CongressPolitics Public

Launching a Congress Party membership campaign in Tumkur Urban Assembly constituency

Launching a Congress Party membership campaign in Tumkur Urban Assembly constituency

ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ.

ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ  ಸೋನಿಯಾ ಗಾಂಧಿ ಅಧಿಸೂಚನೆಯಂತೆ ಕಾಂಗ್ರೆಸ್ ಪಕ್ಷದ ಬೃಹತ್ ಸದಸ್ಯತ್ವ ನೊಂದಣಿ ಅಭಿಯಾನವು ರಾಷ್ಟ್ರಾದ್ಯಂತ ಚಾಲನೆಗೊಂಡಿದೆ.


ಈ ಹಿನ್ನೆಲೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಮಾರ್ಗದರ್ಶನದಂತೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಸದಸ್ಯತ್ವ ನೊಂದಣಿ ಆರಂಭಿಸಲಾಗಿದೆ. ತುಮಕೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ-1 ರ ವ್ಯಾಪ್ತಿಯಲ್ಲಿನ ಮತದಾರರಾದ ಕಾಂಗ್ರೆಸ್ ಪಕ್ಷದ ಮುಖಂಡ ಷಫಿ ಅಹ್ಮದ್ ರವರಿಗೆ ತುಮಕೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ-1 ರ ಅಧ್ಯಕ್ಷ ಸೈಯದ್ ಮಹಬೂಬ್ ಪಾಷ ನೊಂದಣಿ ಪುಸ್ತಕ ನೀಡಿದರು.


ಹಾಗೂ ತುಮಕೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ-2 ರ ವ್ಯಾಪ್ತಿಯಲ್ಲಿನ ಮತದಾರರಾದ ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ರವರಿಗೆ ತುಮಕೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ-2 ರ ಅಧ್ಯಕ್ಷ ಜಿ.ರಾಜು ನೊಂದಣಿ ಪುಸ್ತಕ ನೀಡಿದರು.

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ  ನೊಂದಣಿ ಮಾಡುವ ಮೂಲಕ ಈ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ರಫೀಕ್ ಅಹ್ಮದ್ ತಿಳಿಸಿದರು.

Share this post

About the author

Leave a Reply

Your email address will not be published. Required fields are marked *