ಪೌರ ಕಾರ್ಮಿಕರಿಗೆ ಸನ್ಮಾನ ಮಾಡುವ ವಿಚಾರದಲ್ಲಿ ಗಲಾಟೆ.
ತುಮಕೂರು: ಮಹಾನಗರ ಪಾಲಿಕೆ ವತಿಯಿಂದ ತುಮಕೂರಿನ ಬಾಲಭವನದಲ್ಲಿ ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಪೌರಕಾರ್ಮಿಕರಿಗೆ ಸನ್ಮಾನ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು .ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು .
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಕಾರ್ಪೋರೇಟರುಗಳು ಇಂದಿನ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಸನ್ಮಾನ ಮಾಡುತ್ತಿರುವುದು ಒಳ್ಳೆಯ ವಿಷಯ ಆದರೆ ತುಮಕೂರು ನಗರದ 35 ವಾರ್ಡ್ಗಳಲ್ಲಿ ಪೌರ ಕಾರ್ಮಿಕರು ಹಗಲಿರುಳು ಶ್ರಮ ವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ ಆದರೆ ಕಾಯಂ ಗೊಂಡಿರುವ ಪೌರಕಾರ್ಮಿಕರಿಗೆ ಮಾತ್ರ ಸನ್ಮಾನ ಮಾಡುತ್ತಿರುವುದು ಸರಿಯಲ್ಲ ಆದ್ಯತೆ ಮೇರೆಗೆ ಪೌರಕಾರ್ಮಿಕರನ್ನು ಖಾಯಂಗೊಳಿಸಿದೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಆದರೆ ಇಂದಿನ ಕಾರ್ಯಕ್ರಮದಲ್ಲೂ ಸಹ ಸನ್ಮಾನ ಮಾಡಲು ತಾರತಮ್ಯ ಹಾಗೂ ರಾಜಕೀಯ ಮಾಡುತ್ತಿರುವುದಕ್ಕೆ ತುಮಕೂರು ಮಹಾನಗರ ಪಾಲಿಕೆಯ ವಿರೋಧಪಕ್ಷದ ನಾಯಕ ಜೆ ಕುಮಾರ್ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ನಯಾಜ್ ಅಹಮದ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕರಾದ ಜೆ ಕುಮಾರ್ ರವರು ಪ್ರತಿಕ್ರಿಯಿಸಿ ಪೌರಕಾರ್ಮಿಕರಿಗೆ ನೀಡುತ್ತಿರುವ ಸೌಲಭ್ಯಗಳು ಸಾಕಷ್ಟು ಕಡಿತಗೊಂಡಿದ್ದು ಇನ್ನು ಅಲ್ಪಸ್ವಲ್ಪ ಕಾರ್ಯಕ್ರಮದ ಮೂಲಕ ಪೌರಕಾರ್ಮಿಕರಿಗೆ ಉತ್ತೇಜನ ನೀಡಲಾಗುತ್ತಿದೆ ಆದರೆ ಇಂತಹ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಪಾಲಿಕೆಯ ಅಧಿಕಾರಿಗಳ ನಡೆ ನಿಜಕ್ಕೂ ಖಂಡನೀಯ ಎಂದು ವಿರೋಧ ಪಕ್ಷದ ನಾಯಕ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಹಮ್ಮದ್ ಮಾತನಾಡಿ 