breaking news

Crime: ಆಜಾದ್ ಪಾರ್ಕ್ ನಲ್ಲಿ ಪುಂಡರ ಹಾವಳಿ, ಬ್ಲೇಡ್, ಮುಚ್ಚಿನಿಂದ ದಾಳಿ, ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Crime: ಆಜಾದ್  ಪಾರ್ಕ್ ನಲ್ಲಿ ಪುಂಡರ ಹಾವಳಿ, ಬ್ಲೇಡ್, ಮುಚ್ಚಿನಿಂದ ದಾಳಿ, ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

illegal activities in park, negligence of police, public allegations

ತುಮಕೂರು: ನಗರದಲ್ಲಿ ಇತ್ತೀಚಿಗೆ ಯುವಪುಂಡರ ಹಾವಳಿ ಹೆಚ್ಚಾಗಿದ್ದು ಆಯಾಕಟ್ಟಿನ ಭಾಗದಲ್ಲಿ ಯುವಕರ ಗುಂಪು ಸಂಜೆಯಾಗುತ್ತಿದ್ದಂತೆ ನಶೆಯ ಬಲೆಗೆ ಬಿದ್ದು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ 8:30ರ ಸಮಯದಲ್ಲಿ ಪಿ.ಹೆಚ್ ಕಾಲೋನಿಯ ಅಜಾದ್ ಪಾರ್ಕ್ ಬಳಿ ಯುವಕರ ಗುಂಪೊಂದು ನಶೆಯಲ್ಲಿ ತೇಲುತ್ತಾ ವ್ಯಕ್ತಿ ಓರ್ವನನ್ನ ನಿಂದಿಸಿ ಮಚ್ಚು ಹಾಗೂ ಬ್ಲೇಡ್ನಿಂದ ದಾಳಿ ಮಾಡಿರುವ ಘಟನೆ ನಡೆದಿದೆ.

ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಪಿ.ಹೆಚ್ ಕಾಲೋನಿಯ ಅಜಾದ್ ಪಾರ್ಕ್ ನಲ್ಲಿ ಮಹಮ್ಮದ್ ರಫೀಕ್ ಎಂಬುವವರು ವಾಕ್ ಮಾಡುತ್ತಿದ್ದ ವೇಳೆ ಆರೋಪಿಗಳಾದ ಸಾಜಿದ್ ಮತ್ತು ಆತನ ಸ್ನೇಹಿತರು ಮಹಮ್ಮದ್ ರಫೀಕ್ ಅವರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ಏ. ಸೂ.. ಮ… ನೀನು ಇಲ್ಲಿ ವಾಕಿಂಗ್ ಮಾಡಬಾರದು ಎಂದು ಹಲ್ಲೆಗೆ ಯತ್ನಿಸಿದಾಗ ಹಲ್ಲೆಯನ್ನು ತಡೆಯಲು ಬಂದ ಆಯಾಜ್ ಎಂಬುವವರಿಗೆ ಮಚ್ಚಿನಿಂದ ಹೊಡೆದ ಪರಿಣಾಮ ಕೈಗೆ ಗಾಯಗಳಾಗಿದ್ದು ಪ್ರತಿನಿತ್ಯ ಅಜಾದ್ ಪಾರ್ಕ್ ನಲ್ಲಿ ಇಂತಹ ಪುಂಡರ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ಹಾಗೂ ಇಲ್ಲಿನ ಅಕ್ಕಪಕ್ಕದ ಮನೆಯವರಿಗೆ ಕಿರಿಕಿರಿ ಉಂಟಾಗುವುದಲ್ಲದೆ ಇಲ್ಲಿ ವಾಕಿಂಗ್ ಮಾಡುವ ಹೆಣ್ಣು ಮಕ್ಕಳು ಹಾಗೂ ಇತರರಿಗೂ ಸಮಸ್ಯೆಯಾಗುತ್ತಿದೆ ಎಂದು ಹಲ್ಲೆಗೆ ಒಳಗಾದ ಮುಹಮ್ಮದ್ ರಫೀಕ್ ಅವರು ಪ್ರಕರಣ ದಾಖಲಿಸಿ ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಗುರುವಾರ ರಾತ್ರಿ 11:30ರ ಸಮಯದಲ್ಲಿ ಹಲ್ಲೆಗೆ ಒಳಗಾದ ಮಹಮ್ಮದ್ ರಫೀಕ್ ಅವರು ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲು ಮಾಡಿದ ನಂತರ ಪುಂಡರಾದ ಸಾಜಿದ್, ವಾಸಿಂ, ಜುನೈದ್, ಇಳಿಯಾಜ್ ಸೇರಿದಂತೆ ಇತರೆ ಸ್ನೇಹಿತರು ನನ್ನ ತಮ್ಮನ ಮನೆಯ ಹತ್ತಿರ ಹೋಗಿ ಮನೆಗೆ ಕಲ್ಲು ಹೊಡೆದು ನನ್ನ ತಮ್ಮನಾದ ಅಬ್ಜಲ್ ಅವರನ್ನು ಬ್ಲೇಡ್ನಿಂದ ಹಿರಿದು ಅವಾಚ್ಯ ಶಬ್ದಗಳಿಂದ ಮನೆಯ ಹೆಣ್ಣು ಮಕ್ಕಳನ್ನು ನಿಂದಿಸಿದ್ದಾರೆ ಎಂದು ಆರೋಪಿಸಿದರು.

