breaking news

ಪೊಲೀಸರಿಂದ ಯುವಕನಿಗೆ ಪೆಟ್ಟು: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಪೊಲೀಸರಿಂದ ಯುವಕನಿಗೆ ಪೆಟ್ಟು: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಪೊಲೀಸರು ಹೆಲ್ಮೆಟ್ ಬಳಸಿ ಯುವಕನ ಮೇಲೆ ಹಲ್ಲೆ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ | ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾದ ಘಟನೆ 

ತುಮಕೂರು:  ವಾಹನ ಚಾಲಕರು ರಸ್ತೆ ನಿಯಮ ಉಲ್ಲಂಘಿಸುವಗ ಪೊಲೀಸರು ದಂಡ ಹಾಕುವ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಗಲಾಟೆಗಳು ನಡೆಯುವುದು ಸಹಜವಾಗಿದ್ದು ಕೆಲ ಪ್ರಕರಣಗಳಲ್ಲಿ ಪೊಲೀಸರ ಕಠಿಣ ನಡವಳಿಕೆ ಸಾರ್ವಜನಿಕರ ಮೇಲೆ ಭಾವನಾತ್ಮಕ ಪ್ರಭಾವ ಬೀರುತ್ತದೆ, ಇದು ಹೆಚ್ಚಾಗಿ ಸಮಸ್ಯೆಗಳಿಗೆ ಕಾರಣವಾಗುತ್ತದೆ ಇಂತಹ ಒಂದು ಘಟನೆ ತುಮಕೂರಿನಲ್ಲಿ ನಡಿದಿದೆ.

ನಗರದ ರಿಂಗ್ ರಸ್ತೆಯ ಪಕ್ಕದಲ್ಲಿರುವ ಸರ್ವಿಸ್ ರಸ್ತೆ ಟೊಯೋಟಾ ಶೋ..ರೂಂ ಹತ್ತಿರ ಸೋಮವಾರ ಸಂಜೆ 7:30 ಸಮಯದಲ್ಲಿ ಹೋಂಡಾ ಆಕ್ಟಿವ್ ದ್ವಿಚಕ್ರ ವಾಹನದಲ್ಲಿ ನಾಲ್ಕು ಮಂದಿ ಯುವಕರು ಪ್ರಯಾಣಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಮುಂದೆಯಿಂದ ಬಂದ ಪೊಲೀಸರು ಯುವಕರನ್ನು ತಡೆದು ನಿಯಮ ಉಲ್ಲಂಘನೆಯ ಕುರಿತು ಪ್ರಶ್ನಿಸಿದ್ದಾಗ ವಿವಾದ ಉಂಟಾಗಿ ಯುವಕರು ಮತ್ತು ಪೊಲೀಸ್  ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ, ಫೋನ್ ಮೂಲಕ ವಿಡಿಯೋ ಮಾಡುವ  ಸಂದರ್ಭದಲ್ಲಿ ಒಬ್ಬ ಪೊಲೀಸ್ ಅಧಿಕಾರಿಯು ಯುವಕರಲ್ಲಿ ಒಬ್ಬನ ಮೇಲೆ ಹೆಲ್ಮೆಟ್ ಬಳಸಿ ಹಲ್ಲೆ ಮಾಡಿರುವ ಘಟನೆ ನಡೆದಿದೆ ಇದು ಸಮಾಜವನ್ನು ರಕ್ಷಿಸುವ ರಕ್ಷಕರೇ ಹೀಗೆ ಮಾಡಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಪೊಲೀಸರಿಂದ ಹಲ್ಲೆಗೆ ಒಳಗಾದ ಮುಹಮ್ಮದ್ ಅಬ್ಬಾಸ್ ಮತ್ತು ಆತನ ಸ್ನೇಹಿತ ಇಸ್ಮಾಯಿಲ್ ಸುದ್ದಿದಾರರೊಂದಿಗೆ ಮಾತನಾಡುತ್ತಾ ನಾವು ನಾಕು ಮಂದಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿದ್ದು ಅದು ನಿಯಮ ಉಲ್ಲಂಘನೆ ಇದಕ್ಕೆ ಸಂಬಂಧಿಸಿದಂತೆ ದಂಡ ಹಾಕುವುದು ವಾಹನ ವಶಕ್ಕೆ ಪಡೆಯುವುದು ಪೊಲೀಸರ ಕರ್ತವ್ಯ ಹೌದು ಆದರೆ ನಮ್ಮ ಫೋಟೋ ತೆಗೆದುಕೊಂಡು ನನ್ನ ಮೊಬೈಲ್ ಫೋನ್ ಕಿತ್ತಿಕೊಂಡಿದ್ದು, ಬಾಯಿಗೆ ಬಂದಂತೆ ಮಾತನಾಡಿದ್ದು, ಹೆಲ್ಮೆಟ್ ನಿಂದ ಹಲ್ಲೆ ಮಾಡಿದ್ದು  ಪೊಲೀಸರ ಇಂತಹ ವರ್ತನೆಗೆ ಸಂಬಂಧಿಸಿದಂತೆ ನಾವು ಪ್ರಶ್ನಿಸಿದ ವೇಳೆ ಪೊಲೀಸ್ ಅಧಿಕಾರಿಯೊಬ್ಬರಿಂದ ಹೆಲ್ಮೆಟ್ ಬಳಸಿ ಹಲ್ಲೆ ಮಾಡಿದ್ದಾರೆ ಎಂದು ಹೇಳಿದರು.

