Electricity cut from December 9th to 30th in Tumkur
ತುಮಕೂರು: ನಗರದ ಬೆಸ್ಕಾಂ ಉಪವಿಭಾಗ-1ರ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಂಡಿರುವುದರಿಂದ ಡಿಸೆಂಬರ್ 9 ರಿಂದ 30ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ನಗರದ ಚಿಕ್ಕಪೇಟೆ,
ಮಂಡಿಪೇಟೆ, ಗಾರ್ಡ್‍ನ್ ರಸ್ತೆ, ದಿಬ್ಬೂರು, ಪಿ.ಆರ್.ನಗರ, ಜಿ.ಸಿ.ಆರ್. ಕಾಲೋನಿ, ಜೆ.ಸಿ.ರಸ್ತೆ, ವಿನಾಯಕ ನಗರ, ಬಿ.ಜಿ.ಪಾಳ್ಯ ವೃತ್ತ, ಹಾರೋನಹಳ್ಳಿ ಅಗ್ರಿ ಫೀಡರ್, ಶ್ರೀರಾಮನಗರ, ಹೊರಪೇಟೆ, ವಿವೇಕಾನಂದರಸ್ತೆ, ಕೆ.ಆರ್. ಬಡಾವಣೆ, ಬಾರ್‍ಲೈನ್, ಎಂ.ಜಿ.ರಸ್ತೆ, ಅಶೋಕರಸ್ತೆ, ಕೋತಿತೋಪು, ಪಾಂಡುರಂಗನಗರ, ಜಾಮೀಯಾ ಮಸೀದಿ, ಅಗ್ರಹಾರ, ಕ್ರಿಶ್ಚಿಯನ್ ಸ್ಟ್ರೀಟ್ ಸುತ್ತಮುತ್ತಲ ಪ್ರದೇಶಗಳಲ್ಲಿ ಮಧ್ಯಂತರ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.