ತುಮಕೂರು ನಗರದ ಮರಳೂರು ದಿಣ್ಣೆ ಬಡಾವಣೆಯಲ್ಲಿ ಎ.ಐ.ಎಂ.ಐ.ಎಂ ಪಕ್ಷದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಅಧ್ಯಕ್ಷ ಮುಜಮ್ಮಿಲ್ ಪಾಷಾ ಇತ್ತೀಚೆ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಂದೇಶಗಳು ರಕ್ತದ ಬಗ್ಗೆ ಜನರಿಗೆ ಸಮಸ್ಯೆ ತಂದೊಡ್ಡುತ್ತಿವೆ ಆಸ್ಪತ್ರೆಗಳಲ್ಲಿ ರಕ್ತ ಸಂಗ್ರಹ ಇರೋದಿಲ್ಲ ಇದನ್ನು ಗಮನಿಸಿ ಎ.ಐ.ಎಂ.ಐ.ಎಂ ಪಕ್ಷದ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು ಎಂದರು.
ರೆಡ್ ಕ್ರಾಸ್ ಸಂಸ್ಥೆ ಸಹಯೋಗ ನೀಡಿತ್ತು.
ಈ ಸಂದರ್ಭ ಅಯೂಬ್ ಖಾನ್, ಹೀಸನ್, ರಫಿ, ಪರ್ವೀಜ್ ಮತ್ತು ಇತರರು ಇದ್ದರು.