BJPbreaking newsCongressJDSPolitics PublicPUBLIC

Tumkur City Corporates and Municipal Administration Dept visited the Ajjagondanahalli Waste Disposal Unit.

Tumkur City Corporates and Municipal Administration Dept visited the Ajjagondanahalli Waste Disposal Unit.

ತುಮಕೂರು ಮಹಾನಗರ ಪಾಲಿಕೆ ಕಾಪೆರ್Çರೇಟರ್ ಗಳ ನಿಯೋಗ ಅಜ್ಜಗೊಂಡನಹಳ್ಳಿಗೆ ಭೇಟಿ.

ತುಮಕೂರು ಮಹಾನಗರ ಪಾಲಿಕೆಯ ಮಹಾಪೌರರಾದ ಬಿ ಜಿ ಕೃಷ್ಣಪ್ಪ, ವಿರೋಧ ಪಕ್ಷದ ನಾಯಕ ಜೆ.ಕುಮಾರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್ ಮಹಮದ್, ಪಾಲಿಕೆಯ ಕಾಪೆರ್Çೀರೇಟರ್ ಗಳು, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಹಾಗೂ ತುಮಕೂರು ಮಹಾನಗರ ಪಾಲಿಕೆಯ ಕಮಿಷನರ್ ರೇಣುಕಾರವರ ನೇತೃತ್ವದಲ್ಲಿ ಬುಧವಾರ ಸಂಜೆ ಅಜ್ಜಗೊಂಡನಹಳ್ಳಿ ತಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಘಟಕಕ್ಕೆ ಸಂಬಂಧಿಸಿದಂತೆ, ಕಸವಿಂಗಡನೆ , ತ್ಯಾಜ್ಯ ಸಂಸ್ಕರಣೆ , ಹಾಗೂ ಘಟಕಕ್ಕೆ ಸಂಬಂಧಿಸಿದಂತೆ ಇರುವ ನ್ಯೂನ್ಯತೆಗಳ ಬಗ್ಗೆ ಚರ್ಚೆ ನಡೆಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ತುಮಕೂರು ಮಹಾನಗರ ಪಾಲಿಕೆ ಸದಸ್ಯರಾದ ಮಂಜುನಾಥ್ ಮಾತನಾಡಿ ಅಜ್ಜಗೊಂಡನಹಳ್ಳಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನೂತನವಾಗಿ ಹೊಸ ಯಂತ್ರಗಳನ್ನು ಅಳವಡಿಸಿದ್ದು ಅದರ ಮೂಲಕ ಕಸವಿಂಗಡನೆ ಮಾಡಲಾಗುತ್ತಿದೆ ಹಾಗಾಗಿ ಇದುವರೆಗೂ ನಗರದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ಹಾಗೂ ಇಲ್ಲಿ ವಿಂಗಡನೆ ಮಾಡುತ್ತಿರುವ ವಿಧಾನ ಹಾಗೂ ಗೊಬ್ಬರ ಉತ್ಪಾದನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದರು.

ನಮ್ಮ ಭೇಟಿ ವೇಳೆ ಸಾಕಷ್ಟು ಲೋಪದೋಷಗಳು ಕಂಡು ಬಂದಿದ್ದು ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡದೇ ಇರುವುದು ಕಂಡುಬಂದಿದೆ ಇಲ್ಲಿ ಉತ್ಪತ್ತಿಯಾಗುತ್ತಿರುವ ಪ್ಲಾಸ್ಟಿಕ್ , ನಗರದಲ್ಲಿ ಪಾಲಿಕೆ ವತಿಯಿಂದ ಸೀಸ್ ಮಾಡಲಾದ ಪ್ಲಾಸ್ಟಿಕ್, ವೇ-ಬ್ರಿಡ್ಜ್ ,ಸಿ.ಸಿ ಕ್ಯಾಮೆರಾ ಹಾಗೂ ಕಸ ವಿಂಗಡಣೆ ಮಾಡುವ ಯಂತ್ರ ಖರೀದಿಯಲ್ಲಿ ಅಧಿಕಾರಿಗಳು ನೀಡುತ್ತಿರುವ ಮಾಹಿತಿ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಶೀಘ್ರವೇ ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡಲು ಕೋರಿದೆ ದಾಖಲೆ ನೀಡಲು ಹಿಂಜರಿದರೆ ನಮ್ಮ ಪಾಲಿಕೆ ಸದಸ್ಯರು ಸೇರಿ ಲೋಕಾಯುಕ್ತದಲ್ಲಿ ಕೇಸ್ ದಾಖಲಿಸಲಾಗುವುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ತುಮಕೂರು ಮಹಾನಗರ ಪಾಲಿಕೆಯ ಕಮಿಷನರ್ ಅವರು ಅಜ್ಜಗುಂಡನಹಳ್ಳಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನೂತನವಾಗಿ ಪಾಲಿಕೆ ವತಿಯಿಂದ ಪಾಲಿಕೆ ವತಿಯಿಂದ ನೂತನ ಯಂತ್ರಗಳನ್ನು ಅಳವಡಿಸಲಾಗಿದೆ ಹಾಗಾಗಿ ಪಾಲಿಕೆ ಸದಸ್ಯರ ನಿಯೋಗ ಭೇಟಿ ನೀಡಿದೆ ಎಂದರು.