ಪೊಲೀಸರು ತಾಳ್ಮೆಯಿಂದ ಮತ್ತು ಜನಸ್ನೇಹಿ ದೃಷ್ಠಿಕೋನದಿಂದ ಕೆಲಸ ಮಾಡಬೇಕು. ಸಾರಿಗೆ ನಿಯಮಗಳನ್ನು ಪಾಲಿಸುವ ಮಹತ್ವವನ್ನು ಸಾರ್ವಜನಿಕರಿಗೆ ಸಮರ್ಥವಾಗಿ ತಿಳಿಸಬೇಕು. ಪೊಲೀಸರು ಜನಸ್ನೇಹಿಯಾಗಿರಬೇಕು, ಈ ಹಿಂದೆ ಇದ್ದ ತುಮಕೂರಿನ ಎಸ್‌ಪಿ ರಾಹುಲ್ ಕುಮಾರ್ ಶಹಪೂರ್ವಾಡ್ ಅವರು ತಮ್ಮ ಅವಧಿಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಸ್ಥಾಪನೆಗೆ ಆದ್ಯತೆ ನೀಡಿದರು, ಸಾರ್ವಜನಿಕರೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಬೇಕು, ಮತ್ತು ಜನರ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವಂತಹ ಪರಿಸರವನ್ನು ನಿರ್ಮಿಸುವಂತೆ ಸಂಕಲ್ಪಿಸಿಕೊಂಡಿದ್ದರು. ಈಗ ನಡೆದಿರುವ ಘಟನೆ ಇದಕ್ಕೆ ವಿರೋಧವಾಗಿ ಕಾಣುತ್ತಿದೆ. ಇಂತಹ ಘಟನೆಯಲ್ಲಿ ಜನರು ಪೊಲೀಸರ ಮೇಲೆ ನಂಬಿಕೆ ಕಳೆದುಕೊಳ್ಳುವ ಸಾಧ್ಯತೆಯಿದ್ದು, ಇದು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ತೋರಿಸುತ್ತದೆ. ಈ ರೀತಿಯ ಘಟನೆಗಳು ನಾಗರಿಕರಲ್ಲಿ ಪೊಲೀಸರು ಹೇಗೆ ವರ್ತಿಸುತ್ತಾರೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಉಂಟುಮಾಡುತ್ತಿವೆ..?

ಯುವಕರ ಬೇಜವಾಬ್ದಾರಿತನ ಈ ಪ್ರಕರಣದಲ್ಲಿ ಎದ್ದು ಕಾಣುತ್ತಿದೆ. ಯುವಕರು ಸಂಚಾರ ನಿಯಮ ಉಲ್ಲಂಘಿಸಿರುವುದು ಮತ್ತು ಪೊಲೀಸರೊಂದಿಗೆ ವಾದಕ್ಕೆ ಮುಂದಾಗಿರುವ ಸಾಧ್ಯತೆ ಮನದಟ್ಟಾಗುತ್ತದೆ. ನಾಲ್ವರು ಒಟ್ಟಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವುದು ಸ್ಪಷ್ಟವಾಗಿಯೂ ಸಂಚಾರ ನಿಯಮ ಉಲ್ಲಂಘನೆಯಾಗಿದೆ. ಇಂತಹ ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರೊಂದಿಗೆ ಯುವಕರು ಶಾಂತಿಯುತವಾಗಿ ಮತ್ತು ಗೌರವಪೂರ್ಣವಾಗಿ ಪೊಲೀಸ್ ನೊಂದಿಗೆ ಸಮಾಲೋಚನೆ ಮಾಡಬೇಕಾಗಿತ್ತು. ಯುವಕರು ವಾದಕ್ಕೆ ಇಳಿದಿರಬಹುದು ಎಂಬುದು ಸಂಶಯಾಸ್ಪದವಾಗಿದೆ.

ಅಂತಿಮವಾಗಿ, ಸಂಬಂಧಪಟ್ಟ ಮೇಲಾಧಿಕಾರಿಗಳು ಈ ರೀತಿಯ ಘಟನೆಗಳನ್ನು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಸಮಗ್ರ ತನಿಖೆ ನಡೆಸಿ, ನಿಯಮಿತ ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯ. ಎರಡೂ ಪಾಳುಗಳು ಕಾನೂನಿನ ಮೂಲಕ ನ್ಯಾಯ ಒದಗಿಸಬೇಕಾಗಿದೆ.

The video of police assaulting a youth has gone viral on social media

Share this post

About the author

Leave a Reply

Your email address will not be published. Required fields are marked *