breaking newsJDSPUBLIC

MLA Gowrishankar drove about Rs 22 crore worth of development works to the rural

MLA Gowrishankar drove about Rs 22 crore worth of development works to the rural

ತುಮಕೂರು: ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗೆ ಪಣತೊಟ್ಟಿರುವ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರು ಶೀತಗಾಳಿ, ಮಳೆಯನ್ನೂ ಲೆಕ್ಕಿಸದೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಕೋಡಿಬಿದ್ದ ಕೆರೆಗಳಿಗೆ ಗಂಗಾಪೂಜೆ ನೆರವೇರಿಸಿ, ಮಹಿಳೆಯರಿಗೆ ಬಾಗಿನ ಕೊಡುವ ಮೂಲಕ ಗ್ರಾಮಾಂತರ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡಲು ಮುಂದಾಗಿದ್ದಾರೆ.


ದೇವರಾಯನದುರ್ಗ ಬೆಟ್ಟದಲ್ಲಿ ಸಮಗ್ರ ಅಭಿವೃದ್ದಿಗೆ 18 ಕೋಟಿ ರೂ.ಗಳ ಕಾಮಗಾರಿಯನ್ನು ಸಿ.ಸಿ ರಸ್ತೆ, ಡಾಂಬರೀಕರಣ, ಸಿ.ಸಿ ಚರಂಡಿ ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಹಾಗೂ ಭಕ್ತಾಧಿಗಳಿಗೆ ಅನುಕೂಲ ಕಲ್ಪಿಸಿಕೊಡುವುದರ ಜೊತೆಗೆ ದೇವರಾಯನದುರ್ಗ ಬೆಟ್ಟದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಪ್ರವಾಸಿ ಮಂದಿರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ಶಾಸಕ ಡಿ.ಸಿ.ಗೌರಿಶಂಕರ್ ನೆರೆವೇರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಛಳಿ, ಮಳೆ ಗಾಳಿ ಎನ್ನದೇ ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಪಡಿಸುವುದೇ ನನ್ನ ಮುಖ್ಯ ಗುರಿಯಾಗಿದ್ದು, ಇದರ ಜೊತೆಗೆ ಕ್ಷೇತ್ರದ ನೀರಾವರಿ ಅಭಿವೃದ್ಧಿಗೂ ಶ್ರಮಿಸುತ್ತಿರುವುದಾಗಿ ತಿಳಿಸಿದರು.


ಕೊರೋನ ಮೊದಲನೇ ಅಲೆ ಮತ್ತು ಎರಡನೇ ಅಲೆಯಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ಧೇಶದಿಂದ ಇಡೀ ಕ್ಷೇತ್ರದ ಜನತೆಗೆ ಸ್ವಂತ ಖರ್ಚಿನಲ್ಲಿ ಆಹಾರ ಪದಾರ್ಥಗಳ ಕಿಟ್ ಜೊತೆಗೆ ರೈತರಿಂದ ತರಕಾರಿ ಖರೀದಿಸಿ ಕ್ಷೇತ್ರದ ಜನತೆಗೆ ವಿತರಿಸಿದ್ದೇನೆ. ಇಷ್ಟೇ ಅಲ್ಲದೇ ಬಡವರಿಗೆ ಉಚಿತ ಔಷಧಿಗಳನ್ನೂ ಸಹ ವಿತರಿಸಿ ಸೇವೆ ಸದಾ ಸಿದ್ಧ ಎಂಬುದನ್ನು ತೋರಿಸಿದ್ದೇನೆ ಎಂದು ಹೇಳಿದರು.


ಕೋಡಿಬಿದ್ದ ಕೆರೆಗಳಿಗೆ ಗಂಗಾಪೂಜೆ:
ಇಪ್ಪತ್ತು ವರ್ಷಗಳ ಬಳಿಕ ಊರ್ಡಿಗೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆಸರುಮಡು ಗ್ರಾಮದ ಜೋಗಿಕಟ್ಟೆ ಕೆರೆ, ದುರ್ಗದಹಳ್ಳಿ ಕೆರೆಗಳು ಹಾಗೂ ಕೋಳಿಹಳ್ಳಿ ಕೆರೆಗಳು ತುಂಬಿ ಕೋಡಿ ಹರಿದಿದ್ದು, ಗೂಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಚನ್ನಿಗಪ್ಪನಪಾಳ್ಯ ಗ್ರಾಮದ ಕೆರೆಗೆ ಕಾಲುವೆ ಮೂಲಕ ಹೇಮಾವತಿ ನೀರನ್ನು ಹರಿಸುವ ಮೂಲಕ ಕೋಡಿ ಹರಿಸಿ, ನಾಲ್ಕು ಕೆರೆಗಳಿಗೂ ಗಂಗಾ ಪೂಜೆ ನೆರವೇರಿಸಿ ಕೆರೆಗೆ ಬಾಗಿನ ಅರ್ಪಿಸಿದರು.