ಈಗ ಅಳವಡಿಸಿರುವ ಯಂತ್ರವು ರಾಜ್ಯದಲ್ಲೇ ಮಾದರಿ ಯಾಗಿದೆ ಇದರ ಮೂಲಕ ತುಮಕೂರಿನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಂಗಡನೆ ಮಾಡಲಾಗುವುದು ಈಗ ಅಳವಡಿಸಿರುವ ಯಂತ್ರವು ಪ್ರತಿ ದಿನಕ್ಕೆ 100 ಟನ್ ಕಸ ವಿಂಗಡನೆ ಹಾಗೂ ಗೊಬ್ಬರ ಉತ್ಪತ್ತಿ ಮಾಡಲು ಸಹಕಾರಿಯಾಗುತ್ತದೆ 2018ರಲ್ಲಿ ಒಂದು ಯಂತ್ರ ಖರೀದಿ ಮಾಡಿದ್ದು ಈಗ ನೂತನವಾಗಿ 15ನೇ ಹಣಕಾಸಿನಲ್ಲಿ ಮತ್ತೆ ಎರಡು ಹೊಸ ಯಂತ್ರಗಳನ್ನು ಟೆಂಡರ್ ಮೂಲಕ 2.32ಲಕ್ಷ ದ ಯಂತ್ರ ಖರೀದಿ ಮಾಡಲಾಗಿದೆ.

ನೂತನವಾಗಿ ಅಳವಡಿಸಿರುವ ಯಂತ್ರ ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಗುತ್ತಿದೆ ಎಂದರು.ಎಂಜಿಟಿ ಕೋರ್ಟ್ ಅಪ್ರುವಲ್ ಮೂಲಕ ಇಂಡಸ್ಟ್ರೀಸ್ ಹಣದಲ್ಲಿ ಪ್ಲಾಸ್ಟಿಕ್ ಬೈಲ್ ಮಿಷಿನ್ ಅನ್ನು 8ಲಕ್ಷದಲ್ಲಿ ಖರೀದಿ ಮಾಡಲಾಗಿದೆ ಯಂತ್ರವು 200 ಟನ್ ಪ್ಲಾಸ್ಟಿಕ್ ಬೇಲ್ ಮಾಡುವ ಕಾರ್ಯಕ್ಷಮತೆಯನ್ನು ಹೊಂದಿದೆ.ಸುಮಾರು 2 ಕೋಟಿ ವೆಚ್ಚದಲ್ಲಿ ನೂತನ ಶೆಡ್ ನಿರ್ಮಾಣ ಮಾಡಲಾಗಿದೆ ಇದರ ಮೂಲಕ ಕಸವಿಂಗಡನೆ ಹಾಗೂ ಗೊಬ್ಬರ ಉತ್ಪತ್ತಿ ಮಾಡಲು ಶೆಡ್ ಬಳಸಿಕೊಳ್ಳಲಾಗುತ್ತಿದೆ.ಇನ್ನು ತುಮಕೂರು ನಗರದಲ್ಲಿ ಪ್ರತಿ ದಿನಕ್ಕೆ 100 ರಿಂದ 120 ಟನ್ ಕಸ ಉತ್ಪತ್ತಿಯಾಗುತ್ತಿದ್ದು 40 ತನ್ನ ಒಣಕಸ, ಹಸಿ ಕಸ 80 ಟನ್, ಪ್ಲಾಸ್ಟಿಕ್ 10 ಟನ್ ಹಾಗೂ ಮರುಬಳಕೆಯ ಪ್ಲಾಸ್ಟಿಕ್ ಹತ್ತುಟನ್ನಷ್ಟು ಉತ್ಪತ್ತಿಯಾಗುತ್ತಿದೆ ಎಂದರು .ಇನ್ನು ಇಲ್ಲಿ ಉತ್ಪತಿಯಾಗುವ ಕಸವನ್ನು ಟೆಂಡರ್ ದಾರರು ಪ್ರತಿ ಕೆಜಿಗೆ ಒಂದುವರೆ ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಪ್ರತಿ ದಿನಕ್ಕೆ 100 ಟನ್ ನಷ್ಟು ಗೊಬ್ಬರ ಉತ್ಪತ್ತಿಮಾಡುವ ಯಂತ್ರವನ್ನು ಅಳವಡಿಸಲಾಗಿದೆ.


ಇನ್ನು ಸ್ಮಾರ್ಟ್ ಸಿಟಿ ವತಿಯಿಂದ ಒಂದು ಬೋರ್ವೆಲ್, ತಾತ್ಕಾಲಿಕ ರಸ್ತೆ ,ಅರವತ್ತು ಬೀದಿದೀಪಗಳು ಹಾಗೂ 6 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ, ಇನ್ನು ಕೆಟ್ಟು ಹೋಗಿರುವ ಯಂತ್ರಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು ಹಾಗೂ ವೆ ಬ್ರಿಡ್ಜ್ ಮಳೆ ಕಾರಣದಿಂದ ಕುಸಿದಿದ್ದು ಶೀಘ್ರದಲ್ಲೇ ಸರಿಪಡಿಸಲಾಗುವುದು ಒಟ್ಟಾರೆಯಾಗಿ ಪಾಲಿಕೆ ಕಸ ವಿಲೇವಾರಿ ಘಟಕದಿಂದ ಟೆಂಡರ್ ಮೂಲಕ 65 ಲಕ್ಷದಷ್ಟು ಹಣ ಪಾಲಿಕೆಗೆ ಆದಾಯ ಲಭ್ಯವಾಗುತ್ತಿದೆ ಎಂದು ಮಾಹಿತಿ ನೀಡಿದರು.

Share this post

About the author

Leave a Reply

Your email address will not be published. Required fields are marked *