breaking news

ತುಮುಲ್ ಅಧ್ಯಕ್ಷರ ಆಯ್ಕೆ ಅಸಮಾಧಾನ: ಉಸ್ತುವಾರಿ ಸಚಿವರುಗಳ ವಿರುದ್ದ ಶಾಸಕ ವಾಸು ಗರಂ

ತುಮುಲ್ ಅಧ್ಯಕ್ಷರ ಆಯ್ಕೆ ಅಸಮಾಧಾನ: ಉಸ್ತುವಾರಿ ಸಚಿವರುಗಳ ವಿರುದ್ದ ಶಾಸಕ ವಾಸು ಗರಂ

ತುಮಕೂರು: ಇತ್ತೀಚಿನ ರಾಜಕೀಯ ಬೆಳೆವಣಿಗೆಯೊಂದರ ಹಿನ್ನೆಲೆಯಲ್ಲಿ ಮಾದಿಗ ಸಮುದಾಯದ ಪರ ಧ್ವನಿ ಎತ್ತಿದ್ದ ಗುಬ್ವಿ ಕ್ಷೇತ್ರದ ಶಾಸಕ
ಹಾಗೂ ಕೆ.ಎಸ್.ಆರ್.ಟಿ.ಸಿ. ನಿಗಮದ ಅಧ್ಯಕ್ಷ ಎಸ.ಆರ್.ಶ್ರೀನಿವಾಸ್ ಅವರನ್ನು ಅವರ ಗೃಹ ಕಚೇರಿಯಲ್ಲಿ ಚಿತ್ರದುರ್ಗದ ಆದಿಜಾಂಭವ ಕೋಡಿಹಳ್ಳಿ ಬೃಹನ್ಮಠದ ಶ್ರೀ ಷಡಕ್ಷರ ಮುನಿ ದೇಶಿಕೇಂದ್ರ ಸ್ವಾಮೀಜಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

ತುಮುಲ್ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಆದ ದಿಢೀರ ಬೆಳವಣಿಗೆ ಹಿನ್ನೆಲೆಯಲ್ಲಿ ತುಮಕೂರು ಮತ್ತು ಹಾಸನ ಜಿಲ್ಲೆಯ ಉಸ್ತುವಾರಿ
ಸಚಿವರುಗಳ ವಿರುದ್ದ ಗರಂ ಆಗಿದ್ದ ಗುಬ್ಬಿ ಶಾಸಕರಾದ ಎಸ್.ಆರ್.ಶ್ರೀನಿವಾಸ್ ಅವರು, ತುಮುಲ್ ರೀತಿಯಲ್ಲಿಯೇ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮಾದಿಗ ಸಮುದಾಯದ ವ್ಯಕ್ತಿ ಯನ್ನು ನಾಮನಿರ್ದೇಶನ ಮಾಡಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿ ಸಾಮಾಜಿಕ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದರು. ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷರಾಗಿರುವ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಮಾದಿಗ ಸಮುದಾಯದ ಪರ ಧ್ವನಿ ಎತ್ತಿದ ಹಿನ್ನೆಲೆಯಲ್ಲಿ ಇಂದು ಶ್ರೀ ಷಡಕ್ಷರ ಮುನಿಸ್ವಾಮೀಜಿ ಶಾಸಕರ ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ
ಸಲ್ಲಿಸಿದರು.

ಈ ವೇಳೆ ಮಾತನಾಡಿದ ಚಿತ್ರದುರ್ಗದ ಆದಿಜಾಂಭವ ಕೋಡಿಹಳ್ಳಿ ಬೃಹನ್ಮಠದ ಶ್ರೀ ಷಡಕ್ಷರ ಮುನಿ ಸ್ವಾಮೀಜಿ ಈ ರಾಜ್ಯದಲ್ಲಿ ಮಾದಿಗ ಸಮುದಾಯ ಎಲ್ಲಾ ವಿಭಾಗದಲ್ಲಿ ಅತ್ಯಂತ ಹಿಂದೆ ಉಳಿದಿದೆ. ಸ್ವಾತಂತ್ರ÷್ಯ ನಂತರದ ೭೫ ವರ್ಷದಲ್ಲಿ ಅತ್ಯಂತ ನಿಕೃಷ್ಟ ಜೀವನ ನಡೆಸುತ್ತಿದ್ದಾರೆ. ಇದುವರೆಗೂ ಇವರನ್ನು ಎಲ್ಲಾ ರಾಜಕೀಯ ಪಕ್ಷಗಳು ಕೇವಲ ಓಟ್ ಬ್ಯಾಂಕಾಗಿ ಮಾತ್ರ ಬಳಸಿಕೊಂಡಿದ್ದಾರೆ. ಆರ್ಥಿಕ,
ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಎಲ್ಲಾ ರೀತಿಯಿಂದಲೂ ಮಾದಿಗ ಸಮುದಾಯ ಮುಖ್ಯವಾಹಿನಿಗೆ ಬರಬೇಕೆಂದರೆ ಅಧಿಕಾರದಲ್ಲಿ ಇರುವವರು ಸಮುದಾಯದ ಪರವಾಗಿ ದ್ವನಿ ಎತ್ತಬೇಕು. ಆ ಕೆಲಸವನ್ನು ಶಾಸಕರಾದ ಶ್ರೀನಿವಾಸ್ ಮಾಡಿದ್ದಾರೆ.

