breaking newsPUBLICSOCIAL ACTIVIST

DSS | Protest in Tumkur

DSS | Protest in Tumkur

ಜಿಲ್ಲಾ ದ.ಸಂ.ಸ ಅಸ್ಪುಶ್ಯತಾ ನಿರ್ಮೂಲ ಪ್ರತಿಭಟನಾ ಸಭೆ
“ವಿಧಾನಸಭೆಯಲ್ಲಿ ಅಸ್ಪುಶ್ಯತೆ ಬಗ್ಗೆ ಚರ್ಚೆ ನೆಡೆಯಲಿ”

ತುಮಕೂರು ಕೋಡಿ ಬಸವೇಶ್ವರ ಮುಂಭಾಗ, ಜಿಲ್ಲಾ ದಲಿತ ಸಂಘರ್ಷ ಸಮಿತಿ ಕಛೇರಿಯಲ್ಲಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷರಾದ ಪಿ.ಎನ್.ರಾಮಯ್ಯ ನವರ ಅಧ್ಯಕ್ಷತೆಯಲ್ಲಿ ಅಸ್ಪುಶ್ಯತಾ ನಿರ್ಮೂಲನಾ ಪ್ರತಿಭಟನಾ ಸಭೆ ನಡೆಸಲಾಯಿತು.
ರಾಜ್ಯದಲ್ಲಿ ನಿರಂತರವಾಗಿ ಎಸ್.ಸಿ/ಎಸ್.ಟಿ. ಜನಾಂಗದ ಮೇಲೆ ಅಸ್ಪುಶ್ಯತೆ ಆಚರಣೆ ನಡೆಯುತ್ತಲೇ ಇದೆ. ವಿಧಾನಸಭೆಯಲ್ಲಿ ಎಲ್ಲಾ ಜಾತಿಯವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ನಡೆಸುತ್ತಿರುವುದರ ಬಗ್ಗೆ ಚರ್ಚೆ ನೆಡೆಸಲಾಗುತ್ತದೆ. ನಿರಂತರವಾಗಿ ದಲಿತ ಜನಾಂಗದವರ ಮೇಲೆ ಜಾತಿ ತಾರತಮ್ಯ ಅಸ್ಪುಶ್ಯತೆ ಆಚರಣೆ ನೆಡೆಯುತ್ತದೆ.


ಉದಾ: ಕುಷ್ಠಗಿ ತಾಲ್ಲೂಕಿನಲ್ಲಿ ಎಸ್.ಸಿ. ಜನಾಂಗಕ್ಕೆ ಸೇರದಿ ಮಗು ದೇವಸ್ಥಾನಕ್ಕೆ ಪ್ರವೇಶ ಮಾಡಿದ್ದಕ್ಕೆ ದೇವಸ್ಥಾನದ ಅರ್ಚಕರು / ಆಡಳಿತ ಮಂಡಳಿಯವರು 25,000/- ರೂಗಳ ದಂಡವನ್ನು ವಿಧಿಸಿರುತ್ತಾರೆ. ತಮಿಳುನಾಡಿನಲ್ಲಿ ಸವಣ ್ೀಯರ ಜಾತಿಗೆ ಸೇರಿದ ನಾಯಿ ಕಚ್ಚಿದ ಪರಿಣಾಮ ದಲಿತ ಜನಾಂಗದವರು ಸಾಕಿದ ನಾಯಿಯನ್ನು ಕೊಂದು ಹಾಕಿ ನಾಯಿ ಸಾಕದಂತೆ ಎಚ್ಚರಿಕೆ ನೀಡಿರುತ್ತಾರೆ.


ಚನ್ನರಾಯಪಟ್ಟಣದ ಮುಜರಾಯಿ ಇಲಾಖೆಗೆ ಸೇರಿದ ಚನ್ನಕೇಶವ ದೇವಾಲಯಕ್ಕೆ ಸೇರಿದ ಹೋಟೆಲ್‍ಗೆ ಪರಿಶಿಷ್ಟ ಜಾತಿಯವರು ಪ್ರವೇಶ ಮಾಡುವಂತೆ ಇಲ್ಲ. ಇಂತಹ ದಿನ ನಿತ್ಯ ಹಲವಾರು ಘಟನೆಗಳು ನೆಡೆಯುತ್ತವೆ. ದಲಿತರಿಗೆ ಸ್ವತಂತ್ರ್ಯವಿಲ್ಲ. ದೇಶ ಮತ್ತು ರಾಜ್ಯಗಳ ಎಸ್.ಸಿ./ಎಸ್.ಟಿ. ಜನಾಂಗದವರ ಮೇಲೆ ಜಾತಿ ದೌರ್ಜನ್ಯ ಕ್ರೌರ್ಯ, ಕೊಲೆ, ನೆಡೆಯುತ್ತವೆ. ಸರ್ಕಾರಗಳು ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿವೆ.


