ತುಮಕೂರು:ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ನಡೆದಾಡುವ ದೇವರು ಎಂದು ಭಕ್ತರಿಂದ ಕರೆಯಲ್ಪಡುತಿದ್ದ ತ್ರಿವಿಧ ದಾಸೋಹಿ,ಪದ್ಮಭೂಷಣ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ 6ನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಸಂಘಟನೆಗಳ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಎನ್.ಕೆ.ನಿಧಿಕುಮಾರ್,ಅಕ್ಷರ ವಂಚಿತ ಸಹಸ್ರಾರು ಮಕ್ಕಳಿಗೆ ಅಕ್ಷರ, ಅನ್ನ, ಆಶ್ರಯ ನೀಡುವ ಮೂಲಕ ಡಾ.ಶ್ರೀಶಿವಕುಮಾರಸ್ವಾಮೀಜಿಗಳು ಬಸವಣ್ಣನವರ ಕಾಯಕ, ದಾಸೋಹ ತತ್ವವನ್ನು ಅಕ್ಷರಸಃ ಅನುಸರಿಸಿಕೊಂಡು ಬಂದಿದ್ದಾರೆ. ಶಿಕ್ಷಣದಿಂದಲೇ ಮನುಷ್ಯನ ಘನತೆ ಎಂಬುದನ್ನು ಅರಿತಿದ್ದ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶ್ರೀಶಿವಕುಮಾರ ಸ್ವಾಮೀಜಿಗಳು ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ತೆರೆಯುವ ಮೂಲಕ ಎಲ್ಲರಿಗೂ ಶಿಕ್ಷಣ ದಕ್ಕುವಂತೆ ಮಾಡಿದರು.ಜಾತಿ, ಧರ್ಮ ಭೇಧವಿಲ್ಲದ 10 ಸಾವಿರ ಮಕ್ಕಳಿಗೆ ಪ್ರತಿದಿನ ದಾಸೋಹ ನೀಡಿ, ಅವರ ಬದುಕಿಗೆ ಆಸರೆಯಾಗಿದ್ದಾರೆ.
ಇಂತಹ ಶ್ರೀಗಳ ಪುಣ್ಯಸ್ಮರಣೆಯನ್ನು ಸರಕಾರವೇ ದಾಸೋಹ ದಿನವಾಗಿ ಆಚರಿಸುತ್ತಿದೆ.ಇದು ಮತ್ತಷ್ಟು ವಿಸ್ತಾರಗೊಳ್ಳಬೇಕೆಂದರು.
ಅಟ್ರಾಸಿಟಿ ಕಮಿಟಿಯ ಸದಸ್ಯ ಕೆ.ಗೋವಿಂದರಾಜು ಮಾತನಾಡಿ,ತಮ್ಮ ನಡೆ, ನುಡಿಗಳ ಮೂಲಕವೇ ಭಕ್ತರಿಂದ ನಡೆದಾಡುವ ದೇವರು ಎಂದು
ಕರೆಯಿಸಿಕೊಳ್ಳುತಿದ್ದ ಡಾ.ಶ್ರೀಶಿವಕುಮಾರಸ್ವಾಮೀಜಿಗಳು ಬದುಕಿದ್ದ ಕಾಲದಲ್ಲಿ ಇದ್ದ ನಾವೆಲ್ಲರೂ ಪುಣ್ಯವಂತರು. ಸಿದ್ದಗಂಗಾ ಮಠವನ್ನು ಒಂದು
ಪವಾಡ ಸದೃಶ್ಯ ರೀತಿಯಲ್ಲಿ ಅತಿ ಎತ್ತರಕ್ಕೆ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ರಾಜಾಶ್ರಯ ಮಠಗಳಿಗಿಂತ ಹೆಚ್ಚಿನ ರೀತಿಯಲ್ಲಿ ಭಕ್ತರು ನೀಡಿದ ಕಾಣಿಕೆಯಿಂದಲೇ ಸಹಸ್ರಾರು ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ
ನೀಡಿದ ಪುಣ್ಯಾತ್ಮರು.ಇಡೀ ಮನುಕುಲಕ್ಕೆ ಮಾರ್ಗದರ್ಶಕರಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ್ ಎಸ್.,ಅಟ್ರಾಸಿಟಿ ಕಮಿಟಿಯ ಜಿಲ್ಲಾ ಸದಸ್ಯರಾದ ಗೋವಿಂದರಾಜ ಕೆ,ರಂಜನ್.ಎ. ಅಖಿಲ
ಭಾರತ ಡಾಕ್ಟರ್ ಅಂಬೇಡ್ಕರ್ ಪ್ರಚಾರ ಸಮಿತಿಯ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷರಾದ ಕಿರಣ್‌ಕುಮಾರ್ ವೈ.ಎಸ್. ಡಾ. ಅಂಬೇಡ್ಕರ್ ಪ್ರಚಾರ
ಸಮಿತಿಯ ಕಾರ್ಮಿಕ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಜಗದೀಶ್.ಎನ್.,ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾ ಸಂಘಟನೆಯ
ಕಾರ್ಯದರ್ಶಿ ನಾಗರಾಜ್ ದಿಬ್ಬೂರು. ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ತುಮಕೂರು ತಾಲೂಕ ಅಧ್ಯಕ್ಷರಾದ ಮಹದೇವ್.ಎಸ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾ ಕಾರ್ಯಕ್ಷರಾದ ನರಸಿಂಹಮೂರ್ತಿ ಕೆಸ್ತೂರ್.ಪದಾಧಿಕಾರಿಗಳಾದ ಗೂಳೂರು ರಾಜಣ್ಣ,ಹನುಮ
ನರಸಯ್ಯ,ಶಿವಣ್ಣ ಕೊತ್ತಿಹಳ್ಳಿ. ರಂಗಸ್ವಾಮಿಯ ಇನ್ನು ಮುಂತಾದವರು ಉಪಸಿತರಿದ್ದರು.