಲಿ ಒಳಮೀಸಲಾತಿ ಜಾರಿಯ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದ್ದರೂ ಸಾಮಾಜಿಕ ನ್ಯಾಯದ ಪರ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಡ, ಬಲಗಳ ನಡುವಿನ ಭಿನ್ನಾಭಿಪ್ರಾಯವನ್ನೇ ನೆಪ ಮಾಡಿಕೊಂಡು, ಖರ್ಗೆ ಅವರನ್ನು ಒಪ್ಪಿಸಿ, ಡಾ.ಜಿ.ಪರಮೇಶ್ವರ್ ಅವರನ್ನು ಒಪ್ಪಿಸಿಕೊಂಡು ಬನ್ನಿ ಎಂದು ಸಬೂಬು ಹೇಳುತಿದ್ದಾರೆ.ಅವರನ್ನು ಒಪ್ಪಿಸುವುದಾದರೆ ನೀವು ಇರುವುದು ಏಕೆ ಎಂಬಪ್ರಶ್ನೆ ನಮ್ಮದಾಗಿದೆ.

ಲಿಂಗಾಯಿತರಿಗೆ ಪ್ರತ್ಯೇಕ ಧರ್ಮ, ಇಡಬ್ಲು ಎಸ್ ನೀಡುವಾಗ ಯಾರನ್ನು ಒಪ್ಪಿಸಿದ್ದೀರಿ ಎಂದು ಪ್ರಶ್ನಿಸಿದರು. ಈ ರಾಜ್ಯದಲ್ಲಿ ಬದುಕಿರುವ ಶೋಷಿತರು, ಅಲ್ಪಸಂಖ್ಯಾತರು, ಬಡವರ ಅರ್ಥಿಕ, ಸಾಮಾಜಿಕ ಸ್ಥಿತಿಗತಿಯನ್ನು ಅರಿಯುವ ಸಲುವಾಗಿ ನ್ಯಾಂiÀiವಾದಿಗಳಾಗಿದ್ದ ಕಾಂತರಾಜು ಅವರ ಆಯೋಗ ರಚಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2015ರಲ್ಲಿಯೇ ವರದಿ ನೀಡಿದ್ದರು ಇದುವರೆಗೂ ಅದನ್ನು ಸ್ವೀಕರಿಸುವ ಮನಸ್ಸು ಮಾಡಿಲ್ಲ.

ಈ ನಡುವೆ ಕಾಂತರಾಜು ಆಯೋಗದ ವರದಿ ಸ್ವೀಕಾರಕ್ಕೆ ಕಾಂಗ್ರೆಸ್ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗುತ್ತಿರುವುದು ಖಂಡನೀಯ.ಈ ವರದಿ ಜಾರಿಯಾದರೆ ಮಾತ್ರ ಈ ರಾಜ್ಯದ ಶೋಷಿತ ಸಮುದಾಯಗಳು,ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಯಾವ ಸ್ಥಿತಿಯಲ್ಲಿವೆ. ಅವರ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಗಳೇನು ಎಂಬುದು ಅರ್ಥವಾಗಲಿದೆ.

ಹಾಗಾಗಿ ಸರಕಾರ ಕೂಡಲೇ ಕಾಂತರಾಜು ಆಯೋಗದ ವರದಿ ಜಾರಿ ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.ಕಳೆದ ನಲವತ್ತು ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಶೇ2ರಷ್ಟು ಮೀಸಲಾತಿಯನ್ನು ನೀಡಲಾಗುತ್ತಿತ್ತು.ಆದರೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ 2ಬಿ ಯನ್ನು ಧಾರ್ಮಿಕ ಮೀಸಲಾತಿ ಎಂಬಂತೆ ಬಿಂಬಿಸಿ ರದ್ದು ಮಾಡಿದ್ದರು.

ಇದರ ವಿರುದ್ದ ನ್ಯಾಯಾಲಯದ ಮೆಟ್ಟಿಲು ಹತ್ತಿದ ಪರಿಣಾಮ, ನ್ಯಾಯಾಲಯ ಸರಕಾರದ ನಡೆ ಸಂವಿಧಾನ ಬಾಹಿರ ಎಂದು ಹೇಳಿದೆ. ನಮ್ಮ ಸರಕಾರ ಬಂದರೆ ಮೊದಲು ಸಚಿವ ಸಂಪುಟದಲ್ಲಿಯೇ 2 ಬಿ ಮೀಸಲಾತಿ ಮರುಸ್ಥಾಪಿಸುವ ಭರವಸೆ ನೀಡಿದ್ದ ಸಿದ್ದರಾಮಯ್ಯ ಅವರು ಇದುವರೆಗೂ 13 ಸಚಿವ ಸಂಪುಟದ ಸಭೆ ನಡೆದರೂ ಇದುವರೆಗೂ 2 ಬಿ ಮೀಸಲಾತಿ ಬಗ್ಗೆ ಚಕಾರ ಎತ್ತಿಲ್ಲ. ಇವರ ಮಾತನ್ನು ನಂಬಿ ಮತ ಹಾಕಿದ ನಾವುಗಳು ಮೋಸ ಹೋಗಿದ್ದೇವೆ ಎಂದು ಆರೋಪಿಸಿದರು.

ಸರಕಾರ ಚಳಿಗಾಲದ ಅಧಿವೇಶನದಲ್ಲಿ ಮೇಲಿನ ಮೂರು ವಿಚಾರಗಳ ಕುರಿತು ತನ್ನ ಸ್ಪಷ್ಟ ನಿಲುವು ಪ್ರದರ್ಶಿಸಿ, ಮೂರು ವಿಚಾರಗಳನ್ನು ಜಾರಿಗೆ ತರಬೇಕೆಂಬುದು ಎಸ್.ಡಿ.ಪಿ.ಐ ಆಗ್ರಹವಾಗಿದೆ.ಸರಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಡಿಸೆಂಬರ್ 11 ರಂದು ನಾವು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ದಲಿತರು, ಅಲ್ಪಸಂಖ್ಯಾತರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.ಜಾಥಾದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.

Share this post

About the author

Leave a Reply

Your email address will not be published. Required fields are marked *