Negligence of railway department officials Passengers scrambling for Tickets
ಬೆಂಗಳೂರು: ಗ್ರಾಮಾಂತರದ ಸೋಲದೇವನಹಳ್ಳಿಯ ರೈಲ್ವೆ ಸ್ಟೇಷನ್ ನಲ್ಲಿ ಟಿಕೆಟ್ ಇಲ್ಲದ ಪರದಾಡಿದ ಜನ.
ಬೆಂಗಳೂರಿನ ಯಶವಂತಪುರದಿಂದ ತುಮಕೂರು ಅರಸೀಕೆರೆ ಕಡೆಗೆ ರಾತ್ರಿ ಸುಮಾರು 07:30 ಸಮಯಕ್ಕೆ ತೆರಳುವ ಪ್ಯಾಸೆಂಜರ್ ರೈಲು ಗಾಡಿ ಬೆಂಗಳೂರು ಗ್ರಾಮಾಂತರದ ಸೋಲದೇವನಹಳ್ಳಿಯ ನಿಲ್ದಾಣ ಗೆ ಸುಮಾರು 08:00 ಗಂಟೆಗೆ ಬರುತ್ತದೆ ಆ ಸಂದರ್ಭದಲ್ಲಿ ಟಿಕೆಟ್ ಕೌಂಟರ್ ನಲ್ಲಿ ಟಿಕೆಟ್ ನೀಡುವ ರೈಲ್ವೆ ಸಿಬ್ಬಂದಿ ಮಾಯಾವಾಗಿ ಟಿಕೆಟ್ ರೈಲ್ವೆ ಕೌಂಟರ್ ಮುಚ್ಚಿ ಕೊಂಡು ತೆರಳಿದ ಕಾರಣ ಪ್ರಯಾಣಿಕರು ಪರದಾಡಿದ ಪರಿಸ್ಥಿತಿ ನಿರ್ಮಾಣ ವಾಯಿತ್ತು ರೈಲ್ವೆ ಇಲಾಖೆ ಅಧಿಕಾರಿಗಳ ನಿರ್ಲಕ್ಷೆ, ಸರ್ಕಾರಕ್ಕೆ ನಷ್ಟವುಂಟಾಗಿ ರೈಲಿನಲ್ಲಿ ಪ್ರಯಾಣಿಕರಿಗೆ ತೊಂದರೆಯುಂಟಾಗಿ ಸಾರ್ವಜನಿಕರು ಪರದಾಡಿದ್ದಾರೆ.
ಕಣ್ಣಿಗೆ ಕಾಣುತ್ತಿರುವ ಒಂದು ಗ್ರಾಮದ ರೈಲ್ವೆ ಸ್ಟೇಷನ್ ನಲ್ಲಿ ಈ ಘಟನೆ ಕಂಡು ಬಂದಿದೆ ಆದರೆ ಕೂಡಲೇ ಸಂಬಂಧಪಟ್ಟ ರೈಲ್ವೆ ಇಲಾಖೆ ಅಧಿಕಾರಿಗಳು ಪ್ರತಿಯೊಂದು ರೈಲ್ವೆ ನಿಲ್ದಾಣದಲ್ಲಿ ಪರಿಶೀಲಿಸಿ ನಿರ್ಲಕ್ಷ ತೋರುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ವಹಿಸಬೇಕಾಗಿದೆ.
ಸೋಲದೇವನಹಳ್ಳಿ ಜಂಕ್ಷನ್ ಅಲ್ಲಿ ಟಿಕೆಟ್ ಕೌಂಟರ್ ನಲ್ಲಿ ಟಿಕೆಟ್ ನೀಡುವ ರೈಲ್ವೆ ಸಿಬ್ಬಂದಿ ಸರಿಯಾಗೆ ಬರುವುದಿಲ್ಲ, ಒಂದ್ ಸತಿ ಇರ್ತಾರೆ ಒಂದ್ ಸತಿ ಇರೋದಿಲ್ಲ, ರೈಲ್ವೆ ಇಲಾಖೆ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಸಾರ್ವಜನಿಕರು ತಿಳಿಸಿದರು. ಪ್ರಯಾಣಿಕರು ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಾಣಿಸಿದ್ದರೆ ಟಿಟಿ ಬಂದು ಟಿಕೆಟ್ ವಿಚಾರಿಸಿದಾಗ ಟಿಕೆಟ್ ಇಲ್ಲದೆ ದಂಡ ಕಟ್ಟಬೇಕಾಗಿದೆ ಎಂದು ಸಾರ್ವಜನಿಕರು ಹೈರಾಣವಾಗಿದ್ದರು. ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕಾಗಿದೆ.
Global Gold Company