ಇಂತಹ ಘಟನೆ ನೆಡೆದಾಗ ಸ್ವಯಂ ಪ್ರೇರಿತವಾಗಿ ನ್ಯಾಯಾಧೀಶರು ಎಸ್.ಸಿ/ಎಸ್.ಟಿ. ಆಯೋಗದ ಅಧ್ಯಕ್ಷರು, ಮಾನವ ಹಕ್ಕು ಆಯೋಗದ ಅಧ್ಯಕ್ಷರು ಕೇಸು, ದಾಖಲಿಸಿಕೊಳ್ಳುವ ಮೂಲಕ ಕಠಿಣ ಶಿಕ್ಷೆ ವಿಧಿಸಬೇಕು. ನ್ಯಾಯಾಲಯಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಸಂವಿಧಾನ ಹಕ್ಕುಗಳನ್ನು ಸಂರಕ್ಷಿಸಬೇಕು. ಅಸ್ಪುಶ್ಯತೆ ಆಚರಣೆ ನೆಡೆಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.

ಎಸ್.ಸಿ/ಎಸ್.ಟಿ ಜನಾಮಗ ಸಂಘಟಿತರಾಗುವ ಮೂಲಕ ಇಂತಹ ಅನಿಷ್ಠ ಪದ್ಧತಿ ವಿರುದ್ಧ ಪ್ರತಿಭಟಿಸಬೇಕು ಎಂದು ಡಿ.ಎಸ್.ಎಸ್. ಜಿಲ್ಲಾ ಅಧ್ಯಕ್ಷರಾದ ಪಿ.ಎನ್.ರಾಮಯ್ಯ ಕರೆ ನೀಡಿದರು. ಈ ದೇಶದ ಪ್ರತಿ ಗ್ರಾಮಗಳಲ್ಲಿಯು ಅಸ್ಪುಶ್ಯತಾ ನಿರ್ಮೂಲನಾ ಜಾಗೃತಿ ಕಾರ್ಯ ಕ್ರಮ ನೆಡೆಸಬೇಕು. ಎಲ್ಲಾ ದೇವಾಲಯದ ಆಡಳಿತ ಮಂಡಳಿ ಮತ್ತು ಅರ್ಚಕರ ಸಭೆ ನೆಡೆಸಬೇಕೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪುಟ್ಟಸ್ವಾಮಿ ಸಲಹೆ ನೀಡಿದರು.


ಚೇಳೂರು ವೆಂಕಟೇಶ್: ಲೋಕಾಸಭೆ, ವಿಧಾನಸಭೆ, ವಿಧಾನಪರಿಷತ್‍ನಲ್ಲಿ ಅಸ್ಪುಶ್ಯತೆ ನಿರ್ಮೂಲನೆ ಬಗ್ಗೆ ಎಂ.ಪಿ., ಎಂ.ಎಲ್.ಎ., ಎಂ.ಎಲ್.ಸಿ., ಸಚಿವರು ಚರ್ಚಿಸಬೇಕು ಎಂದು ಕರೆ ನೀಡಿದರು. ದಲಿತ ಸಂಘಟನೆ ಮುಖಂಡರುಗಳಾದ ಮಹೇಂದ್ರ, ನಟರಾಜು, ಚಂದ್ರಶೇಖರ್.ಡಿ., ಲಕ್ಷ್ಮೀನಾರಾಯಣ, ಮಾರುತಿ, ರಾಜೇಶ್, ಸುನೀಲ್, ವಕ್ಕೋಡಿ ಶಿವಣ್ಣ, ಮಂಜುನಾಥ್, ಹನುಮಂತರಾಜು, ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Share this post

About the author

2 comments

Leave a Reply

Your email address will not be published. Required fields are marked *