breaking news

ಸಂವಿಧಾನ ಬದಲಾಯಿಸಿದ್ದು ಯಾರು: ಸಂವಿಧಾನ ಸನ್ಮಾನ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ

ಸಂವಿಧಾನ ಬದಲಾಯಿಸಿದ್ದು ಯಾರು: ಸಂವಿಧಾನ ಸನ್ಮಾನ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ

ಸಂವಿಧಾನ ಸನ್ಮಾನ ಸಮಾರಂಭ: ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಸಂಸ್ಥೆಯ ಆಯೋಜನೆ

ತುಮಕೂರು: ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಸಂಸ್ಥೆಯಿಂದ ಈ ತಿಂಗಳ 27ರಂದು ಸೋಮವಾರ ನಗರದಲ್ಲಿ ಸಂವಿಧಾನ ಸನ್ಮಾನ, ‘ಸಂವಿಧಾನ ಬದಲಾಯಿಸಿದ್ದು ಯಾರು’ ಎಂಬ ಪುಸ್ತಕ ಬಿಡುಗಡೆ ಹಾಗೂ ಸಂವಿಧಾನ ಗ್ರಂಥದ ಶೋಭಾಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಹೆಚ್.ಎ.ಆಂಜಿನಪ್ಪ ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿ, ೨೭ರಂದು ಸೋಮವಾರ ನಗರದ ಬಿಜಿಎಸ್ ವೃತ್ತದಿಂದ ಮಂಗಳಾ ವಾದ್ಯದೊಂದಿಗೆ ಸಂವಿಧಾನ ಗ್ರಂಥದ ಬೃಹತ್
ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ.

ನಂತರ ಬೆಳಿಗ್ಗೆ ೧೦.೩೦ಕ್ಕೆ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆಯುವ ಸಂವಿಧಾನ ಸನ್ಮಾನ ಸಮಾರಂಭವನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಉದ್ಘಾಟಿಸುವರು. ಮಾಜಿ ಉಪ ಮುಖ್ಯಮಂತ್ರಿ, ಲೋಕಸಭಾ ಸದಸ್ಯ ಗೋವಿಂದ ಕಾರಜೋಳ ಅವರು ವಿಕಾಸ್ ಪುತ್ತೂರು ರಚಿಸಿರುವ ‘ಸಂವಿಧಾನ ಬದಲಾಯಿಸಿದ್ದು ಯಾರು?’ ಪುಸ್ತಕ ಬಿಡುಗಡೆ ಮಾಡುವರು.

ಶಾಸಕ ಬಿ.ಸುರೇಶ್‌ಗೌಡ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು. ಲೇಖಕ, ಸಾಮಾಜಿಕ ಕಾರ್ಯಕರ್ತ ವಾದಿರಾಜ್ ವಿಚಾರ ಮಂಡನೆ ಮಾಡುವರು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಮುಖಂಡ ಬಿ.ಹೆಚ್.ಅನಿಲ್‌ಕುಮಾರ್, ಮಾಜಿ ಶಾಸಕ ಸುಧಾಕರಲಾಲ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮತ್ತಿತರರು ಭಾಗವಹಿಸುವರು ಎಂದರು. ರಾಜ್ಯ ಬಿಜೆಪಿ ಕಾರ್ಯಕಾರಿ ಮಂಡಳಿಯ ನಿಕಟಪೂರ್ವ ಸದಸ್ಯ ಪ್ರಭಾಕರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ನಮ್ಮ ಸಂವಿಧಾನವನ್ನು ಜಗತ್ತು ಮೆಚ್ಚಿಕೊಂಡಿದೆ. ನಮ್ಮ ದೇಶದ ಎಲ್ಲಾ ಸಮಾಜವೂ ನಮ್ಮ ಶ್ರೇಷ್ಠ ಸಂವಿಧಾನವನ್ನು ಒಪ್ಪಿದೆ. ಸಂವಿಧಾನ ದೇಶದ ಎಲ್ಲರಿಗೂ ಸಂಬAಧಿಸಿದ್ದು, ಸಂವಿಧಾನದ ಆಶಯಗಳ ಪಾಲನೆ ಪ್ರತಿಯೊಬ್ಬರ ಕರ್ತವ್ಯ. ಸಮಾರಂಭದಲ್ಲಿ ಸಂವಿಧಾನ ಕೃತಿಗೆ ಪೂಜೆ ಸಲ್ಲಿಸಿ ಸನ್ಮಾನಿಸಿ ಗೌರವ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಂವಿಧಾನ ರಚನೆಯಾಗಿ ೭೫ ವರ್ಷವಾಗಿದೆ. ಇದರ ಅಮೃತ ಮಹೋತ್ಸವದ ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಕಾರ್ಯಕರ್ತರು, ವಿವಿಧ ಮೋರ್ಚಾಗಳ ಮುಖಂಡರು, ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಸಾಮಾಜಿಕ ಸಂಘಟನೆಗಳ ಮುಖಂಡರು, ಸಾಹಿತಿಗಳು ಭಾಗವಹಿಸುವರು ಎಂದು ಹೇಳಿದರು.
ಬಿಜೆಪಿ ಎಸ್.ಸಿ.ಮೋರ್ಚಾ ನಗರ ಅಧ್ಯಕ್ಷ ಹನುಮಂತರಾಯಪ್ಪ, ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಮ್ಮ, ಡಿಎಸ್‌ಎಸ್ ಮುಖಂಡ, ಹೊಳಕಲ್ಲು ಗ್ರಾ.ಪಂ ಸದಸ್ಯ ಗಿರೀಶ್, ಮುಖಂಡರಾದ ಮಂಜುನಾಥ್, ನರಸಿಂಹಮೂರ್ತಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Who Changed the Constitution: Book Released at the Constitution Honoring Ceremony

Share this post

About the author

Leave a Reply

Your email address will not be published. Required fields are marked *