2008ರಿಂದ ಇದುವರೆಗೂ ಪೌರಕಾರ್ಮಿಕರಿಗೆ ಸಾಕಷ್ಟು ಸರ್ಕಾರಿ ಸೌಲಭ್ಯಗಳು ದೊರಕುತ್ತಿದ್ದವು ಆದರೆ ದಿನಕಳೆದಂತೆ ಪೌರ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಆಡಿಟ್ ವರದಿ ನೆಪವೊಡ್ಡಿ ಸಾಕಷ್ಟು ಕಾರ್ಯಕ್ರಮಗಳನ್ನು ಕಡಿತಗೊಳಿಸಿದ್ದು ಪೌರಕಾರ್ಮಿಕರ ಕುಟುಂಬಗಳು ಅತಂತ್ರದಲ್ಲಿ ಇವೆ . ಆದರೆ ಇಂತಹ ಸಂದರ್ಭದಲ್ಲಿ ಅವರನ್ನ ಉತ್ತೇಜಿಸುವ ಬದಲು ತಾರತಮ್ಯ ನೀತಿ ಅನುಸರಿಸಿ ಸನ್ಮಾನ ಮಾಡಲಾಗುತ್ತದೆ ಇನ್ನು ಖಾಯಂ ವಿಚಾರದಲ್ಲಿ ಸಾಕಷ್ಟು ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಹಲವು ವರ್ಷಗಳಿಂದ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಕಾಯಂ ಗೊಳಿಸುತ್ತಿಲ್ಲ ಆದರೆ ಹಿರಿಯ ಪೌರ ಕಾರ್ಮಿಕರನ್ನು ಸನ್ಮಾನಿಸಿದೆ ಕಡೆಗಣಿಸಲಾಗುತ್ತಿದೆ ಇದು ನಿಜಕ್ಕೂ ಖಂಡನೀಯ ಎಂದು ನಯಾಜ್ ಅಹಮದ್ ಆಕ್ರೋಶ ವ್ಯಕ್ತಪಡಿಸಿದರು.
ಎರಡು ನಾಲಿಗೆಯ ಕಮಿಷನರ್ | ಸ್ಥಾಯಿ ಸಮಿತಿ ಅಧ್ಯಕ್ಷ … ಆರೋಪ.
ಇನ್ನು ತುಮಕೂರು ಮಹಾನಗರ ಪಾಲಿಕೆ ಕಮಿಷನರ್ ಎರಡು ನಾಲಿಗೆಯ ಕಮಿಷನರ್ ಅವರು ಮುಂದೊಂದು ಹಿಂದೊಂದು ಮಾತನಾಡುತ್ತಾರೆ ಅವರು ಕಚೇರಿಯಿಂದ ಆಚೆಕಡೆ ಒಂದು ಮಾತನಾಡುತ್ತಾರೆ ಆದರೆ ಕಚೇರಿಯಲ್ಲಿ ಒಂದು ಮಾತನ್ನು ಆಡುವ ಮೂಲಕ ಪ್ರತಿ ಹಂತದಲ್ಲೂ ಕೊಟ್ಟಮಾತಿನಂತೆ ನಡೆಯುತ್ತಿಲ್ಲ . ಇದಕ್ಕೆ ಸಂಬಂಧಿಸಿದಂತೆ ಕಮಿಷನರ್ ಅವರನ್ನು ಸಂಪರ್ಕಿಸಿದರೆ ನಾನು ಆಚೆ ಮಾತನಾಡುವ ವಿಷಯಗಳ ಬಗ್ಗೆ ಚರ್ಚೆ ಮಾಡಬೇಡಿ ಅದನ್ನು ಅಲ್ಲಿಗೆ ಬಿಟ್ಟುಬಿಡಿ ಎಂದು ಕಾರ್ಪೊರೇಟರ್ ಗಳ ಬಾಯನ್ನ ಮುಚ್ಚಿಸುತ್ತಾರೆ ಇನ್ನಾದರೂ ಕೊಟ್ಟಮಾತಿನಂತೆ ನಡೆಯಲಿ ಎಂಬುದು ನಮ್ಮ ಆಗ್ರಹವಾಗಿದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಬಿ.ಜಿ ಕೃಷ್ಣಪ್ಪ,ತುಮಕೂರು ಮಹಾನಗರ ಪಾಲಿಕೆಯ ಕಮಿಷನರ್ ರೇಣುಕಾ, ತುಮಕೂರು ಮಹಾನಗರ ಪಾಲಿಕೆಯ ಮೂವತ್ತೈದು ವಾರ್ಡ್ಗಳ ಸದಸ್ಯರು, ಪೌರ ಕಾರ್ಮಿಕರು ಹಾಗೂ ಅಧಿಕಾರಿಗಳ ವರ್ಗ ಕಾರ್ಯಕ್ರಮದಲ್ಲಿ ಹಾಜರಿದ್ದರು.