Crime Story

ತುಮಕೂರು ಬ್ರೇಕಿಂಗ್: ಗೃಹಿಣಿ ಅನುಮಾನಾಸ್ಪದ ಸಾವು, ಪೋಷಕರಿಂದ ಕೊಲೆ ಆರೋಪ

ತುಮಕೂರು ಬ್ರೇಕಿಂಗ್: ಗೃಹಿಣಿ ಅನುಮಾನಾಸ್ಪದ ಸಾವು, ಪೋಷಕರಿಂದ ಕೊಲೆ ಆರೋಪ
Tumkur Breaking: Homemaker’s Suspicious Death; Parents Allege Murder

ತುಮಕೂರು: ನಗರದ ಶಿರಾಗೇಟ್ ಸಮೀಪದ ಹೌಸಿಂಗ್ ಬೋರ್ಡ್ ನಿವಾಸದಲ್ಲಿ 31 ವರ್ಷದ ಗೃಹಿಣಿ ಐಶಾ ಬಾನು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.ಐಶಾ ಬಾನು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನೆ ಕುರಿತು ನಿನ್ನೆ ಸಂಜೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

ಆದರೆ, ಐಶಾ ಬಾನು ಅವರ ಪೋಷಕರು, ಅವರ ಪತಿ ಶಾಜಾದ್ ಹಾಗೂ ಕುಟುಂಬದ ಸದಸ್ಯರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.ಏಳು ವರ್ಷಗಳ ಹಿಂದೆ ಐಶಾ ಬಾನು ಮತ್ತು ಶಾಜಾದ್ ಅವರ ವಿವಾಹವಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದಾರೆ.

ಪತಿ ಮತ್ತೊಂದು ಮದುವೆಯಾಗಲು ಯತ್ನಿಸುತ್ತಿದ್ದು, ಅದಕ್ಕೆ ಐಶಾ ಬಾನು ವಿರೋಧ ವ್ಯಕ್ತಪಡಿಸಿದ್ದರಿಂದ ನಿರಂತರವಾಗಿ ಕಿರುಕುಳ ಮತ್ತು ಹಲ್ಲೆ ನಡೆಸಲಾಗುತ್ತಿತ್ತು ಎಂದು ಪೋಷಕರು ಆರೋಪಿಸಿದ್ದಾರೆ. ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂಬುದಾಗಿಯೂ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಘಟನೆಗೆ ಸಂಬಂಧಿಸಿ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪತಿ ಶಾಜಾದ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Tumkur Breaking: Homemaker’s Suspicious Death; Parents Allege Murder

Share this post

About the author

Leave a Reply

Your email address will not be published. Required fields are marked *