Crime StoryPolicePolitics Public

ACB Raid continued to Tumkur Hemavathi Nala Special Land Acquisition Office on Tuesday

ACB Raid continued to Tumkur Hemavathi Nala Special Land Acquisition Office on Tuesday

ಹೇಮಾವತಿ ನಾಲಾ ವಲಯ ವಿಶೇಷ ಭೂಸ್ವಾಧೀನಾಧಿಕಾರಿಗಳು ಕಚೇರಿ ಮೇಲೆ ಎಸಿಬಿ ದಾಳಿ.

ತುಮಕೂರಿನ ಕುಣಿಗಲ್ ರಸ್ತೆಯ ಹೇಮವತಿ ನಾಲ ವಲಯ ಕಚೇರಿಯಲ್ಲಿ ಇರುವ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಮೇಲೆ ಸೋಮವಾರ ಸಂಜೆ ಎಸಿಬಿ ಡಿವೈಎಸ್ಪಿ ಮಲ್ಲಿಕಾರ್ಜುನ್ ಹಾಗೂ ಇನ್ಸ್ಪೆಕ್ಟರ್ ಜೈ ಲಕ್ಷ್ಮಿ ನೇತೃತ್ವದಲ್ಲಿ ದಾಳಿ ನಡೆದಿತ್ತು.ಸೋಮವಾರ ತಡರಾತ್ರಿಯವರೆಗೂ ಎಸಿಬಿ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ಮುಂದುವರೆದಿತ್ತು ನಂತರ ತಡರಾತ್ರಿಯಲ್ಲಿ ಸಂಪೂರ್ಣ ಕಚೇರಿಯನ್ನು ಸ್ವಾಧೀನಕ್ಕೆ ಪಡೆದು ಪೊಲೀಸ್ ಬಂದೋಬಸ್ತ್ ನಲ್ಲಿ ಕಚೇರಿಯನ್ನು ವಶಕ್ಕೆ ತೆಗೆದುಕೊಂಡಿದ್ದರು.

ಇನ್ನು ಕಚೇರಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾಕಷ್ಟು , ಇನ್ನು ಇಲಾಖೆಯಲ್ಲಿ ಸಾಕಷ್ಟು ಅಧಿಕಾರಿಗಳನ್ನು ಭ್ರಷ್ಟಾಚಾರದಲ್ಲಿ ತೊಡಗಿದ್ದು ಸಾಕಷ್ಟು ಆರೋಪಗಳು ಇಲಾಖೆಯ ಅಧಿಕಾರಿಗಳ ಮೇಲೆ ಕೇಳಿಬಂದಿತ್ತು.ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಕೋರ್ಟ್ ಆದೇಶದ ಮೂಲಕ ಫಲಾನುಭವಿಗಳಿಗೆ ಹಣ ಮಂಜೂರು ಮಾಡಲು ವಿಳಂಬ ಮಾಡುತ್ತಿದ್ದರು ಹಾಗೂ ಸಾಕಷ್ಟು ರೈತರು ಹಾಗೂ ಅರ್ಜಿದಾರರಿಂದ ಲಂಚ ಪಡೆಯುತ್ತಿದ್ದರು ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು.

ಇದರ ಸಂಬಂಧ ಮಂಗಳವಾರವೂ ಕಚೇರಿಯಲ್ಲಿ ದಾಖಲೆಗಳ ಶೋಧಕಾರ್ಯ ಮುಂದುವರೆದಿದೆ ಆದರೆ ಯಾವ ಕಾರಣಕ್ಕಾಗಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನುವುದು ಸ್ಪಷ್ಟವಾಗಿ ತಿಳಿದಿಲ್ಲ ಆದರೆ ಸಂಜೆಯ ಹೊತ್ತಿಗೆ ದಾಳಿಯ ಬಗ್ಗೆ ಸಂಪೂರ್ಣ ಮಾಹಿತಿ ಅಧಿಕಾರಿಗಳು ತಿಳಿಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

Share this post

About the author

Leave a Reply

Your email address will not be published. Required fields are marked *