ಕೆಪಿಸಿಸಿ ಕಾರ್ಮಿಕ ವಿಭಾಗದ ನೂತನ ಅಧ್ಯಕ್ಷರಾಗಿ ಜಿ.ಎಸ್.ಮಂಜುನಾಥ್ ಅವರು ನೇಮಕಗೊಂಡ ಕಾರ್ಯಕ್ರಮದಲ್ಲಿ ತುಮಕೂರು ಕಾಂಗ್ರೆಸ್ ಮುಖಂಡ ಡಾ.ಇಮ್ತಿಯಾಜ್ ಅಹಮದ್ ಭಾಗವಹಿಸಿದ್ದರು.
ತುಮಕೂರು:ಕರ್ನಾಟಕ ಪ್ರದೇಶ ಕಾಂಗ್ರೆಸ್‍ನ ಅಸಂಘಟಿತ ವಲಯದ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಅವರ ಪದಗ್ರಹಣ ಸಮಾರಂಭ ಬೆಂಗಳೂರಿನ ಟೌನ್‍ಹಾಲ್‍ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಎಐಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಷ್ಟ್ರಾಧ್ಯಕ್ಷ ಅರವಿಂದ್‍ಸಿಂಗ್,ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್,ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ,ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಹಾಗೂ ಎಂ.ಎಲ್.ಸಿ.ಚುನಾವಣಾ ಟಿಕೇಟ್ ಆಕಾಂಕ್ಷಿ ಡಾ.ಇಂತಿಯಾಜ್ ಅಹಮದ್,ಮಾ.ನ.ಗುರುದತ್ ಮತ್ತಿತರರು ಭಾಗವಹಿಸಿದ್ದರು.