ಗ್ರಾಮಾಂತರಕ್ಕೆ ವೃಷಭಾವತಿ:
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಿ.ಸಿ.ಗೌರಿಶಂಕರ್, ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ಕೃಷಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರೈತರಿಗೆ ಅಗತ್ಯವಾಗಿ ಬೇಕಾದ ನೀರಿನ ಸೌಕರ್ಯ ಕಲ್ಪಿಸಲು ಮುಂದಾಗಿದ್ದು, ವೃಷಭಾವತಿ ನದಿ ನೀರನ್ನು ಗ್ರಾಮಾಂತರಕ್ಕೆ ತಂದು ಗ್ರಾಮಾಂತರ ಕ್ಷೇತ್ರದ ಜನತೆಗೆ ಅನುಕೂಲ ಕಲ್ಪಿಸುವ ಉದ್ಧೇಶ ಹೊಂದಿರುವುದಾಗಿ ತಿಳಿಸಿದರು.


ಗಂಗಾಪೂಜೆ ಕಾರ್ಯಕ್ರಮಕ್ಕೆ ಭಾಗವಹಿಸಿದ ಸುಮಾರು 4000ಕ್ಕೂ ಹೆಚ್ಚು ಮಹಿಳೆಯರಿಗೆ ಗ್ರಾಮಾಂತರ ಮನೆ ಮಗನಾಗಿ ಸೀರೆ, ಅರಿಶಿಣ-ಕುಂಕುಮ, ಬಳೆ ನೀಡುವ ಮೂಲಕ ಶಾಸಕರು ಬಾಗಿನ ನೀಡಿದರು.


ಹಾಲುಗೊಂಡನಹಳ್ಳಿ ಹಾಗೂ ಬೆಟ್ಟಶೀತಕಲ್ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನೆ ಮಾಡಿ ಎರಡು ಗ್ರಾಮಗಳಲ್ಲಿ ಸುಮಾರು 600 ವಾಟರ್ ಕ್ಯಾನ್ ಹಾಗೂ 600 ಸೀರೆಗಳನ್ನು ವಿತರಿಸಿದರು. ಆಲದಮರಪಾಳ್ಯ, ವಿಟ್ಟರಾವುತ್ತನಹಳ್ಳಿ, ಜನತಾಕಾಲೋನಿ, ಬೇವಿನಳ್ಳಿಪಾಳ್ಯ ಮತ್ತು ಊರ್ಡಿಗೆರೆ ಟೆಂಟ್‍ಗಳಲ್ಲಿ ಸಿಸಿ ರಸ್ತೆ, ಸಿಸಿ ಚರಂಡಿ, ಕಾಮಗಾರಿಗೆ ಗುದ್ದಲಿಪೂಜೆ ನೆರೆವೇರಿಸಿದರು.


ಎಲ್ಲಾ ಕಾರ್ಯಕ್ರಮಕ್ಕೆ ಭಾಗವಹಿಸಿದ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಶಾಸಕರು ಕಲ್ಪಿಸಿದ್ದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ರಾಮಚಂದ್ರಪ್ಪ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಹಾಲನೂರು ಅನಂತ್ ಕುಮಾರ್, ಗೂಳೂರು ಜಿಪಂ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಶ, ವಿಷ್ಣುವರ್ಧನ್, ತನ್ವೀರ್, ವಿಜಯ್ ಕುಮಾರ್, ಸುವರ್ಣಗಿರಿ ಕುಮಾರ್, ಪಿ.ಎಲ್.ಆರ್. ರಮೇಶ್ ಸೇರಿದಂತೆ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.

Share this post

About the author

Leave a Reply

Your email address will not be published. Required fields are marked *