ಹಲ್ಲೆಯ ಘಟನಾ ಸ್ಥಳಕ್ಕೆ ಬೀಟ್ ನಲ್ಲಿದ್ದ ಪೊಲೀಸ್ ಠಾಣೆಯ ಪೇದೆಯೊಬ್ಬರು ಭೇಟಿ ಕೊಟ್ಟ ವೇಳೆ ನಶೆಯಲ್ಲಿ ತೇಲುತ್ತಿದ್ದ ಯುವ ಪುಂಡನೊಬ್ಬ ಪೊಲೀಸ್ ಪೇದೆ ಮೇಲೆ ಲಾಠಿ ಹಿಡಿದು ಹಲ್ಲೆಗೆ ಮುಂದಾಗಿದ್ದು ಕರ್ತವ್ಯ ನಿರತನಾಗಿದ್ದ ಪೊಲೀಸ್ ಪೇದೆಯ ಮೇಲೆ ನಿಂದನೆ ಮಾಡಿದ್ದರು ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಪೊಲೀಸರು ಅದನ್ನು ಮರೆಮಾಚಿ ಪ್ರಕರಣ ದಾಖಲಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಇತ್ತೀಚಿಗೆ ನಗರದಲ್ಲಿ ಜನನಿಬೀಡ ಪ್ರದೇಶ ಮತ್ತು ಪಾರ್ಕ್ ಸೇರಿದಂತೆ ಆಯಾಕಟ್ಟಿನ ಪ್ರದೇಶಗಳಲ್ಲಿ ಪುಂಡರು ಸಂಜೆ 7 ರ ನಂತರ ಮದ್ಯ,ಗಾಂಜಾ, ಸೇರಿದಂತೆ ಇತರೆ ವ್ಯಸನಕ್ಕೆ ಒಳಗಾಗಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಘಟನೆಗಳು ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆ ಮತ್ತು ಭದ್ರತೆಯ ಮೇಲೆ ಹಿಡಿ ಶಾಪ ಹಾಕುತ್ತಿದ್ದಾರೆ.

ಗೃಹ ಸಚಿವರ ತವರು ನೆಲದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರು ಪೊಲೀಸ್ ಇಲಾಖೆ ಕಾಣದೇ ಇರುವುದು, ಯಾವುದೇ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಇನ್ನೊ ಮುಂದಾದರೂ ಜಿಲ್ಲಾ ಪೊಲೀಸ್ ಇಲಾಖೆ ಯಾವ ಕ್ರಮ ವಹಿಸುತ್ತದೆ ಎಂಬುದನ್ನ ಕಾದು ನೋಡಬೇಕಿದೆ.

Share this post

About the author

Leave a Reply

Your email address will not be published. Required fields are marked *