Meter interest loan scammers harassed to poverty family
ಮೀಟರ್ ಬಡ್ಡಿ ಸಾಲಕ್ಕೆ ಸಿಲುಕಿ ಮನನೊಂದು ಆತ್ಮಹತ್ಯೆಗೆ ಯತ್ನ: ಠಾಣೆಗೆ ದೂರು ನೀಡಿದ್ದರು ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ನಿರ್ಲಕ್ಷೆ ತೋರಿದ ಪೊಲೀಸರು
ಮೀಟರ್ ಬಡ್ಡಿ ಸಾಲಕ್ಕೆ ಸಿಲುಕಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣವೊಂದು ತುಮಕೂರು ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ
ತುಮಕೂರು ನಗರದಲ್ಲಿ ಒಂದೇ ಕುಟುಂಬದ ಐವರು ಮೊನ್ನೆ ಅಷ್ಟೇ ಮೀಟರ್ ಬಡ್ಡಿ ಸಾಲಕ್ಕೆ ಬೇಸತ್ತು ಮರಣ ಪತ್ರ ಬರೆದು ಆತ್ಮಹತ್ಯೆಗೆ ಶರಣಾದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತುಮಕೂರು ನಗರದ ವಿಜಯನಗರ ಬಡಾವಣೆಯಲ್ಲಿ ವಾಸಿಸುತ್ತಿರುವ ಪ್ರಭಾಕರ್ ಎಂಬ ವ್ಯಕ್ತಿ ತನ್ನ ಅಕ್ಕನೊಂದಿಗೆ ಆಟೋ ಬಾಡಿಗೆ ನೀಡುತ್ತಾ ತನ್ನ ಜೀವನ ಸಾಗಿಸುತ್ತಿದ್ದು ಅವರ ಕಷ್ಟದ ನಿಮಿತ್ತ ತುಮಕೂರಿನ ಖಾಸಗಿ ವ್ಯಕ್ತಿಯೊಬ್ಬರ ಬಳಿ 15 ಸಾವಿರ ರೂಪಾಯಿ ಹಣವನ್ನು ಸಾಲವಾಗಿ ಪಡೆದು ನಂತರ ಹಣ ನೀಡಿದ ವ್ಯಕ್ತಿಯು ನಾನು ಸುಮ್ಮನೆ ನಿನಗೆ ಹಣ ನೀಡಲಿಲ್ಲ ವಾರದ ಬಡ್ಡಿ ರೂಪದಲ್ಲಿ ಹಣ ನೀಡಿರುವುದು ಹಾಗಾಗಿ ನಿನು ಹಣ ನೀಡುವವರೆಗೆ ನಿನ್ನ ಆಟೋ ನಮ್ಮ ಬಳಿ ಇರಲೆಂದು ತೆಗೆದುಕೊಂಡು ಹೋದರು.
ಜೀವನಕ್ಕೆ ಆಧಾರ ಸ್ಥಂಭ ವಾಗಿದ್ದ ಆಟೋಗಳನ್ನು ತೆಗೆದುಕೊಂಡು ಹೋದರು ನಾವುಗಳು ಎಷ್ಟೇ ಗೋಗರೆದು ಕೇಳಿದರು ನಮಗೆ ಆಟೋವನ್ನು ಹಿಂತಿರುಗಿಸಿ ನೀಡಲ್ಲಿಲ್ಲಾ
ನನ್ನ ಆಟೋವನ್ನು ಕೇಳಲು ಹೋದರೆ ನೀವು ನಮಗೆ ಒಂದುವರೆ ಲಕ್ಷದಿಂದ ಎರಡು ಲಕ್ಷ ಹಣ ನೀಡುವವರೆಗೆ ನಿಮಗೆ ಆಟೋವನ್ನು ಹಿಂತಿರುಗಿಸಿ ಕೊಡುವುದಿಲ್ಲ ಎಂದು ನಮ್ಮನ್ನು ಬೆದರಿಸಿದರು. ಮತ್ತೂಂದು ಕಡೆ ಪೋಲೀಸ್ ಠಾಣೆಗೆ ದೂರು ನೀಡಿದರೆ ನಮಗೆ ನ್ಯಾಯ ಕೊಡಿಸುವಲ್ಲಿ ಪೋಲಿಸ್ ಇಲಾಖೆ ನಿರ್ಲಕ್ಷವಹಿತ್ತಿದೆ ನಾವು ಯಾರ ಬಳಿ ನ್ಯಾಯ ಕೇಳಬೇಕು ಎಂಬುದು ತಿಳಿಯದೆ ನಾನು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಯತ್ನಿಸಿದೆ ಎಂದು ತಿಳಿಸಿದರು.
ನಗರದಲ್ಲಿ ಮೀಟರ್ ಬಡ್ಡಿದಾರರ ಹಾವಳಿಯಿಂದಾಗಿ ತುಮಕೂರು ನಗರದಲ್ಲಿ ಅನೇಕ ಕುಟುಂಬಗಳು ಭಯದ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದು ಇಂತಹ ಘಟನೆಗಳು ನೇಡೆಯುತ್ತಿರುವುದು ನಿಜಕ್ಕೂ ಅಘಾತಕಾರಿ ಘಟನೆಗಳಾಗಿವೆ ಸಾಲ ತೀರಿಸಲು ಸಾಧ್ಯವಾಗದೇ ತನ್ನ ವಸ್ತುಗಳನ್ನು ಕಳೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗೃಹಸಚಿವರ ತವರುರಲ್ಲಿ ನಡೆದಿದೆ.
ಇಂತಹ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಮೀಟರ್ ಬಡ್ಡಿ ದಂಧೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ ಪರಮೇಶ್ವರ್ ರವರು ಸೂಚನೆ ನೀಡಿದ ಬೆನ್ನಲೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.