breaking news

ಶಾಸಕರ ವಾಹನ ಅಡ್ಡಗಟ್ಟಿ ಗ್ರಾಮಸ್ಥರ ಪ್ರತಿಭಟನೆ

ಶಾಸಕರ ವಾಹನ ಅಡ್ಡಗಟ್ಟಿ ಗ್ರಾಮಸ್ಥರ ಪ್ರತಿಭಟನೆ
villagers protest against front of MLA’s vehicle

ಲಕ್ಷ್ಮೀಪುರ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವಂತೆ ಶಾಸಕ ಸುರೇಶ್ ಗೌಡ ಅವರ ವಾಹನ ಅಡ್ಡಗಟ್ಟಿ ಪ್ರತಿಭಟಿಸಿದ ಗ್ರಾಮಸ್ಥರು

ತುಮಕೂರು: ನಾವು ವಾಸಿಸುವ ಸ್ಥಳಕ್ಕೆ ನಿವೇಶನ, ರಸ್ತೆ, ಕುಡಿಯುವ ನೀರು,ಚರಂಡಿ ಸೇರಿದಂತೆ ಇನ್ನಿತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಡಿಸಿ ಕಚೇರಿಯಿಂದ ಆಗಮಿಸುತ್ತಿದ್ದ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಅವರ ವಾಹನವನ್ನು ಅಡ್ಡಗಟ್ಟಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಪ್ರತಿಭಟಿಸಿದ ಘಟನೆ ತುಮಕೂರು ನಗರದಲ್ಲಿ ನಡೆದಿದೆ.

ಜಿಲ್ಲೆಯ ತುಮಕೂರು ತಾಲೂಕಿನ ಊರ್ಡಿಗೆರೆ ಹೋಬಳಿ ವ್ಯಾಪ್ತಿಯ ಲಕ್ಷ್ಮಿಪುರ ಎಂಬ ಗ್ರಾಮದಲ್ಲಿ ಹತ್ತು ಹಲವು ವರ್ಷಗಳಿಂದ ಅನೇಕ ಜನರು ನಿವೇಶನ ಇಲ್ಲದೇ ಗುಡಿಸಿಲಿನಲ್ಲಿ ವಾಸಿಸುತ್ತಿದ್ದು ಕೂಡಲೇ ಶಾಸಕರು ಇತ್ತ ಕಡೆ ಗಮನ ಹರಿಸಿ ಮೂಲಭೂತ ಸೌಕರ್ಯಗಳ ಜಾರಿಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೊರ ಬರುತ್ತಿದ್ದ ಗ್ರಾಮಾಂತರ ಶಾಸಕ ಸುರೇಶ್ ಗೌಡ ಅವರನ್ನು ಗೋಗರೆದರು.

ಲಕ್ಷ್ಮೀಪುರ ಗ್ರಾಮಸ್ಥರ ಮನವಿ ಆಲಿಸಿದ ಶಾಸಕ ಸುರೇಶ್ ಗೌಡ ಸ್ಥಳಕ್ಕೆ ಭೇಟಿ ವಾಸ್ತವವಾಗಿ ಪರಿಸ್ಥಿತಿ ಹರಿತು ಮುಂದಿನ ದಿನಗಳಲ್ಲಿ ಅವಶ್ಯಕತೆ ಇರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿವುದು ಎಂದು ಭರವಸೆ ನೀಡಿ ತೆರಳಿದರು.

ಲಕ್ಷ್ಮೀಪುರ ಗ್ರಾಮದ ಲಕ್ಷ್ಮೀದೇವಿ ಅವರು ಮಾತನಾಡಿ ಸುಮಾರು ವರ್ಷಗಳಿಂದ ಸತತವಾಗಿ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದು ನಾವು ವಾಸಿಸುವ ಸ್ಥಳಕ್ಕೆ ಸರಿಯಾದ ರಸ್ತೆಯಿಲ ಅಕ್ಕಪಕ್ಕದ ಜಮೀನುಗಳ ಮಾಲೀಕರು ದಾರಿ ಬೀಡುತ್ತಿಲ್ಲ ನಾವು ಗುಡಿಸಿಲ್ಲಿನಲ್ಲಿ ವಾಸಮಾಡುತ್ತಿದ್ದು ರಾತ್ರಿ ವೇಳೆ ಹಾವು, ಚೇಳು ಸೇರಿದಂತೆ ವಿಷಜಂತುಗಳ ಹಾವಳಿ ಹೆಚ್ಚಿದ್ದು ಇದ್ದರಿಂದಾಗಿ ಒಬ್ಬರು ಹಾವು ಕಡಿದು ಸಾವನ್ನಪ್ಪಿದಾರೆ ಇಷ್ಟಾದರೂ ಯಾರೊಬ್ಬರೂ ಇತ್ತಕಡೆ ಗಮನ ನೀಡಿಲ್ಲ ಈ ಹಿಂದೆ ಶಾಸಕ ಸುರೇಶ್ ಗೌಡ ಅವರು ಭೇಟಿ ನಿಡಿದ್ದ ವೇಳೆ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು ಸುಮಾರು ಇಪ್ಪತ್ತಕ್ಕೊ ಹೆಚ್ಚು ಕುಟುಂಬಗಳು ಇಲ್ಲಿ ವಾಸ ಮಾಡುತ್ತಿದ್ದು ನಾವು ಗುಡಿಸಿಲಿನಲ್ಲಿ ವಾಸಮಾಡುತ್ತಿದ್ದೇವೆ ಹಾಗಾಗಿ ನಮಗೆ ನಿವೇಶನ ಸೇರಿದಂತೆ ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕರಿಗೆ ಮನವಿ ನೀಡಿ ಅವಲತ್ತುಕೊಂಡರು.

ಊರ್ಡಿಗೆರೆ ಹೋಬಳಿಯ ಲಕ್ಷ್ಮೀಪುರ ಚಿಕ್ಕ ಗ್ರಾಮ ಎನ್ನುವ ಕಾರಕ್ಕೆ ಯಾವುದೇ ಅಧಿಕಾರಿಗಳು ಇತ್ತ ಕಡೆ ಗಮನ ಹರಸುತ್ತಿಲ್ಲ ನಮ್ಮ ಹಳ್ಳಿಯನ್ನು ನಿರ್ಲಕ್ಷ್ಯ ಮಾಡಿದ್ದು ಯಾವುದೇ ರೀತಿಯ ಮೂಲ ಭೂತ ಸೌಕರ್ಯಗಳು ನೀಡಿಲ್ಲ ನಮ್ಮ ಸಮಸ್ಯೆ ಕೇಳುವವರಿಲ್ಲ ಎಂದು ಗೊಳಿಟ್ಟರು.

Share this post

About the author

Leave a Reply

Your email address will not be published. Required fields are marked *