ಹಾಗಾಗಿ ಅವರನ್ನು ಅಭಿನಂದಿಸುವ ಕೆಲಸವನ್ನು ಶ್ರೀಮಠದ ವತಿಯಿಂದ ಮಾಡಿದ್ದೇವೆ. ಯಾರೇ ನಮ್ಮ ಸಮುದಾಯದ ಪರವಾಗಿ ನಿಂತರೇ ಅವರ ಬೆಂಬಲಕ್ಕೆ ಶ್ರೀಮಠ ನಿಲ್ಲಲಿದೆ ಎಂದರು. ಶಾಸಕರ ಬಳಿ ಎರಡು ಪ್ರಮುಖ ಕೋರಿಕೆಗಳನ್ನು ಮುಂದುಟ್ಟಿದ್ದೇವೆ. ಸುಪ್ರೀA ಕೋರ್ಟಿನ ತೀರ್ಪಿನಂತೆ ಒಳಮೀಸಲಾತಿಯನ್ನು ತ್ವರಿತವಾಗಿ ಜಾರಿಗೆ ತರಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಕು. ಹಾಗೆಯೇ ಎಲ್ಲೆಲ್ಲಿ
ಮಾದಿಗ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲವೋ ಅಂತಹ ಕಡೆಗಳಲ್ಲಿ ಮಾದಿಗ ಸಮುದಾಯಕ್ಕೆ ಅವಕಾಶಗಳನ್ನು ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು ಎಂದು ಕೋರಿದ್ದು, ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶ್ರೀಗಳು ಹೇಳಿದರು.

ಶಾಸಕರು ಹಾಗೂ ಕೆ.ಎಸ್.ಆರ್.ಟಿ.ಸಿ. ನಿಗಮದ ಅಧ್ಯಕ್ಷರೂ ಆಗಿರುವ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ಮಾದಿಗ ಸಮುದಾಯ ಅವಕಾಶಗಳಿಂದ ವAಚಿತವಾಗಿದೆ. ಹಾಗಾಗಿ ನಾನು ಅವರ ಪರವಾಗಿ ಮಾತನಾಡಿದ್ದೆ. ಈ ಹಿನ್ನೆಲೆಯಲ್ಲಿ ಆ ಸಮುದಾಯದ ಪ್ರಮುಖ ಮಠದ ಸ್ವಾಮೀಜಿಯವರು ನನ್ನನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಇವರ ಅಭಿಮಾನಕ್ಕೆ ನಾನು ಚಿರಋಣಿ. ಸಾಮಾಜಿಕ ನ್ಯಾಯವೆಂದರೆ ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ದೊರೆಯಬೇಕು. ಈ ನಿಟ್ಟಿನಲ್ಲಿ ಸ್ವಾಮೀಜಿಯವರು ಮನವಿ ಕುರಿತು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮಾತನಾಡುವುದಾಗಿ ತಿಳಿಸಿದರು ಈ ವೇಳೆ ದಲಿತ ಮುಖಂಡರಾದ ಕೋಡಿಯಾಲ ಮಹದೇವು, ಚೇಳೂರು
ಶಿವನಂಜಪ್ಪ ಸೇರಿದಂತೆ ಅನೇಕ ದಲಿತ ಮುಖಂಡರು ಇದ್ದರು.

Tumul President Elected, MLA Vasu angry against in-charge ministers

Share this post

About the author

Leave a Reply

Your email address will not be published. Required fields are marked *